ADVERTISEMENT

ಜಿಂದಾಲ್‌ ಬೆಂಬಲಕ್ಕೆ ‘ಎಫ್‌ಕೆಸಿಸಿಐ’

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 18:50 IST
Last Updated 17 ಜೂನ್ 2019, 18:50 IST

ಬೆಂಗಳೂರು: ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘವು ಜಿಂದಾಲ್‌ ಬೆಂಬಲಕ್ಕೆ ನಿಂತಿದೆ.

‘ರಾಜ್ಯದಲ್ಲಿ ಹೂಡಿಕೆ ಮಾಡಲು ಆಹ್ವಾನಿಸಿದ ಮೇಲೆ, ಲೀಸ್‌ ಕಮ್ ಸೇಲ್‌ ಆಧಾರದ ಮೇಲೆ ನೀಡಿರುವ ಭೂಮಿಯನ್ನು ಅವರಿಗೆ ಮಾರಬೇಕು. ಗುತ್ತಿಗೆ ಅವಧಿ ಮುಗಿದ ಬಳಿಕ ಅದನ್ನು ಮೊದಲೇ ನಿಗದಿಪಡಿಸಿದ ಬೆಲೆಗೆ ಮಾರಾಟ ಮಾಡಬೇಕು. ಹೀಗೆ ಮಾಡದೇ ಇದ್ದರೆ ಹೂಡಿಕೆದಾರರು ರಾಜ್ಯಕ್ಕೆ ಬರುವುದಿಲ್ಲ. ಕೈಗಾರಿಕೆಗಳು ಅಭಿವೃದ್ಧಿಯಾಗದೇ ಇದ್ದರೆ, ರಾಜ್ಯದ ವರಮಾನಕ್ಕೆ ಪೆಟ್ಟು ಬೀಳುತ್ತದೆ. ನಿರುದ್ಯೋಗ ಪ್ರಮಾಣವೂ ಹೆಚ್ಚಾಗುತ್ತದೆ' ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಸುಧಾಕರ ಶೆಟ್ಟಿ ತಿಳಿಸಿದರು.

‘1995ರಲ್ಲಿ ಕರ್ನಾಟಕ ಸರ್ಕಾರ ಮತ್ತು ಜೆಎಸ್‌ಡಬ್ಲ್ಯು ಒಪ್ಪಂದಕ್ಕೆ ಸಹಿ ಹಾಕಿದವು. 2006ರಲ್ಲಿ ಜೆಡಿಎಸ್‌–ಬಿಜೆಪಿ ಸಮ್ಮಿಶ್ರ ಸರ್ಕಾರ ಎರಡು ಹಂತಗಳಲ್ಲಿ ಜಿಂದಾಲ್‌ಗೆ ಭೂಮಿ ಮಂಜೂರು ಮಾಡಿತು. ಇದು ಸರ್ಕಾರಿ ಭೂಮಿಯಾಗಿದೆ. ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿರುವ ಭೂಮಿ ಅಲ್ಲ.

ADVERTISEMENT

‘2006ರಲ್ಲಿ ಮೊದಲ ಹಂತದಲ್ಲಿ 2000.58 ಎಕರೆ ಭೂಮಿ ಲೀಸ್‌ ಕಮ್‌ ಸೇಲ್‌ನಲ್ಲಿ 10 ವರ್ಷಗಳ ಅವಧಿಗೆ ಪ್ರತಿ ಎಕರೆಗೆ ₹ 90 ಸಾವಿರದಂತೆ ನೀಡಲಾಯಿತು. 2007ರಲ್ಲಿ ಎರಡನೇ ಹಂತದಲ್ಲಿ 1,666.73 ಎಕರೆ ಭೂಮಿಯನ್ನು 10 ವರ್ಷಗಳ ಅವಧಿಗೆ ಪ್ರತಿ ಎಕರೆಗೆ ₹ 1.22 ಲಕ್ಷಕ್ಕೆ ನೀಡಲಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.