ADVERTISEMENT

ಕಸಾಪ ಚುನಾವಣೆ: ಮಹೇಶ ಜೋಶಿಗೆ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 3:38 IST
Last Updated 23 ನವೆಂಬರ್ 2021, 3:38 IST
 ಮಹೇಶ ಜೋಶಿ
 ಮಹೇಶ ಜೋಶಿ    

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿಮಹೇಶ ಜೋಶಿ ಅವರು ಭಾರಿ ಮುನ್ನಡೆ ಸಾಧಿಸಿದ್ದಾರೆ. ತಮ್ಮ ಹತ್ತಿರದ ಸ್ಪರ್ಧಿ ಶೇಖರಗೌಡ ಮಾಲಿ ಪಾಟೀಲ ಅವರಿಗಿಂತ ಮೂರು ಪಟ್ಟು ಹೆಚ್ಚು ಮತಗಳನ್ನು ಪಡೆದಿದ್ದಾರೆ.

3.05 ಲಕ್ಷ ಮತದಾರರ ಪೈಕಿ 1.59 ಲಕ್ಷ ಮಂದಿ ಹಕ್ಕುಚಲಾಯಿಸಿದ್ದರು. ಚಲಾವಣೆಯಾಗಿದ್ದ ಒಟ್ಟಾರೆ ಶೇ 52.09 ಮತಗಳಲ್ಲಿ ಜೋಶಿ ಅವರೇ ಶೇ 43ರಷ್ಟು ಮತಗಳನ್ನು ಸೆಳೆದುಕೊಂಡಿದ್ದಾರೆ.

ಜೋಶಿ ಅವರಿಗೆ 68,525 ಮತಗಳು ಲಭಿಸಿದ್ದು, ಶೇಖರಗೌಡ ಅವರು22,357 ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.‌

ADVERTISEMENT

ಇದೇ 24 ರಂದು ಪರಿಷತ್ತಿನ ಚುನಾವಣಾಧಿಕಾರಿಯ ಕೇಂದ್ರ ಕಚೇರಿಯಲ್ಲಿ ಗಡಿನಾಡ ಘಟಕಗಳ ಅಧ್ಯಕ್ಷರ ಚುನಾವಣೆಗೆ ಸಂಬಂಧಪಟ್ಟ ಅಂಚೆ ಮತಪತ್ರಗಳನ್ನು ಎಣಿಕೆ ಮಾಡಲಾಗುತ್ತದೆ. ರಾಜ್ಯ ಘಟಕದ ಅಧ್ಯಕ್ಷರ ಆಯ್ಕೆಗೆ ಎಲ್ಲಾ ಜಿಲ್ಲೆಗಳಿಂದ ಬಂದ ಮತಗಳು ಹಾಗೂ ಅಂಚೆ ಮತಗಳನ್ನು ಕ್ರೋಢೀಕರಿಸಿ, ಅದೇ ದಿನ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ.

ದೂರದರ್ಶನ ಕೇಂದ್ರದ ಹೆಚ್ಚುವರಿ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಜೋಶಿ ಅವರು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಬಾಹ್ಯ ಬೆಂಬಲ ಪಡೆದಿದ್ದರು. ಬಿಜೆಪಿ ಸಂಸದರು, ಶಾಸಕರು ಅವರ ಪರ ಪ್ರಚಾರವನ್ನೂ ನಡೆಸಿದ್ದರು.

ಅಭ್ಯರ್ಥಿ;ಪಡೆದ ಮತಗಳು

ಮಹೇಶ ಜೋಶಿ;68,525

ಶೇಖರಗೌಡ ಮಾಲಿ ಪಾಟೀಲ;22,357

‌ವ.ಚ.ಚನ್ನೇಗೌಡ;16,755

ಸಿ.ಕೆ.ರಾಮೇಗೌಡ;14,110

ಮಾಯಣ್ಣ;8,791

ಸರಸ್ವತಿ ಚಿಮ್ಮಲಗಿ;6,471

ರಾಜಶೇಖರ ಮುಲಾಲಿ;5,209

ಶಿವರಾಜ ಗುರುಶಾಂತಪ್ಪ ಪಾಟೀಲ;1,768

ಶಿವರುದ್ರಯ್ಯ ಸ್ವಾಮಿ;1,759

ಸಂಗಮೇಶ ಬಾದವಾಡಗಿ;1,715

ಮ.ಚಿ.ಕೃಷ್ಣ;1,652

ಬಸವರಾಜ ಶಿ.ಹಳ್ಳೂರ;1,409

ಪ್ರಮೋದ ಹಳಕಟ್ಟಿ;1,233

ವಾಲ್ಮೀಕಪ್ಪ ಹ.ಯಕ್ಕರನಾಳ;1,017

ಸುಧೀಂದ್ರರಾವ್‌;808

ವೈ.ರೇಣುಕ;578

ಬಾಡದ ಭದ್ರಿನಾಥ;574

ಶರಣಬಸಪ್ಪ ಕಲ್ಲಪ್ಪ ದಾನಕೈ;558

ಕೆ.ರತ್ನಾಕರ ಶೆಟ್ಟಿ;477

ಶಿವಪ್ಪ ಮಲ್ಲಪ್ಪ ಬಾಗಲ;476

ಕೆ.ರವಿ ಅಂಬೇಕರೆ;440

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.