ADVERTISEMENT

ಶಿವಮೊಗ್ಗ ಲೋಕಸಭಾ ಉಪಚುನಾವಣೆ: ಎರಡು ಗ್ರಾಮದಲ್ಲಿ ಮತದಾನ ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2018, 6:02 IST
Last Updated 3 ನವೆಂಬರ್ 2018, 6:02 IST
ಶಿವಮೊಗ್ಗ ತಾಲ್ಲೂಕು ದೊಡ್ಡಮಟ್ಟಿ‌ ಗ್ರಾಮಸ್ಥರು ಮತದಾನಕ್ಕೆ ನಿರಾಕರಣೆ ಮಾಡಿದ್ದು, ತಹಸೀಲ್ದಾರ್ ಸತ್ಯ ನಾರಾಯಣ ಜನರ ಮನವೊಲಿಕೆಯಲ್ಲಿ ತೊಡಗಿದ್ದರು.
ಶಿವಮೊಗ್ಗ ತಾಲ್ಲೂಕು ದೊಡ್ಡಮಟ್ಟಿ‌ ಗ್ರಾಮಸ್ಥರು ಮತದಾನಕ್ಕೆ ನಿರಾಕರಣೆ ಮಾಡಿದ್ದು, ತಹಸೀಲ್ದಾರ್ ಸತ್ಯ ನಾರಾಯಣ ಜನರ ಮನವೊಲಿಕೆಯಲ್ಲಿ ತೊಡಗಿದ್ದರು.   

ಶಿವಮೊಗ್ಗ:ಲೋಕಸಭಾ ಉಪಚುನಾವಣೆಯಲ್ಲಿ ಶಿವಮೊಗ್ಗ ತಾಲೂಕಿನ ಹೊಳೆ ಬೆಳೆಗಲು ಗ್ರಾಮ ಹಾಗೂ ದೊಡ್ಡಮಟ್ಟಿ ಗ್ರಾಮಗಳ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ.

ಹೊಳೆಬೆಳಗಲು ಮತಗಟ್ಟೆ ಸಂಖ್ಯೆ152ರಲ್ಲಿ ಮತದಾನ ಮಾಡಲು ಗ್ರಾಮಸ್ಥರು ಬರುತ್ತಿಲ್ಲ. ಈ ಗ್ರಾಮದಲ್ಲಿ 500ಕ್ಕೂ ಹೆಚ್ಚ ಮತದಾರು ಇದ್ದಾರೆ.

ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯ ದೊಡ್ಡಮಟ್ಟಿ ಯಲ್ಲೂ ಮತದಾನ ಬಹಿಷ್ಕಾರ ಮಾಡಲಾಗಿದೆ.

ADVERTISEMENT

ಮತಗಟ್ಟೆ ಸಂಖ್ಯೆ 11ಕ್ಕೆ ಮತದಾನ ಮಾಡಲು ಗ್ರಾಮಸ್ಥರು ಬರುತ್ತಿಲ್ಲ. 400ಕ್ಕೂ ಹೆಚ್ಚು ಮತದಾರರು ಈ ಗ್ರಾಮದಲ್ಲಿದ್ದಾರೆ.

ವಿವಿ ಪ್ಯಾಡ್‌ ಸಮಸ್ಯೆ
ಸಾಗರ ತಾಲ್ಲೂಕಿನ ತಾಳಗುಪ್ಪ ಮತಗಟ್ಟೆ ಸಂಖ್ಯೆ 219ರಲ್ಲಿ ವಿವಿ ಪ್ಯಾಡ್ ಸಮಸ್ಯೆ ಹಿನ್ನಲೆ ಒಂದು ಗಂಟೆ ತಡವಾದರೂ ಮತದಾನ ಆರಂಭವಾಗಿರಲಿಲ್ಲ. ಮತದಾನ ಮಾಡಲು ನೂರಾರು ಮತದಾರರು ಸಾಲುಗಟ್ಟಿ ನಿಂತಿದ್ದರು.

ಗೆಲುವು ನಮ್ಮದೇ: ರಾಘವೇಂದ್ರ
ಶನಿವಾರ ಆಂಜನೇಯ ವಾರ, ದೆವರ ಆಶೀರ್ವಾದ ಪಡೆದು ಮತದಾನ ಮಾಡಿದ್ದೇವೆ. ನೂರಕ್ಕೆ ನೂರರಷ್ಟು ನಾವು ಗೆಲ್ಲುತ್ತೇವೆ. ಕಳದೆ 25 ದಿನಗಳಿಂದ 8 ಕ್ಷೆತ್ರಗಳಲ್ಲಿ ಶಾಸಕರು ಹಾಗೂ ಕಾರ್ಯಕರ್ತರ ಪರಿಶ್ರಮ ಹಾಕಿದ್ದಾರೆ. ಮತ್ತೊಮ್ಮೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದೆ ಗೆಲ್ಲುತ್ತದೆ ಎಂದು ಬಿಜೆಪಿ ಅಭ್ಯರ್ಥಿ ವಿ.ವೈ.ರಾಘವೇಂದ್ರ ಹೇಳಿದರು.

ಕುಬಟೂರಿನ‌ ಮತಗಟ್ಟೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪಮತಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.