ADVERTISEMENT

ರಜೆ ಇದ್ದಿದ್ದಕ್ಕೆ ಬಜರಂಗ ದಳ ತರಬೇತಿಗೆ ಶಾಲಾ ಆವರಣ ಬಳಕೆ: ಕಟೀಲ್ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 16 ಮೇ 2022, 11:23 IST
Last Updated 16 ಮೇ 2022, 11:23 IST
   

ಕಲಬುರಗಿ: ಶಾಲೆಗೆ ರಜೆ ಇದ್ದಿದ್ದರಿಂದ ಕೊಡಗು ಜಿಲ್ಲೆ ಪೊನ್ನಂಪೇಟೆಯ ಶಾಲೆಯನ್ನು ಬಜರಂಗದಳ ಕಾರ್ಯಕರ್ತರಿಗೆ ತರಬೇತಿ‌ ನೀಡಲು ಬಳಸಿಕೊಳ್ಳಲಾಗಿತ್ತು. ತರಬೇತಿ ಸಂದರ್ಭದಲ್ಲಿ ಚಾಕುವಿಗಿಂತ ಸಣ್ಣ ‌ಗಾತ್ರದ ತ್ರಿಶೂಲ ನೀಡುವ ರೂಢಿ ಇದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ‌ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜರಂಗ ದಳದವರು ಶಸ್ತ್ರಾಸ್ತ್ರ ತರಬೇತಿ ನೀಡಿರುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ, ಆಯುಧ ಬಳಕೆ ತರಬೇತಿ ನೀಡುವುದಿಲ್ಲ. ತ್ರಿಶೂಲವನ್ನು ನೀಡುವ ಸಂಪ್ರದಾಯ ಬಜರಂಗ ದಳದಲ್ಲಿ ಇದೆ ಎಂದರು‌.

ADVERTISEMENT

ಹಿಜಾಬ್, ಹಲಾಲ್ ಹಾಗೂ ಮಸೀದಿಗಳಲ್ಲಿ ಹಿಂದೂ ದೇವರ ವಿಗ್ರಹಗಳ ಅಸ್ತಿತ್ವದ ಬಗ್ಗೆ ಸಂಶೋಧನೆ ನಡೆಸುವ ಬಗ್ಗೆ ಹೋರಾಟಗಾರರ ಮನವಿ‌ ಮೇರೆಗೆ ಸರ್ಕಾರ‌ ಕ್ರಮ ಕೈಗೊಳ್ಳುತ್ತಿದೆಯೇ ಹೊರತು ಸರ್ಕಾರವೇ ಇವುಗಳಿಗೆ ಕುಮ್ಮಕ್ಕು ನೀಡುತ್ತಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.