ADVERTISEMENT

ಆಹಾರ ವಿತರಕರಿಂದ ಕನ್ನಡ ಕಡೆಗಣನೆ: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2021, 20:48 IST
Last Updated 30 ಡಿಸೆಂಬರ್ 2021, 20:48 IST

ಬೆಂಗಳೂರು: ‘ಗ್ರಾಹಕರಿಗೆ ಸಿದ್ಧ ಆಹಾರ ತಲುಪಿಸುವ ಸ್ವಿಗ್ಗಿ ಸಂಸ್ಥೆಯ ಸಿಬ್ಬಂದಿಯಲ್ಲಿ ಹಿಂದಿ ಭಾಷಿಕರೂಇದ್ದಾರೆ. ಅವರಿಗೆ ಸಂಸ್ಥೆ ಕನ್ನಡ ಕಲಿಸದಿರುವುದರಿಂದ ಗ್ರಾಹಕರು ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ಷೇಪ ವ್ಯಕ್ತಪಡಿಸಿದೆ.

ಈ ಬಗ್ಗೆ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರುಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಸಂಸ್ಥೆಯು ಕನ್ನಡ ಕಡೆಗಣಿಸುತ್ತಿರುವ ಬಗ್ಗೆ ಪ್ರಭಾಕರ್ ಎಂಬುವರು ಪ್ರಾಧಿಕಾರಕ್ಕೆ ದೂರು ನೀಡಿದ್ದರು.

‘ಸ್ವಿಗ್ಗಿ ಸಂಸ್ಥೆಯು ಕನ್ನಡ ಬಾರದ ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಪ್ರಯತ್ನ ಮಾಡುತ್ತಿಲ್ಲ. ಕೆಲಸ ಮಾಡುವ ಕೆಲವರು ಹಿಂದಿ ಭಾಷೆಯನ್ನಷ್ಟೇ ಬಲ್ಲವರಾಗಿದ್ದಾರೆ. ಇವರು ಕನ್ನಡದಲ್ಲಿ ಸಂವಹನ ನಡೆಸುತ್ತಿಲ್ಲ. ಅಷ್ಟೇ ಅಲ್ಲ, ‘ನಮಗೆ ಕನ್ನಡ ಬರುವುದಿಲ್ಲ. ಹಿಂದಿಯಲ್ಲೇ ಮಾತನಾಡಬೇಕು ಎಂಬ ಬೇಡಿಕೆ ಇಡುತ್ತಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ’ ಎಂದು ಪತ್ರದಲ್ಲಿ
ಉಲ್ಲೇಖಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.