ADVERTISEMENT

‘ಗಡಿ ತಕರಾರು ಉದ್ಧಟತನದ ಪರಮಾವಧಿ’

ಉದ್ಧವ್ ಠಾಕ್ರೆ ಸರ್ಕಾರ ವಜಾಕ್ಕೆ ಕನ್ನಡ ಗೆಳೆಯರ ಬಳಗ ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 19:22 IST
Last Updated 28 ಜನವರಿ 2021, 19:22 IST

ಬೆಂಗಳೂರು: ‘ಗಡಿ ವಿಚಾರವಾಗಿ ತಕರಾರು ತೆಗೆಯುತ್ತಿ ರುವಮಹಾರಾಷ್ಟ್ರದ ಮುಖ್ಯ ಮಂತ್ರಿ ಉದ್ಧವ್ ಠಾಕ್ರೆ ಅವರ ನಡೆ ಉದ್ಧಟತನದ ಪರಮಾವಧಿಯಾಗಿದೆ. ಆಡಳಿತದ ವೈಫಲ್ಯವನ್ನು ಮುಚ್ಚಿಕೊಳ್ಳಲು ಹಾಗೂ ಅಲ್ಲಿನ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಅವರು ಹೀಗೆ ವರ್ತಿಸುತ್ತಿದ್ದಾರೆ’ ಎಂದು ಕನ್ನಡ ಗೆಳೆಯರ ಬಳಗವು ಖಂಡಿಸಿದೆ.

‘ಗಡಿ ವಿವಾದ ಕುರಿತಂತೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪನ್ನು ಪ್ರಕಟಿ ಸುವವರೆಗೆ ಮರಾಠಿ ಭಾಷಿಕರಿರುವ ಕರ್ನಾಟಕದ ಪ್ರದೇಶಗಳನ್ನು ಕೇಂದ್ರಾ ಡಳಿತ ಪ್ರದೇಶ ಎಂದು ಘೋಷಿಸಬೇಕು’ ಎಂದು ಉದ್ಧವ್ ಠಾಕ್ರೆ ಆಗ್ರಹಿಸಿದ್ದರು.

‘ಕಾಶ್ಮೀರವಿಲ್ಲದ ಭಾರತ, ಬೆಳಗಾವಿಯಿಲ್ಲದ ಕರ್ನಾಟಕವನ್ನು ಉಹಿಸಿಕೊಳ್ಳುವುದೂ ಅಸಾಧ್ಯ. ಈಗ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಮಹಾಜನ್ ವರದಿಯ ಅನುಷ್ಠಾನ ಮತ್ತು ಉದ್ಧವ್ ಠಾಕ್ರೆ ಅವರ ಸರ್ಕಾರ ವಜಾ ಮಾಡಲು ಕ್ರಮಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ನಿರ್ಣಯ ಕೈಗೊಳ್ಳಬೇಕು. ಪಕ್ಷಾತೀತವಾಗಿ ಎಲ್ಲರೂ ಒಂದಾಗಿ ಈ ಕೆಲಸ ಮಾಡಬೇಕು. ಅವರು ವರ್ತಿಸುತ್ತಿರುವ ರೀತಿ ದೇಶದ ಒಕ್ಕೂಟ ವ್ಯವಸ್ಥೆಗೆ ಅಪಾಯಕಾರಿ’ ಎಂದು ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.