ADVERTISEMENT

ಸಂದೀಪ್‌ ಶಾಸ್ತ್ರಿ ಜಾಗ್ರಣ್‌ ಲೇಕ್‌ಸಿಟಿ ವಿಶ್ವವಿದ್ಯಾಲಯದ ಕುಲಪತಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 23:01 IST
Last Updated 3 ಜನವರಿ 2021, 23:01 IST
ಡಾ. ಸಂದೀಪ್ ಶಾಸ್ತ್ರಿ
ಡಾ. ಸಂದೀಪ್ ಶಾಸ್ತ್ರಿ   

ಬೆಂಗಳೂರು: ಮಧ್ಯಪ್ರದೇಶದ ಭೋಪಾಲ್‌ನಲ್ಲಿನ ಜಾಗ್ರಣ್‌ ಲೇಕ್‌ಸಿಟಿ ವಿಶ್ವವಿದ್ಯಾಲಯದ (ಜೆಎಲ್‌ಯು) ನೂತನ ಕುಲಪತಿಯಾಗಿ ಶಿಕ್ಷಣ ತಜ್ಞ, ಸಂಶೋಧಕ ಡಾ. ಸಂದೀಪ್‌ ಶಾಸ್ತ್ರಿ ನೇಮಕಗೊಂಡಿದ್ದಾರೆ.

‘ಲೇಖಕರು, ರಾಜಕೀಯ ವಿಶ್ಲೇಷಕರೂ ಆಗಿರುವ ಸಂದೀಪ್‌ ಶಾಸ್ಟ್ರಿಯವರು ಕುಲಪತಿಯಾಗಿ ಬಂದಿರುವುದು ಸಂತಸದ ವಿಷಯದ’ ಎಂದು ಜೆಎಲ್‌ಯು ವಿಶ್ವವಿದ್ಯಾಲಯ ಪ್ರಕಟಣೆ ಹೇಳಿದೆ.

‘ಸಂದೀಪ್‌ ಶಾಸ್ತ್ರಿ ಜ.1ರಿಂದಲೇ ಅಧಿಕಾರ ವಹಿಸಿಕೊಂಡಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ದಶಕಗಳ ಅನುಭವ ಹೊಂದಿರುವ ಶಾಸ್ತ್ರಿ, ವಿಶ್ವವಿದ್ಯಾಲಯವನ್ನು ಮತ್ತಷ್ಟು ಯಶಸ್ಸಿನತ್ತ ಕೊಂಡೊಯ್ಯುವ ವಿಶ್ವಾಸವಿದೆ’ ಎಂದು ಅದು ಹೇಳಿದೆ.

ADVERTISEMENT

ಜೈನ್‌ ವಿಶ್ವವಿದ್ಯಾಲಯದ ಕುಲಪತಿಯಾಗಿಯೂ ಕೆಲಸ ಮಾಡಿರುವ ಅನುಭವ ಹೊಂದಿರುವ ಶಾಸ್ತ್ರಿಯವರು, ಸಮಾಜ ವಿಜ್ಞಾನ ಮತ್ತು ಶಿಕ್ಷಣ ಸಂಶೋಧನಾ ಸಂಸ್ಥೆಯ (ಸಿಇಆರ್‌ಎಸ್‌ಎಸ್‌ಇ) ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.