ADVERTISEMENT

ಕನ್ನಡ ರಾಜ್ಯೋತ್ಸವ: ಕನ್ನಡ ಹಾಡಿನ ವಿಡಿಯೊ ಕಳುಹಿಸಿ, ಬಹುಮಾನ ಗೆಲ್ಲಿ!

ನಾಡ ದೇವಿಗೆ ಗೀತ ನಮನ: ಎಲ್ಲಾದರು ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡಕ್ಕೆ ದನಿ ಆಗಿರು...

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2021, 6:51 IST
Last Updated 29 ಅಕ್ಟೋಬರ್ 2021, 6:51 IST
ನಾಡ ದೇವಿಗೆ ಗೀತ ನಮನ
ನಾಡ ದೇವಿಗೆ ಗೀತ ನಮನ   

ಬೆಂಗಳೂರು:ಕನ್ನಡ ನಾಡು ನುಡಿ ಸಂಸ್ಕೃತಿ ರಕ್ಷಣೆಗಾಗಿ ಕಳೆದ ಏಳು ದಶಕಗಳಿಂದ ಶ್ರಮಿಸುತ್ತಿರುವ ವಿಶ್ವಾಸಾರ್ಹ ಪತ್ರಿಕೆ 'ಪ್ರಜಾವಾಣಿ' ತನ್ನ ಅಪಾರ ಓದುಗರ ಬಳಗದೊಂದಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ನಾಡಿನ ಯುವ ಗಾಯನ ಪ್ರತಿಭೆಗಳಿಗೆ ಅಪೂರ್ವ ಅವಕಾಶ ನೀಡುವ ಮೂಲಕ ಸಂಭ್ರಮಿಸಲು ಆಲೋಚಿಸಿದೆ.

ಕನ್ನಡ ಸಂಸ್ಕೃತಿಯ ಸತ್ವವನ್ನು ತಮ್ಮ ಒಳಗಣ್ಣುಗಳ ಮೂಲಕ ನೋಡಿ, ಕನ್ನಡ ನಾಡಿನ ಚೆಲುವು, ಭಾಷೆಯ ಬೆಡಗನ್ನು ಅಕ್ಷರಗಳಲ್ಲಿ ಹಿಡಿದಿಟ್ಟ ಕವಿಗಳ ಕವಿತೆಗಳ ಮಾಧುರ್ಯದ ಅನುರಣನಕ್ಕೆ, ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಅವರ ಸಹಕಾರದಲ್ಲಿ 'ಪ್ರಜಾವಾಣಿ' ವೇದಿಕೆ ಕಲ್ಪಿಸುತ್ತಿದೆ.

ನಿಯಮಗಳು
- 15 ರಿಂದ 30 ವಯೋಮಾನದ ತರುಣ ಪ್ರತಿಭೆಗಳು ಕನ್ನಡದ ಹಿರಿಮೆಯನ್ನು ಹಾಡಿ ಹೊಗಳುವ, ತಮ್ಮ ಆಯ್ಕೆಯ ಒಂದು ಸುಂದರ ಕನ್ನಡ ಗೀತೆಯನ್ನು ಹಾಡಿ, ಕ್ಯಾಮೆರಾ ಅಥವಾ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಣ ಮಾಡಿ 'ಪ್ರಜಾವಾಣಿ'ಗೆ ಕಳುಹಿಸಬಹುದು.

ADVERTISEMENT

- ಕನಿಷ್ಠ 4 ನಿಮಿಷ, ಗರಿಷ್ಠ 6 ನಿಮಿಷದಲ್ಲಿ ಹಾಡಿರಬೇಕು.

- ಉತ್ತಮ ಗುಣಮಟ್ಟದ ಧ್ವನಿ ಮತ್ತು ಬೆಳಕು ಇರಬೇಕು.

- ಶ್ರುತಿವಾದ್ಯ, ಕರೋಕೆ ಅಥವಾ ವಾದ್ಯ ಪರಿಕರಗಳ ಜೊತೆಗೆ ಹಾಡಬಹುದು.

- ಸಮೂಹ ಗಾಯನವಾಗಿರಕೂಡದು.

- ಗಾಯನ ಪ್ರತಿಭೆಯನ್ನು ಸ್ಪರ್ಧಾತ್ಮಕವಾಗಿ ಪ್ರದರ್ಶಿಸುವ ಚೈತನ್ಯ, ಹುಮ್ಮಸ್ಸು ಅಪೇಕ್ಷಣೀಯ.

- ಹೆಸರು, ವಿಳಾಸ, ವಯಸ್ಸಿನ ದೃಢೀಕರಣ ದಾಖಲೆ, ಹಾಡುವ ಗೀತೆಯ ರಚನಾಕಾರರು/ ಸಂಗೀತ ಸಂಯೋಜಕರು ವಿವರಗಳೊಂದಿಗೆ, ಹಾಡಿನ ವಿಡಿಯೊವನ್ನು ಪ್ರಜಾವಾಣಿಗೆ ಕಳುಹಿಸಬೇಕು.

- ಒಬ್ಬರು ಒಂದೇ ಹಾಡು ಕಳುಹಿಸಬೇಕು.

- ನವೆಂಬರ್ 7 ಕಡೆಯ ದಿನ. ನಂತರ ಬಂದವುಗಳನ್ನು ಪರಿಗಣಿಸುವುದಿಲ್ಲ.

ಆಯ್ಕೆಯಾದ ಗೀತೆಗಳನ್ನು ಪ್ರಜಾವಾಣಿ ಸಾಮಾಜಿಕ ತಾಣಗಳಲ್ಲಿ ವಿಶೇಷ ಕಾರ್ಯಕ್ರಮವಾಗಿ ನವೆಂಬರ್ 10ರಿಂದ ಪ್ರಸಾರ ಮಾಡಲಾಗುವುದು.

ಆಯ್ಕೆ ಸಮಿತಿಯ ತೀರ್ಮಾನದಂತೆ ಅತ್ಯುತ್ತಮವಾಗಿ ಹಾಡಿರುವ ಹತ್ತು ಕಲಾವಿದರಿಗೆ ₹1000 ಮೌಲ್ಯದ ಗಿಫ್ಟ್ ವೋಚರ್ ನೀಡಲಾಗುತ್ತದೆ. ನಮ್ಮ ರಾಜ್ಯದ ಕಲಾವಿದರು ಮಾತ್ರವಲ್ಲದೆ ಹೊರ ರಾಜ್ಯ ಹಾಗೂ ವಿದೇಶದ ಪ್ರತಿಭೆಗಳಿಗೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಆಯ್ಕೆಯಾಗುವ ಹತ್ತು ಹಾಡುಗಾರರಲ್ಲಿ, ಇಬ್ಬರು ಹೊರರಾಜ್ಯದ ಹಾಡುಗಾರರು ಹಾಗೂ ಒಬ್ಬರು ವಿದೇಶದ ಹಾಡುಗಾರರನ್ನು ಪರಿಗಣಿಸಲಾಗುವುದು.

ಆನ್‌ಲೈನ್ ಮೂಲಕ ನಿಮ್ಮ ವಿಡಿಯೊಗಳನ್ನು ಇಲ್ಲಿ ಸಲ್ಲಿಸಿ: www.bit.ly/pvkannada

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.