ADVERTISEMENT

₹ 5 ಕೋಟಿ ಬಾಕಿ‌: 'ದರ್ಬಾರ್' ನಿರ್ಮಾಪಕರ ವಿರುದ್ಧ ಸಿನಿಮಾ ವಿತರಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 12:18 IST
Last Updated 6 ಜನವರಿ 2020, 12:18 IST
   

ಬೆಂಗಳೂರು: ಲೈಕಾ ಪ್ರೊಡಕ್ಷನ್ ಕಂಪನಿಯು ಬಾಕಿ ₹ 5 ಕೋಟಿ ಪಾವತಿಸುವವರೆಗೂ ಕರ್ನಾಟಕದಲ್ಲಿ'ಸೂಪರ್ ಸ್ಟಾರ್' ರಜನಿಕಾಂತ್‌‌‌ ನಟನೆಯ 'ದರ್ಬಾರ್' ಚಿತ್ರಪ್ರದರ್ಶನಕ್ಕೆ ಅವಕಾಶ‌ ನೀಡಬಾರದು ಎಂದು ಆಗ್ರಹಿಸಿಕನ್ನಡ ಸಿನಿಮಾ ವಿತರಕರು ಇಲ್ಲಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.

'ದರ್ಬಾರ್' ಚಿತ್ರ ಜ. 9ರಂದು ತೆರೆ ಕಾಣುತ್ತಿದೆ. ರಜನಿಕಾಂತ್ ನಟನೆಯ '2.0' ಚಿತ್ರ ವಿತರಣೆ‌ ಮಾಡಿದ್ದ ವಸುಪ್ರದ ಡಿಸ್ಟ್ರಿಬ್ಯೂಟರ್ನ ಸುಧೀರ್ ಎಂಬುವವರಿಗೆ ಲೈಕಾ ಕಂಪನಿಯು₹ 5 ಕೋಟಿಬಾಕಿ ಉಳಿಸಿಕೊಂಡಿದೆ. '2.0' ಸಿನಿಮಾ ನಿರ್ಮಿಸಿದ್ದ ಕಂಪನಿಯೇ 'ದರ್ಬಾರ್' ಚಿತ್ರವನ್ನು‌ ನಿರ್ಮಾಣ ಮಾಡಿದೆ. ಇದರಿಂದಾಗಿ ಗಾಂಧಿನಗರದಲ್ಲಿರುವ ಕಚೇರಿಗಳನ್ನು ಬಂದ್ ಮಾಡಿಮಂಡಳಿ ಬಳಿ ಜಮಾಯಿಸಿದ್ದ ವಿತರಕರು ಲೈಕಾ ಕಂಪನಿ ವಿರುದ್ಧ ಘೋಷಣೆ ಕೂಗಿದರು. ವಿತರಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಮಂಡಳಿಯ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು.

‌ಸಭೆಯಲ್ಲಿ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಡಿ.ಕೆ. ರಾಮಕೃಷ್ಣ, ಚಲನಚಿತ್ರ ವಿತರಕರ ಸಂಘದ ಅಧ್ಯಕ್ಷ ಐತಾಳ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ವಿತರಕ ವಲಯದ ಕಾರ್ಯದರ್ಶಿ ಎ.ಗಣೇಶ್ ಪಾಲ್ಗೊಂಡಿದ್ದರು. ವಿತರಕರಿಗೆ ಶೀಘ್ರವೇ ಬಾಕಿ ಹಣ ಕೊಡಿಸುವ ಸಂಬಂಧ ಲೈಕಾ ಕಂಪನಿಯ ಜೊತೆಗೆ ಮಾತುಕತೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.