ADVERTISEMENT

ಕಲಬುರ್ಗಿ ಹಂತಕರು ಪತ್ತೆ ಚಾರ್ಜ್‌ಶೀಟ್‌ ಶೀಘ್ರ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 20:00 IST
Last Updated 2 ಜೂನ್ 2019, 20:00 IST
ಕಲಬುರ್ಗಿ
ಕಲಬುರ್ಗಿ   

ಬೆಳಗಾವಿ/ಬೆಂಗಳೂರು: ಹೆಸರಾಂತ ಸಂಶೋಧಕ ಎಂ.ಎಂ.ಕಲಬುರ್ಗಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು ಎನ್ನಲಾದ ಹಂತಕರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳು, ನ್ಯಾಯಾಲಯಕ್ಕೆ ಶೀಘ್ರವೇ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ.

‘ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿಸಿದ್ದ ಮಹಾರಾಷ್ಟ್ರದ ಅಮೋಲ್ ಕಾಳೆ ಎಂಬಾತನೇ ಕಲಬುರ್ಗಿ ಹತ್ಯೆ ಮಾಡಿದ್ದ ತಂಡದ ರೂವಾರಿ. ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್ ಮತ್ತು ಬೆಳಗಾವಿಯಲ್ಲಿ ಶುಕ್ರವಾರವಷ್ಟೇ ಬಂಧಿಸಲಾದ ಪ್ರವೀಣ್ ಪ್ರಕಾಶ್ ಚತುರ್ ಅಲಿಯಾಸ್ ಮಸಾಲವಾಲಾ ಇಬ್ಬರೂ ಬೈಕ್‌ನಲ್ಲಿ ಕಲಬುರ್ಗಿ ಮನೆಗೆ ಹೋಗಿ ಹತ್ಯೆ ಮಾಡಿ ಬಂದಿದ್ದರು’ಎಂಬುದು ಎಸ್‌ಐಟಿ‌ ತನಿಖೆಯಿಂದ ಗೊತ್ತಾಗಿದೆ.

ಧಾರವಾಡದ ಅವರ ಮನೆಯಲ್ಲಿ2015ರ ಆಗಸ್ಟ್‌ 30ರಂದು ಕಲಬುರ್ಗಿ ಅವರನ್ನು ಹತ್ಯೆ ಮಾಡಲಾಗಿತ್ತು. ಗೌರಿ ಲಂಕೇಶ್‌ ಹತ್ಯೆಯಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವವರನ್ನು ಕಲಬುರ್ಗಿ ಹತ್ಯೆಗೆಸಂಬಂಧಿಸಿದಂತೆಯೂ ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದರು.

ADVERTISEMENT

ಬಂಧಿತ ಆರೋಪಿಗಳು

- ಮಹಾರಾಷ್ಟ್ರದ ಅಮೋಲ್ ಕಾಳೆ, ವಾಸುದೇವ್ ಸೂರ್ಯವಂಶಿ

- ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್, ಅಮಿತ್ ಬದ್ದಿ

- ಬೆಳಗಾವಿಯ ಪ್ರವೀಣ್ ಪ್ರಕಾಶ್ ಚತುರ್

ಪೆಟ್ರೋಲ್ ಬಾಂಬ್ ಎಸೆತಪ್ರಕರಣದಲ್ಲಿ ಬಂಧಿತನಾಗಿದ್ದ ಚತುರ್‌, ಜಾಮೀನು ಪಡೆದುಕೊಂಡಿದ್ದ. ಶಿವ ಪ್ರತಿಷ್ಠಾನ ಎನ್ನುವ ಸಂಘಟನೆಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದ ಮಾಹಿತಿ ಇದೆ
- ಬಿ.ಎಸ್. ಲೋಕೇಶ್‌ಕುಮಾರ್‌,ಬೆಳಗಾವಿ ನಗರ ಪೊಲೀಸ್ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.