ADVERTISEMENT

ಜಿಂದಾಲ್ ಸಂಪೂರ್ಣ ಲಾಕ್ ಡೌನ್ ಆಗಲಿ: ಕಾಂಗ್ರೆಸ್ ಮುಖಂಡ ಕುಡುತಿನಿ ಶ್ರೀನಿವಾಸ್

ಜಿಂದಾಲ್ ಸೀಲ್ ಡೌನ್: ಜಿಲ್ಲಾಡಳಿತ ವಿಫಲ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 11:31 IST
Last Updated 26 ಜೂನ್ 2020, 11:31 IST
ಜಿಂದಾಲ್ ಸಂಪೂರ್ಣ ಬಂದ್ ಮಾಡಲು ಆಗ್ರಹ
ಜಿಂದಾಲ್ ಸಂಪೂರ್ಣ ಬಂದ್ ಮಾಡಲು ಆಗ್ರಹ   

ಬಳ್ಳಾರಿ: ಜಿಲ್ಲಾಡಳಿತವು ಜಿಂದಾಲ್ ಕಾರ್ಖಾನೆಯನ್ನು ಸೀಲ್ ಡೌನ್ ಮಾಡುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ಮುಖಂಡ ಕುಡುತಿನಿ ಶ್ರೀನಿವಾಸ್ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರಿಪಬ್ಲಿಕ್ ಆಫ್ ಜಿಂದಾಲ್ ಶುರುವಾಗಿದೆ‌. ಜಿಲ್ಲಾಡಳಿತ ಮಾಡಿರುವ ಸೀಲ್ ಡೌನ್ ನಿಯಮಗಳು ಯಾವುದೂ ಅಲ್ಲಿ ಪಾಲನೆಯಿಲ್ಲ. ಜಿಲ್ಲಾಧಿಕಾರಿ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅಗತ್ಯ ಕ್ರಮಗಳನ್ನೂ ಕೈಗೊಂಡಿಲ್ಲ. ಹಾಗಾಗಿ ತಕ್ಷಣ ಜಿಂದಾಲ್ ಕಾರ್ಖಾನೆಯನ್ನು ಎರಡು ತಿಂಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡಲೇಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿಗಳು ಜಿಂದಾಲ್ ನಲ್ಲಿರುವ ಕೋವಿಡ್ ಪ್ರಕರಣಗಳ ಕುರಿತು ಸ್ಪಷ್ಟ ಮಾಹಿತಿ ಕೊಡದೇ ಜನರನ್ನು ವಂಚಿಸುತ್ತಿದ್ದಾರೆ. ಜಿಂದಾಲ್ ಒಳಗಡೆ ಜನ ಸತ್ತರೂ ಹೊರಗಡೆ ಮಾಹಿತಿ ಬಿಟ್ಟುಕೊಡುವುದಿಲ್ಲ ಎಂದು ದೂರಿದರು.

ADVERTISEMENT

ಜಿಂದಾಲ್ ಕಾರ್ಖಾನೆಯನ್ನು ಲಾಕ್ ಡೌನ್ ಮಾಡ್ತಿವಿ ಎನ್ನುವ ಉಸ್ತುವಾರಿ ಸಚಿವರು ಬಳಿಕ ಕೇಳಿದರೆ, ಮತ್ತೆ ಅಲೋಚಿಸಲಾಗುವುದು, ಜಿಲ್ಲಾಧಿಕಾರಿ ನಿರ್ಧರಿಸುತ್ತಾರೆ ಬಳಿಕ ನೋಡೋಣ ಎನ್ನುತ್ತಾರೆ. ಜಿಲ್ಲೆಯಲ್ಲಿ ಸೋಂಕು ಜಿಲ್ಲೆಯಲ್ಲಿ ಶೇ.25ರಷ್ಟು ಹರಡಿದೆ. ಮೈಸೂರಿನಲ್ಲಿ ಜ್ಯೂಬಿಲಿಯೆಂಟ್ ನಂಜಾದರೆ ಬಳ್ಳಾರಿಯ ಜಿಂದಾಲ್ ಏನು? ಎಂದು ಪ್ರಶ್ನಿಸಿದರು.

ಇನ್ನಾದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೇ ಇದ್ದರೆ.ಜಿಂದಾಲ್ ಮುಂದೆ ರಸ್ತೆ ತಡೆದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು. ತುಂಗಭದ್ರ ರೈತ ಸಂಘದ ಪುರುಷೋತ್ತಮ ಗೌಡ, ಕೋಟೇಶ್ವರ ರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.