ADVERTISEMENT

ಗಲಾಟೆ ಮಾಡಿಸುವುದು ಕುಮಾರಸ್ವಾಮಿಗೆ ಶೋಭೆ ತರುವಂತದ್ದಲ್ಲ: ಯೋಗೇಶ್ವರ್

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 10:00 IST
Last Updated 1 ಅಕ್ಟೋಬರ್ 2022, 10:00 IST
ಸಿ.ಪಿ. ಯೋಗೇಶ್ವರ್‌ ಮತ್ತು ಎಚ್‌.ಡಿ.ಕುಮಾರಸ್ವಾಮಿ
ಸಿ.ಪಿ. ಯೋಗೇಶ್ವರ್‌ ಮತ್ತು ಎಚ್‌.ಡಿ.ಕುಮಾರಸ್ವಾಮಿ   

ರಾಮನಗರ: ಚನ್ನಪಟ್ಟಣದಲ್ಲಿ ಶನಿವಾರ ನಡೆದ ಗಲಾಟೆಗೆ ಜೆಡಿಎಸ್ ಗೂಂಡಾಗಳೇ ಕಾರಣ. ಇದು ಕುಮಾರಸ್ವಾಮಿ ರಾಜಕೀಯ ಅಧಃಪತನಕ್ಕೆ ಸಾಕ್ಷಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

'ಜೆಡಿಎಸ್ನ ನರಸಿಂಹಮೂರ್ತಿ ಸೇರಿದಂತೆ ಐದಾರು ಕಾರುಗಳಲ್ಲಿ ಹೊರಗಿನಿಂದ ಬಂದವರು ನನಗೆ ಮುತ್ತಿಗೆ ಹಾಕಿ ಕಾರಿನ ಮೇಲೆ ಮೊಟ್ಟೆ ಎಸೆದಿದ್ದಾರೆ. ಹೀಗೆ ಹೊರಗಿನಿಂದ ಕರೆಸಿ ಗಲಾಟೆ ಮಾಡಿಸುವುದು ಕುಮಾರಸ್ವಾಮಿಗೆ ಶೋಭೆ ತರುವಂತದ್ದಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

'ಕುಮಾರಸ್ವಾಮಿ ನಡೆಗೆ ಬೇಸತ್ತು ಚನ್ನಪಟ್ಟಣದಲ್ಲಿ ಜೆಡಿಎಸ್ ನ ಬಹುತೇಕ ಮುಖಂಡರು ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದಾರೆ. ಇದನ್ನು ಸಹಿಸಲು ಅವರಿಗೆ ಆಗುತ್ತಿಲ್ಲ' ಎಂದು ದೂರಿದರು.

ADVERTISEMENT

'ನಾನು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತಂದರೆ ಅದಕ್ಕೆ ತಡೆ ಒಡ್ಡುತ್ತಿದ್ದಾರೆ. ಮುಂದೆ ಅವರೂ ತಾಲ್ಲೂಕಿಗೆ ಬರುತ್ತಾರೆ. ಆದರೆ ನಾವು ಹೀಗೆ ಮಾಡುವುದಿಲ್ಲ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.