ADVERTISEMENT

ಕಾಂಗ್ರೆಸ್ ನಮ್ಮ ಹೆಸರು ಕೆಡಿಸಲು ಯತ್ನಿಸಿದಷ್ಟು ಕಮಲ ಅರಳುತ್ತದೆ: ರಾಜನಾಥ ಸಿಂಗ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮಾರ್ಚ್ 2023, 13:24 IST
Last Updated 2 ಮಾರ್ಚ್ 2023, 13:24 IST
ಕೊಪ್ಪಳದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಮಾತನಾಡಿದರು.
ಕೊಪ್ಪಳದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಮಾತನಾಡಿದರು.    

ಬೆಂಗಳೂರು: ಕರ್ನಾಟಕದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಗುರುವಾರ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಬಿಜೆಪಿ ಮೂರನೇ ಎರಡರಷ್ಟು ಬಹುಮತ ಪಡೆಯುವುದು ನಮ್ಮ ಗುರಿಯಾಗಿದೆ. ಕಾಂಗ್ರೆಸ್ ನಮ್ಮ ಹೆಸರು ಕೆಡಿಸಲು ಯತ್ನಿಸಿದಷ್ಟು ಕಮಲ ಅರಳುತ್ತದೆ’ ಎಂದು ಹೇಳಿದ್ದಾರೆ.

‘ಕರ್ನಾಟಕ ಮತ್ತು ಭಾರತದ ಜನರು ಭಾರತೀಯ ಜನತಾ ಪಕ್ಷವನ್ನು ನಮ್ಮ ದೇಶದ ಏಕೈಕ ವಿಶ್ವಾಸಾರ್ಹ ಪಕ್ಷವೆಂದು ಒಪ್ಪಿಕೊಂಡಿದ್ದಾರೆ, ಆದ್ದರಿಂದ ಪ್ರಧಾನಿ ಮೋದಿಯವರ ದೂರದೃಷ್ಟಿಯಿಂದಾಗಿ ಬಿಜೆಪಿಗೆ ಬೆಂಬಲ ಹೆಚ್ಚಾಗಿದೆ’ ಎಂದು ಸಿಂಗ್ ತಿಳಿಸಿದ್ದಾರೆ.

ADVERTISEMENT

‘ಆಧುನಿಕತೆ ಮತ್ತು ಪೌರಾಣಿಕತೆಯ ಸಮ್ಮಿಲನ ಹೊಂದಿರುವುದು ಈ ರಾಜ್ಯದ ಸೌಭಾಗ್ಯ ಹಾಗೂ ವಿಶೇಷತೆ. ಆದಿ ಕವಿ ಪಂಪ, ರನ್ನ, ಪೊನ್ನ, ಅಕ್ಕಮಹಾದೇವಿ, ಬಸವೇಶ್ವರರು ಜನಿಸಿದ ನಾಡಿದು. ಕಿತ್ತೂರು ರಾಣಿ ಚೆನ್ನಮ್ಮನ ಸಾಹಸದ ಕಥೆಗಳು ಇಂದಿಗೂ ಇಲ್ಲಿ ನೆಲೆಗೊಂಡಿದೆ’ ಎಂದು ಸಿಂಗ್ ಬಣ್ಣಿಸಿದ್ದಾರೆ.

‘ಕರ್ನಾಟಕವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಪ್ರಧಾನಿ ಮೋದಿ ಅವರು ಎಂದಿಗೂ ಬೇಧ–ಭಾವ ಮಾಡಲಿಲ್ಲ. ಅವರಿಂದಾಗಿ ರಾಜ್ಯದಲ್ಲಿ ಹೆಲಿಕಾಪ್ಟರ್ ಉತ್ಪಾದನಾ ಘಟಕ, ಕೈಗಾರಿಕಾ ಕಾರಿಡಾರ್‌ ಸ್ಥಾಪನೆ ಮೂಲಕ ಸಾವಿರಾರು‌ ಜನರು ಉದ್ಯೋಗ‌ ಪಡೆದಿದ್ದಾರೆ’ ಎಂದು ಸಿಂಗ್ ಹೇಳಿದ್ದಾರೆ.

ಚನ್ನಮ್ಮನ ಕಿತ್ತೂರಿನಲ್ಲಿ ಗುರುವಾರ ವಿಜಯ ಸಂಕಲ್ಪ ಯಾತ್ರೆ ಕೈಗೊಂಡ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು, ರಾಣಿ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜನರತ್ತ ಕೈ ಬೀಸಿದರು

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.