ADVERTISEMENT

ಆಯ್ಕೆ ಪಟ್ಟಿ ಪ್ರಕಟಿಸದೆ ‘ನಾಲ್ವಡಿ ಪ್ರಶಸ್ತಿ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 23:30 IST
Last Updated 4 ಜೂನ್ 2025, 23:30 IST
<div class="paragraphs"><p>ಶಿವರಾಜ ತಂಗಡಗಿ</p></div>

ಶಿವರಾಜ ತಂಗಡಗಿ

   

ಮೈಸೂರು: ಪ್ರಸಕ್ತ ಸಾಲಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಯನ್ನು 20 ಮಂದಿಗೆ ಬುಧವಾರ ಪ್ರದಾನ ಮಾಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು, ಪುರಸ್ಕೃತರ ಪಟ್ಟಿಯನ್ನು ಮುಚ್ಚಿಟ್ಟಿದ್ದ ಆರೋಪ ಕೇಳಿಬಂದಿದೆ.

ಇಲ್ಲಿನ ಕಲಾಮಂದಿರದಲ್ಲಿ ನಡೆದ ಜಯಂತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಲಾಯಿತು. ಇಲಾಖೆಯ ಆಹ್ವಾನ ಪತ್ರಿಕೆಯಲ್ಲೂ ಪ್ರಶಸ್ತಿ ಪುರಸ್ಕೃತರ ಉಲ್ಲೇಖ ಎಲ್ಲೂ ಇಲ್ಲ. ಪುರಸ್ಕೃತರ ಪಟ್ಟಿಯನ್ನು ಸಾರ್ವಜನಿಕ  ಪ್ರಕಟಣೆಯನ್ನೂ ಮಾಡಿಲ್ಲ. ಪಟ್ಟಿಯನ್ನು ಕತ್ತಲಲ್ಲಿಟ್ಟು, ತರಾತುರಿಯಲ್ಲಿ ಪ್ರದಾನ ಮಾಡಿರುವುದು, ಆಯ್ಕೆ  ಪಾರದರ್ಶಕವಾಗಿ ನಡೆದಿಲ್ಲ ಎಂಬ ಬಗ್ಗೆ ಅನುಮಾನ ಮೂಡಿದೆ.

ADVERTISEMENT

ಪ್ರಶಸ್ತಿಗೆ ಆಯ್ಕೆಯಾಗಿರುವ ಬಗ್ಗೆ ಪುರಸ್ಕೃತರಿಗೆ ಹಿಂದಿನ ದಿನ ರಾತ್ರಿಯಷ್ಟೇ ಮಾಹಿತಿ ನೀಡಲಾಯಿತು. ಪತ್ರಿಕಾ ಪ್ರಕಟಣೆಯನ್ನೂ ಇಲಾಖೆ ನೀಡಿರಲಿಲ್ಲ. ಇದುವರೆಗೂ ಪ್ರಶಸ್ತಿ ಪ್ರಕಟಣೆಯನ್ನು ಮುಂಚಿತವಾಗಿ ಹೊರಡಿಸುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.