ADVERTISEMENT

ಮೃತ ಸೈನಿಕರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ: ಪ್ರಸ್ತಾವಕ್ಕೆ ಸರ್ಕಾರ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 19:22 IST
Last Updated 15 ಸೆಪ್ಟೆಂಬರ್ 2022, 19:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಯುದ್ಧ ಹಾಗೂ ಯುದ್ಧದ ಮಾದರಿ ಕಾರ್ಯಾಚರಣೆಗಳಲ್ಲಿ ಮೃತಪಟ್ಟ, ರಾಜ್ಯದ ಮೂಲನಿವಾಸಿ ಸೈನಿಕರ ಅವಲಂಬಿತ ಕುಟುಂಬದ ಒಬ್ಬರು ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡುವ ಪ್ರಸ್ತಾವಕ್ಕೆ ಸರ್ಕಾರ ಅನುಮೋದನೆ ನೀಡಿದೆ.

ಸೈನಿಕರು ಮತ್ತು ಪುನರ್ವಸತಿ ಇಲಾಖೆಯ ಪ್ರಸ್ತಾವಕ್ಕೆ ಆರ್ಥಿಕ ಇಲಾಖೆಯೂ ಅನುಮೋದನೆ ನೀಡಿದ್ದು, ಸರ್ಕಾರವೂ ಸಮ್ಮತಿಸಿದೆ.

ಮೃತ ಸೈನಿಕರ ಅವಲಂಬಿತ ಕುಟುಂಬಗಳಿಗೆ ರಾಜ್ಯ ಸರ್ಕಾರ ಪ್ರಸ್ತುತ ₹ 50 ಲಕ್ಷ ನಗದು, ಅಧಿಕಾರಿ ಶ್ರೇಣಿಯವರಿಗೆ 60X40 ಹಾಗೂ ಸೈನಿಕರಿಗೆ 40X30 ನಿವೇಶನ, ಮನೆಕಟ್ಟಿಕೊಳ್ಳಲು ₹ 6 ಲಕ್ಷ ಹಾಗೂ₹ 4.5 ಲಕ್ಷ, 2ರಿಂದ 8 ಎಕರೆ ಉಚಿತ ಜಮೀನು, ಪ್ರತಿ 15 ವರ್ಷಕ್ಕೆ ಒಮ್ಮೆ ಮನೆ ದುರಸ್ತಿಗೆ ₹ 3 ಲಕ್ಷ, ಇಬ್ಬರು ಹೆಣ್ಣು ಮಕ್ಕಳ ಮದುವೆಗೆ ತಲಾ ₹ 5 ಲಕ್ಷ, ಆಸ್ತಿ ತೆರಿಗೆಯಲ್ಲಿ ಶೇ 50ರಷ್ಟು ರಿಯಾಯಿತಿ ನೀಡುತ್ತಿದೆ.

ADVERTISEMENT

ಹೊಸ ಆದೇಶದ ನಂತರ ಹಿಂದೆ ನೀಡಲಾಗುತ್ತಿದ್ದ ಸವಲತ್ತುಗಳನ್ನು ಸ್ಥಗಿತಗೊಳಿಸಲಾಗುತ್ತದೆಯೋ, ಮುಂದುವರಿಸಲಾಗುವುದೋ ಎನ್ನುವ ಕುರಿತು ಆದೇಶದಲ್ಲಿ ಯಾವ ಮಾಹಿತಿಯೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.