ADVERTISEMENT

ಕನ್ನಡದ ಕೂ ಆ್ಯಪ್‌ನಿಂದ ರಾಜ್ಯೋತ್ಸವ ಆಚರಣೆ: ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 11:32 IST
Last Updated 31 ಅಕ್ಟೋಬರ್ 2020, 11:32 IST
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು: ಟ್ವಿಟರ್‌ ಮಾದರಿಯ ಮೈಕ್ರೊಬ್ಲಾಗಿಂಗ್ ಕನ್ನಡದ 'ಕೂ ಆ್ಯಪ್‌' ಸಂಸ್ಥೆ ವತಿಯಿಂದ ಅತ್ಯಂತ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಮುಂದಾಗಿದೆ.

ನವೆಂಬರ್‌ 1 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಕಾರ್ಯಕ್ರಮವನ್ನು ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ. ಇವರೊಟ್ಟಿಗೆ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್, ನಟ ನಿರ್ದೇಶಕ ಜಗದೀಶ್ ಮಲ್ನಾಡ್, ನಟಿ ನೀತು ಶೆಟ್ಟಿ, ನವೀನ್‌ ಕೃಷ್ಣ, ಜಾದೂಗಾರ ಕುದ್ರೋಳಿ ಗಣೇಶ್ ಸೇರಿದಂತೆ ಇತರೆ ನಟ ನಟಿಯರು ಹಾಗೂ ಗಾಯಕರು ಭಾಗವಹಿಸಲಿದ್ದಾರೆ.

ಕೂ ಆ್ಯಪ್ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಮಾತನಾಡಿ, ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ‌ ಸಿದ್ಧತೆ ಮಾಡಿಕೊಂಡಿದ್ದೇವೆ. ಕನ್ನಡ ರಾಜ್ಯೋತ್ಸವ ಕೇವಲ ಆಚರಣೆಯಲ್ಲಿ ಅಷ್ಟೆ ಸೀಮಿತವಾಗಿಸಬಾರದು. ಹೀಗಾಗಿ ನಮ್ಮ ಸಂಸ್ಥೆ ಕನ್ನಡ ಮಾತೃಭಾಷೆಯಲ್ಲೇ ಜನರು ಭಾವನೆಗಳನ್ನು ಹಂಚಿಕೊಳ್ಳಲು ಟ್ವಿಟರ್ ಮಾದರಿಯಲ್ಲೇ ಕೂ ಆ್ಯಪ್‌ನನ್ನು ಅಭಿವೃದ್ಧಿ ಪಡಿಸಿ, ಲಕ್ಷಾಂತರ ಜನ ಬಳಸುವಂತೆ ಮಾಡಲಾಗಿದೆ. ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಹ ಕೂ ಆ್ಯಪ್‌ನ ಬಳಸುವ ಮೂಲಕ ಸ್ವತಃ ಕನ್ನಡಿಗರಿಗೆ ಪ್ರೋತ್ಸಾಹ ಕೊಡುತ್ತಿದ್ದಾರೆ.

ADVERTISEMENT

ಪ್ರತಿಯೊಬ್ಬ ಕನ್ನಡಿಗರು ಸಹ ಈ ಆ್ಯಪ್‌ ಬಳಸುವುದರಿಂದ ನಮ್ಮ ಭಾಷೆಯದ್ದೇ ಸಾಮಾಜಿಕ ಜಾಲತಾಣಕ್ಕೆ ಪ್ರೋತ್ಸಾಹ ನೀಡಿದಂತಾಗಲಿದೆ ಎಂದು ಸಿಎಂ ಅವರು ವಿಡಿಯೋ ಮೂಲಕ ಸಂದೇಶ‌ದ ನೀಡಿದ್ದಾರೆ. ನವೆಂಬರ್ 1 ರಂದು ವರ್ಚುವಲ್ ಮೂಲಕ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದರು.

ಇತ್ತೀಚೆಗೆ ಪ್ರಧಾನಿ ಅವರು ಕರೆ ಕೊಟ್ಟ ಆತ್ಮ ನಿರ್ಭರ್‌ ಸ್ಪರ್ಧೆಯಲ್ಲಿ ಕೂ ಆ್ಯಪ್ ಮೊದಲ ಸ್ಥಾನ ಪಡೆದುಕೊಂಡು, ಮೈಕ್ರೋ ಬ್ಲಾಗಿಂಗ್‌ ಕ್ಷೇತ್ರದಲ್ಲೇ ಹೆಸರು ಮಾಡಿದೆ. ಕನ್ನಡದ ಈ ಆ್ಯಪ್ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದು ಹೆಮ್ಮೆಯ ಸಂಗತಿ . ಪ್ರಸ್ತುತ ಸಾವಿರಕ್ಕೂ ಅಧಿಕ ವೃತ್ತಿ ಕ್ಷೇತ್ರದಲ್ಲಿ ಕೂ ಆ್ಯಪ್ ಬಳಕೆಯಲ್ಲಿದೆ. ಲಕ್ಷಾಂತರ ಜನರು, ಸೆಲೆಬ್ರೆಟಿಗಳು, ರಾಜಕಾರಣಿ, ಕ್ರಿಡಾಪಟುಗಳು ಸಹ ಈ ಆ್ಯಪ್ ಬಳಸುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.