ಬೆಂಗಳೂರು: ‘ನಟ ಕಮಲ್ ಹಾಸನ್ ಕ್ಷಮೆ ಕೇಳಲ್ಲ ಅಂದರೆ ಬಿಡುವವರು ಯಾರು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಂಗಡಗಿ, ‘ಅವರೊಬ್ಬ ಹಿರಿಯ ನಟ. ಅವರಿಗಾಗಿ ಸಿನಿಮಾ ನಿರ್ಮಿಸಿದವರಿಗೆ ಅನ್ಯಾಯ ಆಗುವುದಿಲ್ಲವೇ? ಈ ವಿಷಯವನ್ನು ನಾವು ಸುಮ್ಮನೆ ಬಿಡುತ್ತೇವೆಯೇ? ಬಿಡಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿಯ ಜೊತೆ ಮಾತನಾಡಿದ್ದೇನೆ. ಪರಭಾಷೆ ನಟರು ಯಾರೇ ಮಾತನಾಡಿದರೂ ಬಿಡಲ್ಲ. ನಮ್ಮ ಭಾಷೆ ವಿಚಾರದಲ್ಲಿ ಮಾತನಾಡಿದರೆ ಬಿಡುವ ಮಾತೇ ಇಲ್ಲ’ ಎಂದರು.
‘ವಿಶೇಷ ಕಾನೂನು ತರುವ ವಿಚಾರವಾಗಿ ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆ. ನಟ ಶಿವರಾಜ್ ಕುಮಾರ್ ಜೊತೆ ಮಾತನಾಡಿದ್ದೇನೆ. ಅವರೊಬ್ಬ ಕನ್ನಡದ ಹಿರಿಯ ನಟ. ಅವರು ಇದರ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ನಮ್ಮತನವನ್ನು ಅವರು ಉಳಿಸಿಕೊಳ್ಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.