ADVERTISEMENT

ಕಾನೂನು ಅರಿವು: 20 ಸಾವಿರ ಕಿರುಹೊತ್ತಿಗೆ ಉಚಿತ ವಿತರಣೆ

ಕಾನೂನು ಸೇವಾ ಪ್ರಾಧಿಕಾರದಿಂದ ಕಾನೂನು ತಿಳಿವು ಅರಿವು

ಶಿವಕುಮಾರ ಹಳ್ಯಾಳ
Published 6 ಜನವರಿ 2019, 19:24 IST
Last Updated 6 ಜನವರಿ 2019, 19:24 IST
ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಮಳಿಗೆಯಲ್ಲಿ ಕಾನೂನು ಕಿರುಹೊತ್ತಿಗೆಗಳನ್ನು ತೆಗೆದುಕೊಳ್ಳುತ್ತಿರುವ ಸಾರ್ವಜನಿಕರು
ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಮಳಿಗೆಯಲ್ಲಿ ಕಾನೂನು ಕಿರುಹೊತ್ತಿಗೆಗಳನ್ನು ತೆಗೆದುಕೊಳ್ಳುತ್ತಿರುವ ಸಾರ್ವಜನಿಕರು   

ಧಾರವಾಡ: ಸಾರ್ವಜನಿಕರಲ್ಲಿ ಕಾನೂನು ಅರಿವು ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಅನೇಕ ಪುಸ್ತಕಗಳನ್ನು ಹಾಗೂ ಕರಪತ್ರಗಳನ್ನು ಪ್ರಕಟಿಸಿ, ಜನರಿಗೆ ಕಾನೂನುಗಳ ಬಗ್ಗೆ ತಿಳಿವಳಿಕೆ ಮೂಡಿಸುತ್ತಿದೆ.

ಇದೇ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ, ಕಾನೂನಿನ ಬಗೆಗಿನ20 ಸಾವಿರ ಕಿರು ಹೊತ್ತಿಗೆಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಿದೆ.

‘ಕಳೆದ ಮೂರು ದಿನಗಳಿಂದ ಸಾಹಿತ್ಯ ಸಮ್ಮೇಳನದಲ್ಲಿ ಧಾರವಾಡ ಜಿಲ್ಲಾ ಸೇವಾ ಪ್ರಾಧಿಕಾರದ ವತಿಯಿಂದ ಈ ಕಾರ್ಯ ನಡೆದಿದ್ದು, ಒಂಭತ್ತು ಬಗೆಯ ಕಿರುಹೊತ್ತಿಗೆಗಳನ್ನು ಸಾರ್ವಜನಿಕರಿಗೆ ನೀಡಲಾಗಿದೆ’ ಎಂದು ಧಾರವಾಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ಎಸ್. ಚಿನ್ನಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಮಹಿಳೆಯರಿಗೆ, ಜನಸಾಮಾನ್ಯರಿಗೆ, ಅಸಂಘಟಿತ ಕ್ಷೇತ್ರಗಳಲ್ಲಿನ ಕೆಲಸಗಾರರಿಗೆ, ಮಾನಸಿಕ ರೋಗಿಗಳ ಮತ್ತು ಮಾನಸಿಕ ಅಶಕ್ತ ವ್ಯಕ್ತಿಗಳಿಗೆ, ಮಕ್ಕಳಿಗೆ ಕಾನೂನು ಸೇವೆಗಳು, ಬುಡಕಟ್ಟು ಜನರ ಹಕ್ಕು ಜಾರಿ ಮತ್ತು ಸಂರಕ್ಷಣೆ, ಮಾದಕ ಔಷಧ/ ಮದ್ದು ದುರ್ಬಳಕೆಗೆ ಬಲಿಯಾದವರಿಗೆ ಕಾನೂನು ಸೇವೆ
ಗಳು ಮತ್ತು ಮಾದಕ ಔಷಧ ವಿಪತ್ತಿನ ನಿರ್ಮೂಲನೆ ಬಗೆಗಿನ ಕೈಪಿಡಿಗಳನ್ನು ಉಚಿತವಾಗಿ ನೀಡಲಾಗಿದೆ ಎಂದು ಅವರು ತಿಳಿಸಿದರು.

‘ಸಮ್ಮೇಳನದಲ್ಲಿ ಜನ ಸೇರುತ್ತಾರೆ ಹೀಗಾಗಿ ಅಲ್ಲಿಯೇ ಪ್ರಾಧಿಕಾರದ ವತಿಯಿಂದ ಪುಸ್ತಕ ಮಳಿಗೆ ತೆಗೆದುಕೊಂಡು ಈ ಕಾರ್ಯ ಮಾಡಲಾಗಿದೆ. ಈ ಹಿಂದೆ ಪ್ರಾಧಿಕಾರದ ವತಿಯಿಂದ ಜನರಿಗಾಗಿ ಕಾನೂನು ಅರಿವು ಮೂಡಿಸುಲು ವಿದ್ಯಾರ್ಥಿಗಳಿಗಾಗಿ ಕಾನೂನು ಸಾಕ್ಷರತೆ, ಕಾನೂನು ಅರಿವು, ಸಂಚಾರಿ ಕಾನೂನು ಸಾಕ್ಷಾರತಾ ರಥ ಹೀಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ, ಜನರಲ್ಲಿ ಕಾನೂನಿನ ಅರಿವನ್ನು ಪ್ರಾಧಿಕಾರ ಮಾಡುತ್ತಿದೆ’ ಎಂದರು.

‘ಒಟ್ಟಿನಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಕಾನೂನಿನ ಅರಿವು ಮೂಡಿಸುವುದು ನಮ್ಮ ಪ್ರಾಧಿಕಾರದ ಮುಖ್ಯ ಉದ್ದೇಶ ಈ ನಿಟ್ಟಿನಲ್ಲಿ ನಮ್ಮ ಪ್ರಾಧಿಕಾರ ಕಾರ್ಯ ನಿರ್ವಹಿಸುತ್ತಿದೆ’ ಎಂದು ಆರ್‌.ಎಸ್‌. ಚಿನ್ನಣ್ಣವರ ಹೇಳಿದರು.

****

ಜನಸಾಮಾನ್ಯರಿಗೆ ಕಾನೂನಿನ ಬಗ್ಗೆ ಮಾಹಿತಿ ಇರುವುದಿಲ್ಲ. ಆ ತಿಳಿವಳಿಕೆ ಸಿಗಲೆಂದೇ ಕಾನೂನು ನೆರವು ಪಡೆಯುವ ಮಾಹಿತಿ ಇರುವ ಕೈಪಿಡಿಗಳನ್ನು ಉಚಿತವಾಗಿ ನೀಡಿದ್ದೇವೆ

-ಬಸವರಾಜ ಸಂಗಾನಟ್ಟಿ, ಧಾರವಾಡ ಜಿಲ್ಲಾ ಕಾನೂನು ಪ್ರಾಧಿಕಾರದ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.