ADVERTISEMENT

ಗಡಿ ವಿಚಾರ: ಸರ್ಕಾರಕ್ಕೆ ಗಂಭೀರತೆಯೂ ಇಲ್ಲ, ಕಾಳಜಿಯೂ ಇಲ್ಲ; ಪಾಟೀಲ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 22:30 IST
Last Updated 20 ಡಿಸೆಂಬರ್ 2022, 22:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ‘ಗಡಿ ವಿಚಾರದಲ್ಲಿ ಮಹಾರಾಷ್ಟ್ರದ ನಡೆ ಅಕ್ಷಮ್ಯ. ಆದರೂ ಕರ್ನಾಟಕ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅಮಿತ್‌ ಶಾ ಕರೆದಿದ್ದ ಸಭೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರಸ್ಕಾರ ಮಾಡಿ, ರಾಜ್ಯದ ಅಭಿಪ್ರಾಯ ಮುಟ್ಟಿಸಬೇಕಿತ್ತು’ ಎಂದು ಶಾಸಕ ಎಚ್‌.ಕೆ. ಪಾಟೀಲ ಹೇಳಿದರು.

‘ಗಡಿಯಲ್ಲಿ ಶಾಂತಿ ರಕ್ಷಣೆಗೆ ಕೇಂದ್ರ ಗೃಹಸಚಿವರು ಸಭೆ ನಡೆಸಿದರು. ಅಂದರೆ ಗಡಿಯಲ್ಲಿ ಅಶಾಂತಿ ಇದೆ ಎಂದು ಮೂರೂ ಕಡೆ ಅಧಿಕಾರದಲ್ಲಿರುವ ಬಿಜೆಪಿಯವರೇ ಪುರಾವೆ ಸೃಷ್ಟಿ ಮಾಡಿದಂತೆ ಆಯಿತಲ್ಲ. ಸಭೆಗೆ ಹೋಗಿ ತಪ್ಪು ಮಾಡಿದ ಮುಖ್ಯಮಂತ್ರಿ ಜನರ ಕ್ಷಮೆ ಕೇಳಬೇಕು’ ಎಂದು ಮಂಗಳವಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT