ADVERTISEMENT

Live: ಉಪ ಚುನಾವಣೆ ಫಲಿತಾಂಶ | ಬೆಳಗಾವಿ ಲೋಕಸಭೆ, ಬಸವಕಲ್ಯಾಣ ವಿಧಾನಸಭೆಯಲ್ಲಿ ಬಿಜೆಪಿ ಪಾರುಪತ್ಯ, ಮಸ್ಕಿ ವಿಧಾನಸಭೆ ‘ಕೈ’ ವಶ

ಬೆಳಗಾವಿ/ ರಾಯಚೂರು/ಬೀದರ್‌: ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಬೆಳಿಗ್ಗೆ 8ರಿಂದ ಆರಂಭವಾಗಿದೆ.

​ಪ್ರಜಾವಾಣಿ ವಾರ್ತೆ
Published 2 ಮೇ 2021, 16:01 IST
Last Updated 2 ಮೇ 2021, 16:01 IST

ಬೆಳಗಾವಿ ಲೋಕಸಭೆ, ಬಸವಕಲ್ಯಾಣ ವಿಧಾನಸಭೆಯಲ್ಲಿ ಬಿಜೆಪಿ ಪಾರುಪತ್ಯ , ಮಸ್ಕಿ ವಿಧಾನಸಭೆ ‘ಕೈ’ ವಶ

5240 ಮತಗಳ ಅಂತರದಿಂದ ಬಿಜೆಪಿಯ ಮಂಗಲಾ ಅಂಗಡಿ ಅವರಿಗೆ ಗೆಲುವು

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ವಿಜೇತರಾದ ಬಿಜೆಪಿಯ ಮಂಗಲಾ ಸುರೇಶ ಅಂಗಡಿ ಅವರಿಗೆ ಜಿಲ್ಲಾ ಚುನಾವಾಧಿಕಾರಿ ಪ್ರಮಾಣಪತ್ರ ವಿತರಿಸಿದರು

ಬಿಜೆಪಿಯ ಮಂಗಲಾ ಅಂಗಡಿ ಅವರಿಗೆ 4123 ಮತಗಳಿಂದ ಮುನ್ನಡೆ.

59ಸಾವಿರ ಮತಗಳ ಎಣಿಕೆಯಷ್ಟೆ ಬಾಕಿ

59ಸಾವಿರ ಮತಗಳ ಎಣಿಕೆಯಷ್ಟೆ ಬಾಕಿ ಇದೆ. ಕೊನೆ ಕ್ಷಣದಲ್ಲಿನ ಬೆಳವಣಿಗೆಗಳು ಕುತೂಹಲಕ್ಕೆ ಕಾರಣವಾಗಿವೆ. ಈ ಕ್ಷೇತ್ರದಲ್ಲಿ ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ 4 ಲಕ್ಷ ಮಿಕ್ಕಿ ಮತ ಗಳಿಸಿದ್ದು ಇದೇ ಮೊದಲಾಗಿದೆ. 

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸಿದೆ.

ಬಿಜೆಪಿ- ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಕಂಡುಬರುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಮುನ್ನಡೆಯಲ್ಲಿ ಇಳಿಕೆ ಕಂಡುಬರುತ್ತಿದೆ. ಒಮ್ಮೊಮ್ಮೆ ಏರಿಕೆ ಆಗುತ್ತಿದೆ. ಹೀಗಾಗಿ ಗೆಲುವಿನ ಮಾಲೆ ಯಾರಿಗೆ ಸಿಗಲಿದೆ ಎನ್ನುವುದು ಕುತೂಹಲ ಮೂಡಿಸುತ್ತಿದೆ.

ADVERTISEMENT

77 ನೇ ಸುತ್ತು ಮುಕ್ತಾಯ

ಕಾಂಗ್ರೆಸ್ ಮುನ್ನಡೆ-1972

ಬಿಜೆಪಿ-407679

ಕಾಂಗ್ರೆಸ್ -409651

ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ 4060 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಮುಂದುವರಿದಿದ್ದು, ಸಂಜೆ 4.16ರ ಸುಮಾರಿಗೆ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ 4060 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ 10676 ಮತಗಳ ಮುನ್ನಡೆ

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ- ಮಧ್ಯಾಹ್ನ 3.24ರ ಸುಮಾರಿಗೆ
ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ 10676 ಮತಗಳ ಮುನ್ನಡೆ ಕಂಡುಕೊಂಡಿದ್ದಾರೆ

ಮಸ್ಕಿ: 30,606 ಮತಗಳಿಂದ ಕಾಂಗ್ರೆಸ್ ಗೆಲುವು

ರಾಯಚೂರು: ಜಿಲ್ಲೆಯ ಮಸ್ಕಿ‌ ವಿಧಾನಸಭೆ ಉಪ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಅವರು 30,606 ಮತಗಳ ಅಂತರದೊಂದಿಗೆ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಅವರಿಗೆ 55,731 ಮತಗಳನ್ನು ಪಡೆದಿದ್ದರೆ, ಬಸನಗೌಡ ಅವರಿಗೆ 86,337 ಮತಗಳು ಬಂದಿವೆ.

ಮಧ್ಯಾಹ್ನ 2.45ರ ವೇಳೆಗೆ: ಬೆಳಗಾವಿ– 9,859 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಮುಂದುವರಿದಿದ್ದು ಮಧ್ಯಾಹ್ನ 2.40ರ ವೇಳೆಗೆ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ 9,248 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಬಿಜೆಪಿಯ ಮಂಗಲಾ ಅಂಗಡಿ 279859 ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಸತೀಶ ಜಾರಕಿಹೊಳಿ 2,89,107 ಮತಗಳನ್ನು ಪಡೆದಿದ್ದಾರೆ. ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನಾ ಬೆಂಬಲಿತ ಅಭ್ಯರ್ಥಿ ಶುಭಂ ಶೆಳಕೆ 86,894 ಮತಗಳನ್ನು ಗಳಿಸಿದ್ದಾರೆ.

ಮಧ್ಯಾಹ್ನ 2.20ರ ವೇಳೆಗೆ– ಬೆಳಗಾವಿ ಲೋಕಸಭಾ ಉಪಚುನಾವಣೆ ಮತ ಎಣಿಕೆ: 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿದ್ದು, ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಮುನ್ನಡೆ ಗಳಿಸಿದ್ದಾರೆ. ಎರಡರಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅವರು ಬೆಳಗಾವಿ ದಕ್ಷಿಣ ಹಾಗೂ ಗೋಕಾಕ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಮುಂದಿದ್ದಾರೆ.

ಉಳಿದಂತೆ ಅರಭಾವಿ, ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಬೈಲಹೊಂಗಲ, ಸವದತ್ತಿ- ಯಲ್ಲಮ್ಮ ಹಾಗೂ ರಾಮದುರ್ಗದಲ್ಲಿ ಕಾಂಗ್ರೆಸ್ ಮುನ್ನಡೆ ಕಂಡಿದೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗಿಂತಲೂ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಾಗೂ ಶಿವಸೇನಾ ಬೆಂಬಲಿತ ಅಭ್ಯರ್ಥಿ ಶುಭಂ ಶೆಳಕೆ ಹೆಚ್ಚು ಮತಗಳನ್ನು (ಈವರೆಗೆ ) ಪಡೆದಿದ್ದಾರೆ. 

ಈ ವೇಳೆ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ 264187 ಹಾಗೂ ಬಿಜೆಪಿಯ ಮಂಗಲಾ ಅಂಗಡಿ 256824 ಮತಗಳನ್ನು ಗಳಿಸಿದ್ದಾರೆ. ಸತೀಶ 7363 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಅಂತರವು ಐದಂಕಿಯಿಂದ ನಾಲ್ಕಂಕಿಗೆ ಇಳಿಕೆಯಾಗಿದೆ.

ಬಿಜೆಪಿಯ ಮಂಗಲಾ ವಿರುದ್ಧ ಸತೀಶ ಜಾರಕಿಹೊಳಿಗೆ 10,025 ಮತಗಳ ಮುನ್ನಡೆ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸತೀಶ ಜಾರಕಿಹೊಳಿ 10 ಸಾವಿರ ಮತಗಳ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಎಣಿಕೆ ಆರಂಭವಾದ್ದರಿಂದ ಇಷ್ಟು ಪ್ರಮಾಣದಲ್ಲಿ ಮುನ್ನಡೆ ಸಾಧಿಸಿದ್ದು ಇದೇ ಮೊದಲು.

252104 ಮತಗಳನ್ನು ಪಡೆದಿರುವ ಅವರು, ಬಿಜೆಪಿಯ ಮಂಗಲಾ ಅಂಗಡಿ ಅವರನ್ನು ಹಿಂದಿಕ್ಕಿದ್ದಾರೆ. ಮಂಗಲಾ 242079 ಮತಗಳನ್ನು ಗಳಿಸಿದ್ದಾರೆ.

ಕೈ ಹಿಡಿಯದ ಅನುಕಂಪ;  ಕಾಂಗ್ರೆಸ್‌ಗೆ ಅಡ್ಡಿಯಾದ ‘ಮತವಿಭಜನೆ’ :ಬಸವಕಲ್ಯಾಣದಲ್ಲಿ ಬಿಜೆಪಿಗೆ ಸಿಹಿ

ಬಸವಕಲ್ಯಾಣ: ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಅನುಕಂಪ ಮತ್ತು ‘ಸ್ವಾಭಿಮಾನ’ ಕೆಲಸ ಮಾಡಲಿಲ್ಲ. ಮತದಾರರು ‘ಇವನಾರವ’ ಎನ್ನದೆ ‘ಹೊರಗಿನ’ ಅಭ್ಯರ್ಥಿಯನ್ನು ಗೆಲ್ಲಿಸಿದರು.

ಕಾಂಗ್ರೆಸ್‌ ಶಾಕರಾಗಿದ್ದ ಬಿ.ನಾರಾಯಣರಾವ್‌ ಅವರು ಕೋವಿಡ್‌ನಿಂದ ನಿಧನರಾಗಿದ್ದರಿಂದ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಿತು. ದಿವಂಗತ ನಾರಾಯಣರಾವ್‌ ಅವರ ಪತ್ನಿ ಮಾಲಾ ಅವರನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್‌ ಪಕ್ಷ ಅನುಕಂಪದಲ್ಲಿ ಗೆಲುವು ಸಾಧಿಸಬಹುದು ಎಂದು ನಂಬಿತ್ತು.

ಬಿಜೆಪಿ ಟಿಕೆಟ್‌ ಸಿಗದ ಕಾರಣ ಬಂಡೆದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ‘ಬಿಜೆಪಿ ನಾಯಕರು ಹೊರಗಿನ ವ್ಯಕ್ತಿಗೆ ಮಣೆ ಹಾಕಿದ್ದಾರೆ. ಸ್ವಾಭಿಮಾನಕ್ಕೆ ಮತ ನೀಡಿ’ ಎಂದು ಪ್ರಚಾರ ನಡೆಸಿದ್ದರು. ಆದರೆ, ಇಲ್ಲಿ ಅದೂ ಕೆಲಸ ಮಾಡಲಿಲ್ಲ.

‘ಇದು ಬಸವಣ್ಣನ ನಾಡು. ಇವನಾರವ, ಇವನಾರವ ಎನ್ನದೇ ಇವ ನಮ್ಮವ ಇವ ನಮ್ಮವ ಎನ್ನಿ’ ಎಂದು ಬಿಜೆಪಿಯವರು ಪ್ರಚಾರದ ವೇಳೆ ಮನವಿ ಮಾಡುತ್ತಿದ್ದರು.
ಬಿಜೆಪಿ ಅಭ್ಯರ್ಥಿ ಶರಣು ಸಲಗರ ಕಳೆದ ಬಾರಿಯ ಕೋವಿಡ್‌ ಲಾಕ್‌ಡೌನ್‌ ವೇಳೆ ಇಡೀ ಕ್ಷೇತ್ರ ಸುತ್ತಿ ಜನರಿಗೆ ನೆರವಾಗಿದ್ದರು. ‘ಸಮಾಜ ಸೇವಕ’ ಎಂದು ಜನ ತಮ್ಮನ್ನು ನಂಬುವಂತೆ ಮಾಡಿದ್ದರು.

ಶರದ್‌ ಪವಾರ್‌ ನೇತೃತ್ವದ ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ಮಾಜಿ ಶಾಸಕ, ಮರಾಠ ಸಮಾಜದ ಮುಖಂಡ ಮಾರುತಿರಾವ್‌ ಮುಳೆ ಅವರನ್ನು ಕಣದಿಂದ ಹಿಂದೆ ಸರಿಸಿ  ಅವರನ್ನು ತನ್ನತ್ತ ಸೆಳೆದು ಮರಾಠ ಮತಗಳ ವಿಭಜನೆ ತಪ್ಪಿಸಿದ್ದು ಬಿಜೆಪಿಗೆ ಅನುಕೂಲವಾಯಿತು.

ಜೆಡಿಎಸ್‌ ಇಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಕಾಂಗ್ರೆಸ್‌ಗೆ ದುಬಾರಿಯಾಗಿ ಪರಿಣಮಿಸಿತು.   ಇಲ್ಲಿ ಮುಸ್ಲಿಂ ಮತಗಳು ವಿಭಜನೆಯಾಗಿ, ಕಾಂಗ್ರೆಸ್‌ ಅಭ್ಯರ್ಥಿಯ ಸೋಲಿಗೆ ಕಾರಣವಾಯಿತು.

20,629 ಮತಗಳ ಅಂತರದಿಂದ ಬಿಜೆಪಿಯ ಶರಣು ‌ಸಲಗರ ಭರ್ಜರಿ ಗೆಲುವು

ಬೀದರ್: ಬಸವ ಕಲ್ಯಾಣ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ‌ಸಲಗರ 20,629 ಮತಗಳ ಅಂತರದಿಂದ ಭರ್ಜರಿ ಗೆಲುವು ‌ಸಾಧಿಸಿದರು.

ಇಲ್ಲಿನ ಬಿ.ವಿ. ಭೂಮರೆಡ್ಡಿ ‌ಕಾಲೇಜಿನಲ್ಲಿ‌ ಮತ ಎಣಿಕೆ ನಡೆಯಿತು. ಮೊದಲ ಸುತ್ತಿನಿಂದಲೇ ಶರಣು ಮುನ್ನಡೆ ‌ಕಾಯ್ದುಕೊಂಡಿದ್ದರು.

ಚುನಾವಣಾಧಿಕಾರಿ ಡಾ. ಆರ್. ರಾಮಚಂದ್ರನ್ ಪ್ರಮಾಣಪತ್ರ ನೀಡಿದರು.

ನಂತರ ‌ಸುದ್ದಿಗಾರರೊಂದದಿಗೆ ಮಾತನಾಡಿದ ಶರಣು, ಈ ಕ್ಷಣದಿಂದಲೇ ಕ್ಷೇತ್ರದ ಜನತೆಯ‌ ಕೋವಿಡ್ ‌ಸಂಕಷ್ಟಗಳಿಗೆ ಸ್ಪಂದಿಸುತ್ತೇನೆ. ಪಕ್ಷ ನನ್ನ ಮೇಲೆ ವಿಶ್ವಾಸ ಇಟ್ಟು ಗೆಲ್ಲಿಸಿದೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.

ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ‌ಖೂಬಾ ಠೇವಣಿ ‌ಕಳೆದುಕೊಂಡರು‌ ಎಂದು ವ್ಯಂಗ್ಯವಾಡಿದರು.

ಬೆಳಗಾವಿ: 43ನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ‌ ಚುನಾವಣೆ ಬಿಜೆಪಿಗೆ ಹಿನ್ನಡೆ.

43ನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ.ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಸತೀಶ ಜಾರಕಿಹೊಳಿ 246468 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯ ಮಂಗಲಾ ಅಂಗಡಿ 
236872 ಮತಗಳನ್ನು ಗಳಿಸಿ 9596 ಮತಗಳಿಂದ ಹಿನ್ನಡೆ ಅನುಭವಿಸಿದ್ದಾರೆ.

ಮಸ್ಕಿ: ಕಾಂಗ್ರೆಸ್‌ನ ಬಸನಗೌಡ ಗೆಲುವು ಬಹುತೇಕ‌ ಖಚಿತ, ಅಧಿಕೃತ ಘೋಷಣೆಯೊಂದೇ ಬಾಕಿ

ರಾಯಚೂರು: ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ 24 ಸಾವಿರ ಅಂತರದೊಂದಿಗೆ ಬಹುತೇಕ ಗೆಲುವು ಸಾಧಿಸಿದ್ದಾರೆ. ‌

ಇನ್ನೂ ಮೂರು ಸುತ್ತಿನ ಮತಗಳ ಎಣಿಕೆ ಮಾತ್ರ ಬಾಕಿ ಇದೆ. 

ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರು ಪಕ್ಷ ಬದಲಿಸಿ ಸೋಲು ಅನುಭವಿಸಿದಂತಾಗಿದೆ.‌ ಕಾಂಗ್ರೆಸ್ ‌ಬಿಟ್ಟು‌ ಶಾಸಕ ಸ್ಥಾನಕ್ಕೆ‌ ರಾಜೀನಾಮೆ ನೀಡಿರುವುದು ಕ್ಷೇತ್ರದಲ್ಲಿ ‌ವಿರೋಧಿ ಅಲೆಗೆ ಕಾರಣವಾಗಿತ್ತು.

ಸಂಸದ ಖೂಬಾ ಕಾಲಿಗೆ ನಮಸ್ಕರಿಸಿದ ಶರಣು ಸಲಗರ

ಬೀದರ್: ಬಸವ ಕಲ್ಯಾಣ ಉಪಚುನಾವಣೆಯಲ್ಲಿ ಗೆಲುವು ‌ಖಚಿತವಾಗುತ್ತಿದ್ದಂತೆಯೇ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಮತದಾನ ಕೇಂದ್ರಕ್ಕೆ ಬಂದ ಸಂಸದ ಭಗವಂತ ಖೂಬಾ ಅವರ ಕಾಲಿಗೆ ತಲೆಬಾಗಿ ನಮಸ್ಕರಿಸಿದರು.

ಜೆಡಿಎಸ್ ಅಭ್ಯರ್ಥಿ ‌ಸಯ್ಯದ್ ಯಶ್ರಬ್ ಸಲಗರ ಅವರನ್ನು ಅಪ್ಪಿಕೊಂಡು ಅಭಿನಂದನೆ ಸಲ್ಲಿಸಿದರು.

ತಮ್ಮ ಸೋಲು ಖಚಿತವಾಗುತ್ತಿದ್ದಂತೆಯೇ ಕಾಂಗ್ರೆಸ್ ಅಭ್ಯರ್ಥಿ ‌ಮಾಲಾ‌ ನಾರಾಯಣರಾವ್ ಮತ ಎಣಿಕೆ ಕೇಂದ್ರದಿಂದ ನಿರ್ಮಿಸಿದರು.

ಸದ್ಯಕ್ಕೆ 24 ಸುತ್ತಿನ ಮತ ಎಣಿಕೆ ‌ಮುಕ್ತಾಯವಾಗಿದ್ದು, ಶರಣು ‌ಸಲಗರ 16,483 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ‌.

ಇನ್ನೂ ನಾಲ್ಕು ಸುತ್ತಿನ ಮತ ಎಣಿಕೆ ಬಾಕಿ‌ ಇದೆ.

ಮತ ಗಳಿಕೆ: 50 ಸಾವಿರ ಗಡಿ ದಾಟಿದ ಎಂಇಎಸ್, ಶಿವಸೇನಾ ಬೆಂಬಲಿತ ಅಭ್ಯರ್ಥಿ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಮುಂದುವರಿದಿದ್ದು, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್ ) ಹಾಗೂ ಶಿವಸೇನಾ ಬೆಂಬಲಿತ ಅಭ್ಯರ್ಥಿ‌ ಶುಭಂ ಶೆಳಕೆ ಈವರೆಗೆ 51805 ಮತಗಳನ್ನು ಗಳಿಸಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಗೆ ಪೈಪೋಟಿ ಕೊಟ್ಟಿದ್ದಾರೆ.

ಆ ಅಭ್ಯರ್ಥಿ 15- 20ಸಾವಿರ ಮತ ಗಳಿಸಬಹುದು ಎಂದು ವಿಶ್ಲೇಷಣೆ ಮಾಡಲಾಗಿತ್ತು. ಆದರೆ ಅವರು ಹೆಚ್ಚಿನ ಮತ ಪಡೆದಿರುವುದು ಹುಬ್ಬೇರುವಂತೆ ಮಾಡಿದೆ. ಹಿಂದುತ್ವ, ಗಡಿ ವಿವಾದ ಪ್ರಸ್ತಾಪಿಸಿ  ಹಾಗೂ ನಗರಪಾಲಿಕೆ ಎದುರು ಕನ್ನಡ ಧ್ವಜ ಹಾರಿಸಿದ್ದನ್ನು ತೆರವುಗೊಳಿಸಬೇಕು ಎಂಬ ವಿಷಯ ಮುಂದಿಟ್ಟುಕೊಂಡು ಪ್ರಚಾರ ನಡೆಸಿದ್ದರು. 
ಅವರು ಬಿಜೆಪಿಯ ಸಾಂಪ್ರದಾಯಿಕ ಮತಗಳನ್ನು ಕಸಿದುಕೊಂಡಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಶುಭಂ, ಎಂಇಎಸ್ ಆದೇಶದ ಮೇಲೆ ಸ್ಪರ್ಧಿಸಿದ್ದೆ. ಗ್ರಾಮೀಣ ವಿಧಾನಸಭಾ ಕ್ಷೇತ್ರ ಸೇರಿದಂತೆ ಮರಾಠಿ ಭಾಷಿಗರು ಹೆಚ್ಚಿರುವ ಪ್ರದೇಶದಲ್ಲಿ ಬೆಂಬಲ ಸಿಕ್ಕಿರುವುದು ಕಂಡುಬಂದಿದೆ. ಕನ್ನಡದವರೂ ನನ್ನನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು.

ಬೆಳಗಾವಿ ಲೋಕಸಭಾ ಕ್ಷೇತ್ರ: ಬಿಜೆಪಿ ಹಿಂಬಾಲಿಸುತ್ತಿರುವ ಕಾಂಗ್ರೆಸ್

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿದ್ದು, ಬಿಜೆಪಿಯ ನ್ನು ಕಾಂಗ್ರೆಸ್ ವೇಗವಾಗಿ ಹಿಂಬಾಲಿಸುತ್ತಿದೆ.

ಬಿಜೆಪಿ- ಕಾಂಗ್ರೆಸ್ ನಡುವಿನ‌ ಅಂತರ ಈ ಕ್ಷಣದಲ್ಲಿ ನಾಲ್ಕಂಕಿಗೆ ಇಳಿದಿದೆ. ಐದಂಕಿಯ ಮುನ್ನಡೆ ಸಾಧಿಸಿದ್ದ ಬಿಜೆಪಿಯ ಮಂಗಲಾ ಅಂಗಡಿ ಈಗ 5907 ಮತಗಳ ಲೀಡಲಷ್ಟೇ ಇದ್ದಾರೆ. 187919 ಮತಗಳನ್ನು ಅವರು ಪಡೆದಿದ್ದಾರೆ. ಕಾಂಗ್ರೆಸ್‌ನ ಸತೀಶ 182210 ಮತಗಳನ್ನು ಗಳಿಸಿದ್ದಾರೆ.

ಬಸವ ಕಲ್ಯಾಣ: ಬಿಜೆಪಿ ಅಭ್ಯರ್ಥಿ ಶರಣು ಸಲಗರ 14,188 ಮತಗಳ ಭಾರಿ ಮುನ್ನಡೆ

ಬಿಜೆಪಿಗೆ 14,188 ಮತಗಳ  ಮುನ್ನಡೆ

ಬೀದರ್: ಬಸವ ಕಲ್ಯಾಣ ಉಪಚುನಾವಣೆಯ 19ನೇ ಸುತ್ತಿನ  ಮತ ಎಣಿಕೆ ‌ಮುಕ್ತಾಯವಾಗಿದ್ದು, ಬಿಜೆಪಿ ಅಭ್ಯರ್ಥಿ ಶರಣು ಸಲಗರ 14,188 ಮತಗಳ ಭಾರಿ ಮುನ್ನಡೆ ಸಾಧಿಸಿದ್ದಾರೆ.

ಶರಣು 47,804, ಕಾಂಗ್ರೆಸ್ ನ‌ ಮಾಲಾ ನಾರಾಯಣರಾವ್ 33,616 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸಯ್ಯದ್ ಯಶ್ರಬ್ 10,152 ಮತಗಳನ್ನು ‌ಪಡೆದರು.

ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ 7550 ಮತಗಳನ್ನು ಪಡೆದರು.

ಇನ್ನೂ 9 ಸುತ್ತಿನ ಮತಗಳ ಎಣಿಕೆ ನಡೆಯಬೇಕಿದೆ.

ಬೆಳಗಾವಿ: 10.16 ಲಕ್ಷ ಮತದಾನ ಆಗಿತ್ತು. ಈವರೆಗೆ 3.20 ಲಕ್ಷ ಮತ ಎಣಿಕೆಯಷ್ಟೇ ನಡೆದಿದೆ

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ‌ ಚುನಾವಣೆಯಲ್ಲಿ 10.16 ಲಕ್ಷ ಮತದಾನ ಆಗಿತ್ತು. ಈವರೆಗೆ 3.20 ಲಕ್ಷ ಮತ ಎಣಿಕೆಯಷ್ಟೇ ನಡೆದಿದೆ. ನಾಲ್ಕೂವರೆ ತಾಸುಗಳಿಂದ ಮತ ಎಣಿಕೆ ನಡೆಯುತ್ತಿದೆ. ಕೋವಿಡ್ ಕಾರಣದಿಂದಾಗಿ ಕಡಿಮೆ ಸಿಬ್ಬಂದಿ ನಿಯೋಜಿಸಿರುವುದರಿಂದಾಗಿ ಮತ ಎಣಿಕೆಯ ವೇಗ ಹಿಂದಿನ ಚುನಾವಣೆಗಳ ಮತ ಎಣಿಕೆಯಷ್ಟು ಪ್ರಮಾಣದಲ್ಲಿಲ್ಲ.

ಬಿಜೆಪಿಗೆ 13,044  ಮತಗಳ ಭಾರಿ ಮುನ್ನಡೆ

ಬೀದರ್: ಬಸವ ಕಲ್ಯಾಣ ಉಪಚುನಾವಣೆಯ 18ನೇ ಸುತ್ತಿನ ಮತ ಎಣಿಕೆ ‌ಮುಕ್ತಾಯವಾಗಿದ್ದು, ಬಿಜೆಪಿ ಅಭ್ಯರ್ಥಿ ಶರಣು ಸಲಗರ 13,044 ಮತಗಳ ಭಾರಿ ಮುನ್ನಡೆ ಸಾಧಿಸಿದ್ದಾರೆ.

ಶರಣು 44,614, ಕಾಂಗ್ರೆಸ್ ನ‌ ಮಾಲಾ ನಾರಾಯಣರಾವ್ 31,570 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸಯ್ಯದ್ ಯಶ್ರಬ್ 10,052 ಮತಗಳನ್ನು ‌ಪಡೆದರು.

ಇನ್ನೂ 10 ಸುತ್ತಿನ ಮತ ಎಣಿಕೆ ಬಾಕಿ ಇದೆ.

ಮತ ಎಣಿಕೆ ಕೇಂದ್ರದಿಂದ ಹೊರ ನಡೆದ ಪ್ರತಾಪ್ ಗೌಡ ಪಾಟೀಲ್ 

ರಾಯಚೂರು: ಮಸ್ಕಿ ವಿಧಾನಸಭಾ ಉಪಚುನಾವಣೆ ಮತದಾನ ಎಣಿಕೆ ಪ್ರಕ್ರಿಯೆ ಭರದಿಂದ ಸಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಾರಿ ಅಂತರ ಕಾಯ್ದುಕೊಂಡಿದ್ದಾರೆ.
ಸೋಲುವುದು ನಿಶ್ಚಿತ ‌ಎನ್ನುವುದನ್ನು ಅರಿತುಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಅವರು ಮತ ಎಣಿಕೆ ಕೇಂದ್ರದಿಂದ ಹೊರ ನಡೆದರು.

'ಕ್ಷೇತ್ರದಲ್ಲಿ ವಿರೋಧಿ ಅಲೆ ಎದ್ದಿರುವುದು ಗೊತ್ತಾಗುತ್ತಿದೆ. ಅಭಿವೃದ್ಧಿ ಕೆಲಸಗಳನ್ನು ಮಾಡಿದಾಗ್ಯೂ ಜನರು ಬೆಲೆ ಕೊಟ್ಟಿಲ್ಲ. ನಿರೀಕ್ಷಿತ ಮತಗಟ್ಟೆಯಲ್ಲೂ ಬಿಜೆಪಿಗೆ ಮತಗಳು ಬಂದಿಲ್ಲ' ಎಂದು ಪ್ರತಾಪಗೌಡ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸೋಲಿಗೆ ಏನು ಕಾರಣ ಎಂಬುದು ಆನಂತರ ಪಕ್ಷದ ಹಿರಿಯರು ಕುರಿತು ಚರ್ಚಿಸಲಿದ್ದಾರೆ. ಪಕ್ಷದ ‌ತೀರ್ಮಾನಕ್ಕೆ  ಬದ್ಧವಾಗಿದ್ದೇನೆ' ಎಂದರು.

ಮ ಸ್ಕಿ: ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳಗೆ 20 ಸಾವಿರ ಮತಗಳ ಮುನ್ನಡೆ

ರಾಯಚೂರು: ಮಸ್ಕಿ ಉಪಚುನಾವಣೆಯ 17 ನೇ ಸುತ್ತಿನ ಮತಗಳ ಎಣಿಕೆ ಪೂರ್ಣಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ 20 ಸಾವಿರ ಮತಗಳ ಅಂತರ ಕಾಯ್ದುಕೊಂಡಿದ್ದಾರೆ.

ಬಸವ ಕಲ್ಯಾಣ: 14ನೇ ಸುತ್ತಿನಲ್ಲೂ ಬಿಜೆಪಿ ಮುನ್ನಡೆ

ಬೀದರ್: ಬಸವ ಕಲ್ಯಾಣ ಉಪಚುನಾವಣೆಯ 14ನೇ ಸುತ್ತಿನ ಮತ ಎಣಿಕೆ ‌ಮುಕ್ತಾಯವಾಗಿದ್ದು, ಬಿಜೆಪಿ ಅಭ್ಯರ್ಥಿ ಶರಣು ಸಲಗರ 8233 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಶರಣು 32,790, ಕಾಂಗ್ರೆಸ್ ನ‌ ಮಾಲಾ ನಾರಾಯಣರಾವ್ 24,567 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸಯ್ಯದ್ ಯಶ್ರಬ್ 9253 ಮತಗಳನ್ನು ‌ಪಡೆದರು.

14ನೇ ಸುತ್ತಿನಲ್ಲೂ ಬಿಜೆಪಿ ಮುನ್ನಡೆ

ಬೀದರ್: ಬಸವ ಕಲ್ಯಾಣ ಉಪಚುನಾವಣೆಯ 14ನೇ ಸುತ್ತಿನ ಮತ ಎಣಿಕೆ ‌ಮುಕ್ತಾಯವಾಗಿದ್ದು, ಬಿಜೆಪಿ ಅಭ್ಯರ್ಥಿ ಶರಣು ಸಲಗರ 8233 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಶರಣು 32,790, ಕಾಂಗ್ರೆಸ್ ನ‌ ಮಾಲಾ ನಾರಾಯಣರಾವ್ 24,567 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸಯ್ಯದ್ ಯಶ್ರಬ್ 9253 ಮತಗಳನ್ನು ‌ಪಡೆದರು.

ಬಸವ ಕಲ್ಯಾಣ ಪಟ್ಟಣದ ಮತ ಎಣಿಕೆ ‌ಮುಗಿದಿದ್ದು, ಗ್ರಾಮೀಣ ಭಾಗದ ಮತ ಎಣಿಕೆ ‌ಆರಂಭವಾಗಿದೆ.

ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳಕರ ಅವರ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಎಂಇಎಸ್ ಹಾಗೂ ಶಿವಸೇನಾ ಅಭ್ಯರ್ಥಿ ಹವಾ

ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳಕರ ಅವರ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಎಂಇಎಸ್ ಹಾಗೂ ಶಿವಸೇನಾ ಅಭ್ಯರ್ಥಿ ಹವಾ ಕಂಡುಬಂದಿದೆ.
ಶುಭಂ ಶಳಕೆ 9865 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಅಲ್ಲಿ
ಎಂಇಎಸ್ 19536,  ಬಿಜೆಪಿಯ ಮಂಗಲಾ ಅಂಗಡಿ 10148 ಹಾಗೂ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ 9865 ಮತಗಳನ್ನು ಗಳಿಸಿದ್ದಾರೆ.

ಅರಭಾವಿ ವಿಧಾನಸಭಾ ಕ್ಷೇತ್ರದಲ್ಲಿ 2,585 ಮತಗಳಿಂದ ಕಾಂಗ್ರೆಸ್‌ ಮುನ್ನಡೆ

ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ‌ ಪ್ರತಿನಿಧಿಸುವ ಅರಭಾವಿ ವಿಧಾನಸಭಾ ಕ್ಷೇತ್ರದಲ್ಲಿ 2,585 ಮತಗಳಿಂದ ಕಾಂಗ್ರೆಸ್‌ ಮುನ್ನಡೆ ಗಳಿಸಿದೆ.
ತಮ್ಮ ಬಾಲಚಂದ್ರ ಕ್ಷೇತ್ರದಲ್ಲಿ ಅಣ್ಣ ಸತೀಶ ಜಾರಕಿಹೊಳಿ‌ಗೆ ಮುನ್ನಡೆ ಸಿಕ್ಕಿದೆ. ಅಲ್ಲಿ ಬಿಜೆಪಿಯ ಮಂಗಲಾ ಅಂಗಡಿ 14501 ಹಾಗೂ ಕಾಂಗ್ರೆಸ್‌ನ ಸತೀಶ 17086 ಮತಗಳನ್ನು ಗಳಿಸಿದ್ದಾರೆ.

ರಮೇಶ ಜಾರಕಿಹೊಳಿ‌ ಪ್ರತಿನಿಧಿಸುವ ಗೋಕಾಕ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ 6446 ಮತಗಳ ಮುನ್ನಡೆ

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ 25ನೇ ಸುತ್ತಿನಲ್ಲಿ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ‌ ಪ್ರತಿನಿಧಿಸುವ ಗೋಕಾಕ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ 6446 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅಣ್ಣನ ಕ್ಷೇತ್ರದಲ್ಲಿ ತಮ್ಮ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಹಿನ್ನಡೆ ಅನುಭವಿಸಿದ್ದಾರೆ.

ಬಸವ ಕಲ್ಯಾಣದಲ್ಲಿ 12ನೇ ಸುತ್ತಿನಲ್ಲಿ ಬಿಜೆಪಿ 8240 ಮತಗಳ ಮುನ್ನಡೆ

ಬೀದರ್: ಬಸವ ಕಲ್ಯಾಣ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ‌ಶರಣು ಸಲಗರ 8240 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಶರಣು 28728 ಮತಗಳನ್ನು ‌ಪಡೆದರೆ ಕಾಂಗ್ರೆಸ್ ನ ಮಾಲಾ ನಾರಾಯಣರಾವ್ 20,488 ಮತಗಳನ್ನು ಪಡೆದಿದ್ದಾರೆ.

ಈಗ 64,437 ಮತಗಳ ಎಣಿಕೆ ಮುಕ್ತಾಯವಾಗಿದ್ದು, ಇನ್ನೂ 83,210 ಮತಗಳ ಎಣಿಕೆ ‌ನಡೆಯಬೇಕಿದೆ.

11ನೇ ಸುತ್ತಿನಲ್ಲೂ ಬಿಜೆಪಿ 9,299 ಮತಗಳ ಮುನ್ನಡೆ

ಬೀದರ್: 11ನೇ ಸುತ್ತಿನಲ್ಲೂಯ ಬಿಜೆಪಿ ಅಭ್ಯರ್ಥಿ ಶರಣು ‌ಸಲಗರ 9299 ಮತಗಳ ಮುನ್ನಡೆ ಸಾಧಿಸಿದ್ದಾರೆ. 

ಶರಣು 27835 ಮತಗಳನ್ನು ಪಡೆದರೆ, ಕಾಂಗ್ರೆಸ್ ನ ಮಾಲಾ ನಾರಾಯಣರಾವ್ 18536 ಮತಗಳನ್ನು ಪಡೆದಿದ್ದಾರೆ.

ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ‌ಖೂಬಾ 4514 ಮತಗಳನ್ನು ಮಾತ್ರ ಪಡೆದಿದ್ದಾರೆ.

ಮಂಗಲಾ ಅಂಗಡಿಗೆ 11,213 ಮತಗಳ ಮುನ್ನಡೆ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿದ್ದು, ಬಿಜೆಪಿಯ ಮಂಗಲಾ ಸುರೇಶ ಅಂಗಡಿ ಅವರು ಈವರೆಗೆ ಇದೇ ಮೊದಲಿಗೆ ಐದಂಕಿಯ ಮತಗಳಿಂದ ಅಂತರ ಕಂಡುಕೊಂಡಿದ್ದಾರೆ. 

117549 ಮತಗಳನ್ನು ಪಡೆದಿರುವ ಅವರು, 11,213 ಮತಗಳ ಅಂತರದಿಂದ ಮುನ್ನಡೆ ಗಳಿಸಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಅಭ್ಯರ್ಥಿ 107401 ಮತಗಳನ್ನು ಪಡೆದಿದ್ದಾರೆ.

ಒಂಬತ್ತನೇ ಸುತ್ತಿನಲ್ಲಿ ಬಿಜೆಪಿ 7355 ಮತಗಳ ಮುನ್ನಡೆ

ಬೀದರ್: ಬಸವ ಕಲ್ಯಾಣ ‌ಉಪಚುನಾವಣೆ ಮತ ಎಣಿಕೆಯ 9ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿಯ ಶರಣು ಸಲಗರ 7355 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಶರಣು 23354 ಮತಗಳನ್ನು ಪಡೆದರೆ, ಸಮೀಪದ ‌ಪ್ರತಿಸ್ಪರ್ಧಿ ಕಾಂಗ್ರೆಸ್ ನ ಮಾಲಾ ನಾರಾಯಣರಾವ್ 15999 ಮತಗಳನ್ನು ಪಡೆದರು.

ಇನ್ನೂ 19 ಸುತ್ತಿನ ಮತ ಎಣಿಕೆ ‌ನಡೆಯಬೇಕಿದೆ.

ಎಂಟನೇ ಸುತ್ತಿನಲ್ಲಿ ಬಿಜೆಪಿಯ ಶರಣುಗೆ 7966 ಮತಗಳ ಮುನ್ನಡೆ

ಬೀದರ್: ಬಸವ ಕಲ್ಯಾಣ ಉಪಚುನಾವಣೆಯ ಎಂಟನೇ ಸುತ್ತಿನ ‌ಮತ ಎಣಿಕೆಯಲ್ಲಿ ಬಿಜೆಪಿಯ ಶರಣು ‌ಸಲಗರ 7966 ಮತಗಳ ಮುನ್ನಡೆ ಸಾಧಿಸಿದ್ದಾರೆ. ಶರಣು 22063 ಮತಗಳನ್ನು ‌ಪಡೆದರೆ, ಕಾಂಗ್ರೆಸ್ ನ ಮಾಲಾ ನಾರಾಯಣರಾವ್ 14097 ಮತಗಳನ್ನು ಪಡೆದರು. ಜೆಡಿಎಸ್ ನ ಸಯ್ಯದ್ ಯಶ್ರಬ್ 2488 ಮತಗಳನ್ನು ‌ಪಡೆದರು

ಮತ ಗಳಿಕೆ: ಲಕ್ಷ ದಾಟಿದ ಮಂಗಲಾ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿದ್ದು, ಬಿಜೆಪಿಯ ಮಂಗಲಾ ಸುರೇಶ ಅಂಗಡಿ ಲಕ್ಷ ಮತಗಳ ಗಡಿ ದಾಟಿದ್ದಾರೆ.

101294 ಮತಗಳನ್ನು ಪಡೆದಿದ್ದರೆ,  ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ 92564 ಮತಗಳನ್ನು ಗಳಿಸಿದ್ದಾರೆ. 8640 ಮತಗಳಿಂದ ಬಿಜೆಪಿಯ ಮಂಗಲಾ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಬೆಳಗಾವಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆಯಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ದೊಡ್ಡ ಮಟ್ಟದ ಅಂತರ ಕಂಡು ಬರುತ್ತಿಲ್ಲ. ಪ್ರಸ್ತುತ ಬಿಜೆಪಿಯ ಮಂಗಲಾ ಅಂಗಡಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅಂತರವು 6ಸಾವಿರ  ಆಸುಪಾಸಿನಲ್ಲಿದೆ. ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಕೂಡ ಪೈಪೋಟಿ ತೋರುತ್ತಿದ್ದಾರೆ. ಜಿದ್ದಾಜಿದ್ದಿಯ ಪೈಪೋಟಿ ಕಂಡುಬಂದಿದೆ. ಅಂತರವು ಈವರೆಗೂ ಐದಂಕಿಗಳನ್ನು ದಾಟಿಲ್ಲ. 
 

ಬಸವ ಕಲ್ಯಾಣದಲ್ಲಿ ಆರನೇ ಸುತ್ತಿನಲ್ಲೂ ಬಿಜೆಪಿ ‌ಮುನ್ನಡೆ

ಬೀದರ್: ಬಸವ ಕಲ್ಯಾಣ ‌ಉಪಚುನಾವಣೆಯ ಆರನೇ ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ಶರಣು ‌ಸಲಗರ 8122 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಶರಣು 18004 ಮತಗಳನ್ನು ‌ಪಡೆದರೆ, ಕಾಂಗ್ರೆಸ್ ನ ಮಾಲಾ ನಾರಾಯಣರಾವ್ 9882 ಮತಗಳನ್ನು ‌ಪಡೆದರು. ಜೆಡಿಎಸ್ ನ ಸಯ್ಯದ್ ‌ಯಶ್ರಬ್ 1304 ಮತಗಳನ್ನು ಪಡೆದರು.

ಇನ್ನೂ 22 ಸುತ್ತಿನ ‌ಮತ ಎಣಿಕೆ ಬಾಕಿ ಇದೆ.

ಮಸ್ಕಿ 9 ನೇ ಸುತ್ತು: ಕಾಂಗ್ರಸ್‌ಗೆ 10996 ಮತಗಳ ಮುನ್ನಡೆ

ರಾಯಚೂರು: ಮಸ್ಕಿ ಉಪಚುನಾವಣೆಯ 9 ನೇ ಸುತ್ತಿನ ಮತಗಳ ಎಣಿಕೆ ಪೂರ್ಣಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ 10996 ಮತಗಳ ಅಂತರ ಕಾಯ್ದುಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಒಟ್ಟು 29374 ಮತಗಳು ಹಾಗೂ ಬಿಜೆಪಿಗೆ 18,378 ಮತಗಳು ಬಂದಿವೆ.

ಬೆಳಗಾವಿ: ಬಿಜೆಪಿ ಮನ್ನಡೆ, ಮಂಗಲಾ ಅಂಗಡಿಗೆ 87468, ಕಾಂಗ್ರೆಸ್‌ನ ಸತೀಶ ಜಾರಕಿಹೊಳಿಗೆ 83927 ಮತ

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಮನ್ನಡೆ ಕಾಯ್ದುಕೊಂಡಿದೆ. 

ಬಿಜೆಪಿಯ ಮಂಗಲಾ ಅಂಗಡಿ 87468 ಮತಗಳನ್ನು ಗಳಿಸಿದ್ದಾರೆ. ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ 83927 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯ ಮಂಗಲಾ ಅಂಗಡಿ 3541 ಮತಗಳ ಅಂತರದಿಂದ  ಮುನ್ನಡೆ ಸಾಧಿಸಿದ್ದಾರೆ.

ಐದನೇ ಸುತ್ತಿನಲ್ಲಿ ‌ಬಿಜೆಪಿಗೆ 7152 ಮತಗಳ ಮುನ್ನಡೆ

ಬೀದರ್: ಬಸವ ಕಲ್ಯಾಣ ಉಪಚುನಾವಣೆಯ ಐದನೇ ಸುತ್ತಿನಲ್ಲಿಯೂ ಬಿಜೆಪಿ ಅಭ್ಯರ್ಥಿ ಶರಣು ಸಲಗರ 7152 ಮತಗಳ ಮುನ್ನಡೆ ಸಾಧಿಸಿದ್ದಾರೆ‌.

ಶರಣು ಸಲಗರ 15,052 ಮತಗಳನ್ನು ಪಡೆದರೆ, ಕಾಂಗ್ರೆಸ್ ನ ಮಾಲಾ ನಾರಾಯಣರಾವ್ 7900, ಜೆಡಿಎಸ್ ನ ಸಯ್ಯದ್ ಯಶ್ರಬ್ 1158 ಮತಗಳನ್ನು ಪಡೆದರು.

ಮತಗಟ್ಟೆ ಹತ್ತಿರ ಸುಳಿಯದ‌ ಬೆಂಬಲಿಗರು

ಬೀದರ್: ಕೊರೊನಾ ಸೋಂಕಿನ ಭಯದಿಂದ ವಿವಿಧ ಪಕ್ಷಗಳ ‌ಬೆಂಬಲಿಗರು ಬಸವ ಕಲ್ಯಾಣ ‌ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿರುವ ಇಲ್ಲಿನ ಬಿ.ವಿ. ಭೂಮರೆಡ್ಡಿ ಕಾಲೇಜಿನತ್ತ ಸುಳಿಯುತ್ತಿಲ್ಲ.

ಮತ ಎಣಿಕೆ ‌ಕೇಂದ್ರದಿಂದ ಒಂದು ‌ಕಿಲೋ ಮೀಟರ್ ‌ಅಂತರದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಪಾಸ್ ಇದ್ದವರು ಹಾಗೂ ‌ಕೊರೊನಾ ನೆಗೆಟಿವ್ ‌ಇದ್ದವರಿಗಷ್ಟೇ ಒಳಗಡೆ ಬರಲು ಅವಕಾಶ ಕಲ್ಪಿಸಲಾಗಿದೆ.

ಕೊರೊನಾ ಭಯದಿಂದ ಪಾಸ್ ಇದ್ದ ಹಲವರು ಇತ್ತ ಬಂದಿಲ್ಲ.

ಬಿಜೆಪಿ ಅಭ್ಯರ್ಥಿ ಶರಣು ಸಲಗರ, ಕಾಂಗ್ರೆಸ್ ಅಭ್ಯರ್ಥಿ ‌ಮಾಲಾ ನಾರಾಯಣರಾವ್ ಮತ ಎಣಿಕೆ ‌ಕೇಂದ್ರದಲ್ಲಿದ್ದಾರೆ.

ಮಸ್ಕಿ: ಕಾಂಗ್ರೆಸ್ ಗೆ 7,047 ಮತಗಳ ಮುನ್ನಡೆ

ರಾಯಚೂರು: ಮಸ್ಕಿ‌ ವಿಧಾನಸಭೆ ಉಪಚುನಾವಣೆಯ ಆರು ಸುತ್ತಿನ‌ ಮತಗಳ ಎಣಿಕೆ ಪೂರ್ಣವಾಗಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಸತತ ಮುನ್ನಡೆ ಸಾಧಿಸುತ್ತಿದ್ದಾರೆ.

ನಾಲ್ಕನೇ ಸುತ್ತಿನಲ್ಲಿ‌ 1477, ಐದನೇ ಸುತ್ತಿನಲ್ಲಿ 1173 ಹಾಗೂ 1647 ಮತಗಳಿಂದ ಕಾಂಗ್ರೆಸ್ ಮುನ್ನಡೆಯಲ್ಲಿದೆ.

ಇದುವರೆಗಿನ ಒಟ್ಟು ಮತಗಳ ಎಣಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯು ಒಟ್ಟು 7,047 ಮತಗಳ ಅಂತರ ಕಾಯ್ದುಕೊಂಡಿದ್ದಾರೆ.

ಬಸವ ಕಲ್ಯಾಣ: ಮೂರನೇ ಸುತ್ತಿನಲ್ಲಿ ಬಿಜೆಪಿ 4434 ಮತಗಳ ಮುನ್ನಡೆ

ಬೀದರ್: ಬಸವ ಕಲ್ಯಾಣ ‌ಉಪಚುನಾವಣೆಯ ಮೂರ‌ನೇ ಸುತ್ತಿನ ‌ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿಯ ಶರಣು ಸಲಗರ 4434 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಶರಣು 9282 ಮತಗಳನ್ನು ‌ಪಡೆದರೆ, ಕಾಂಗ್ರೆಸ್ ನ ಮಾಲಾ ನಾರಾಯಣರಾವ್ 4848 ಮತಗಳನ್ನು ‌ಪಡೆದಿದ್ದಾರೆ. ಜೆಡಿಎಸ್ ನ ಸಯ್ಯದ್ ಯಶ್ರಬ್ 808 ಮತಗಳನ್ನು ‌ಪಡೆದು‌ ಮೂರನೇ ಸ್ಥಾನದಲ್ಲಿದ್ದಾರೆ.

ಬಿಜೆಪಿ ‌ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ 420 ಮತಗಳನ್ನು ‌ಪಡೆದಿದ್ದಾರೆ.

50 ಸಾವಿರ ಮತಗಳ ಗಡಿ ದಾಟಿದ ಮಂಗಲಾ ಅಂಗಡಿ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿದ್ದು, ಬಿಜೆಪಿಯ ಮಂಗಲಾ ಸುರೇಶ ಅಂಗಡಿ 50ಸಾವಿರ ಮತಗಳನ್ನು ಗಳಿಸಿದ್ದಾರೆ.

ಈವರೆಗೆ 53920 ಮತಗಳನ್ನು ಗಳಿಸಿರುವ ಅವರು ಪ್ರತಿಸ್ಪರ್ಧಿ ಸತೀಶ ಜಾರಕಿಹೊಳಿ ಅವರಿಗಿಂತ 3065 ಮತಗಳ ಮುನ್ನಡೆ ಕಂಡಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಹಾವು ಏಣಿ ಆಟ

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಹಾವು ಏಣಿ ಆಟ ನಡೆಯುತ್ತಿದೆ.
ಒಮ್ಮೆ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಮುನ್ನಡೆ ಸಾಧಿಸಿದರೆ, ಇನ್ನೊಮ್ಮೆ ಬಿಜೆಪಿಯ ಮಂಗಲಾ ಸುರೇಶ ಅಂಗಡಿ ಮುಂದೆ ಬರುತ್ತಿದ್ದಾರೆ. ಸಮಬಲದ ಪೈಪೋಟಿ ಕಂಡುಬರುತ್ತಿದೆ. ಈ ಕ್ಷಣದಲ್ಲಿ ಮಂಗಲಾ 42700 ಮತಗಳನ್ನು ಪಡೆದಿದ್ದರೆ, ಸತೀಶ 40889 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯು 1811 ಮತಗಳಿಂದ ಮುನ್ನಡೆ ಕಂಡಿದೆ.

