ADVERTISEMENT

ದೇಶದ ಅಗ್ರೇಸರ: ನ್ಯಾ.ನಾಗಪ್ರಸನ್ನ ದಾಖಲೆ  

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 16:09 IST
Last Updated 26 ನವೆಂಬರ್ 2025, 16:09 IST
ನ್ಯಾ.ಎಂ.ನಾಗಪ್ರಸನ್ನ
ನ್ಯಾ.ಎಂ.ನಾಗಪ್ರಸನ್ನ   

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಆರು ವರ್ಷಗಳ ಅವಧಿಯಲ್ಲಿ 22 ಸಾವಿರ ವಿವಿಧ ನಮೂನೆಗಳ ಪ್ರಕರಣಗಳನ್ನು ವಿಲೇವಾರಿ ಮಾಡಿರುವ ದೇಶದ ಮೊದಲ ಹೈಕೋರ್ಟ್ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.

ನ್ಯಾ.ನಾಗಪ್ರಸನ್ನ ಅವರು ಬುಧವಾರಕ್ಕೆ (ನ.26) ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಆರು ವರ್ಷಗಳನ್ನು ಪೂರೈಸಿದ ಬೆನ್ನಲ್ಲೇ ಈ ದಾಖಲೆ ನಿರ್ಮಿಸಿದ ಕರ್ನಾಟಕ ಹೈಕೋರ್ಟ್‌ನ ಮೊದಲಿಗರು ಎನಿಸಿದ್ದಾರೆ. 22 ಸಾವಿರ ತೀರ್ಪುಗಳಲ್ಲಿ 985 ಸೂಚಿತ (ರಿಪೋರ್ಟೆಡ್‌) ತೀರ್ಪುಗಳಾಗಿ ದಾಖಲಾಗಿವೆ.

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ 2019ರ ನವೆಂಬರ್ 26ರಂದು ಪ್ರಮಾಣ ವಚನ ಸ್ವೀಕರಿಸಿದ ನ್ಯಾ.ನಾಗಪ್ರಸನ್ನ ಅವರ ಅವಧಿ 2033ರವರೆಗೂ ಇದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.