ಎರಡನೇ ಸುತ್ತಿನ ಮತ ಎಣಿಕೆಯಲ್ಲೂ ಬಿಜೆಪಿ ಮುನ್ನಡೆ

ಬೀದರ್: ಬಸವ ಕಲ್ಯಾಣ ಉಪಚುನಾವಣೆಯ ಎರಡನೇ ಸುತ್ತಿನ ಮತ ಎಣಿಕೆಯಲ್ಲಿಯೂ ಬಿಜೆಪಿ ಅಭ್ಯರ್ಥಿ ಶರಣು ‌ಸಲಗರ 3252 ಮತಗಳ ‌ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ‌‌. 

ಶರಣು ‌ಸಲಗರ 6440 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಮಾಲಾ ನಾರಾಯಣರಾವ್ 3188 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ನ ಸಯ್ಯದ್ ಯಶ್ರಬ್ 549 ಮತಗಳನ್ನು ಪಡೆದಿದ್ದಾರೆ..

ಒಟ್ಟು 28 ಸುತ್ತುಗಳಲ್ಲಿ ಮತ ಎಣಿಕೆ  ನಡೆಯುತ್ತಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಈವರೆಗೆ, ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ 38170 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ಮಂಗಲಾ ಸುರೇಶ ಅಂಗಡಿ 39631 ಮತಗಳನ್ನು ಗಳಿಸಿ, 1461 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ಮಂಗಲಾಗೆ ಮುನ್ನಡೆ

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯ  ಮಹಾದೇವಪ್ಪ ಯಾದವಾಡ ಪ್ರತಿನಿಧಿಸುವ ರಾಮದುರ್ಗ ಕ್ಷೇತ್ರದಲ್ಲಿ ಬಿಜೆಪಿಯ ಮಂಗಲಾ ಅಂಗಡಿ ಮುನ್ನಡೆಯಲ್ಲಿದ್ದಾರೆ.

ಅಲ್ಲಿ ಆರು ಸುತ್ತುಗಳ ಮತ ಎಣಿಕೆ ನಡೆದಿದೆ. ಬಿಜೆಪಿಯ ಮಂಗಲಾ 5523 ಹಾಗೂ ಕಾಂಗ್ರೆಸ್‌ನ ಸತೀಶ
4988 ಮತ ಗಳಿಸಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸತೀಶ ಜಾರಕಿಹೊಳಿ 2218 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಅವರು 18619 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ಮಂಗಲಾ ಸುರೇಶ ಅಂಗಡಿ 16419 ಮತಗಳನ್ನು ಗಳಿಸಿದ್ದಾರೆ. ಎಂಇ ಎಸ್ ಹಾಗೂ ಶಿವಸೇನಾ ಬೆಂಬಲಿತ ಅಭ್ಯರ್ಥಿ ಶುಭಂ ಶೆಳಕೆ 6321 ಮತಗಳನ್ನು ಗಳಿಸಿದ್ದಾರೆ.

ಬಸವ ಕಲ್ಯಾಣ: ಬಿಜೆಪಿ ಅಭ್ಯರ್ಥಿ ಶರಣು ಸಲಗರ ಮುನ್ನಡೆ

ಬೀದರ್: ಬಸವ ಕಲ್ಯಾಣ ಉಪಚುನಾವಣೆ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿ ಅಭ್ಯರ್ಥಿ ಶರಣು ಸಲಗರ 1562 ಮತಗಳ ಮುನ್ನಡೆ ‌ಸಾಧಿಸಿದ್ದಾರೆ.

ಶರಣು ‌ಸಲಗರ 3736 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ‌ಮಾಲಾ ನಾರಾಯಣರಾವ್ 1562 ಮತಗಳನ್ನು ಪಡೆದಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಸಯ್ಯದ್ ಯಶ್ರಬ್ 254 ಮತಗಳನ್ನು ಪಡೆದಿದ್ದಾರೆ.

102ರಲ್ಲಿ ಟಿಎಂಸಿ ಮತ್ತು 92ರಲ್ಲಿ ಬಿಜೆಪಿ ಮುನ್ನಡೆ

ಪಶ್ಚಿಮ ಬಂಗಾಳದಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿ ನಡೆಯುತ್ತಿದ್ದು, 102ರಲ್ಲಿ ಟಿಎಂಸಿ ಮತ್ತು 92ರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿವೆ.

ಬಿಜೆಪಿಯ ಅನಿಲ ಬೆನಕೆ ಕ್ಷೇತ್ರದಲ್ಲಿ ಬಿಜೆಪಿಯ ಮಂಗಲಾ ಅಂಗಡಿ ಅವರಿಗೆ 2900 ಮತಗಳ ಮುನ್ನಡೆ

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯ ಅನಿಲ ಬೆನಕೆ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮಂಗಲಾ ಅಂಗಡಿ ಅವರಿಗೆ 2900 ಮತಗಳ ಮುನ್ನಡೆ ಸಿಕ್ಕಿದೆ.

ಆರು ಸುತ್ತುಗಳಲ್ಲಿ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಅವರಿಗೆ ಮುನ್ನಡೆ.

ಆರು ಸುತ್ತುಗಳಲ್ಲಿ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಅವರಿಗೆ ಮುನ್ನಡೆ.
ಬಿಜೆಪಿಯ ಮಂಗಲಾ ಅಂಗಡಿ 14418, ಕಾಂಗ್ರೆಸ್ ಸತೀಶ 18004 ಮತಗಳನ್ನು ಪಡೆದಿದ್ದಾರೆ. 3586 ಮತಗಳಿಂದ ಸತೀಶ ಜಾರಕಿಹೊಳಿ ಮುನ್ನಡೆ ಸಾಧಿಸಿದ್ದಾರೆ.

ಮೂರು ಸುತ್ತುಗಳಲ್ಲಿ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಅವರಿಗೆ ಮುನ್ನಡೆ.

ಮೂರು ಸುತ್ತುಗಳಲ್ಲಿ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಅವರಿಗೆ ಮುನ್ನಡೆ.
ಬಿಜೆಪಿಯ ಮಂಗಲಾ ಅಂಗಡಿ 6445, ಕಾಂಗ್ರೆಸ್ ಸತೀಶ 9613 ಮತಗಳನ್ನು ಪಡೆದಿದ್ದಾರೆ. 3168 ಮತಗಳಿಂದ ಸತೀಶ ಜಾರಕಿಹೊಳಿ ಮುನ್ನಡೆ ಸಾಧಿಸಿದ್ದಾರೆ.
 

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ.

ಗೋಕಾಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಮುನ್ನಡೆ.
ಬಿಜೆಪಿ: 2489

ಕಾಂಗ್ರೆಸ್: 1069 

1420ರಿಂದ ಬಿಜೆಪಿ ಮುನ್ನಡೆ. ಬಿಜೆಪಿಯ ರಮೇಶ ಜಾರಕಿಹೊಳಿ‌ ಪ್ರತಿನಿಧಿಸುವ ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ.

ಮಸ್ಕಿ: ಎರಡನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನೆಡೆ

ರಾಯಚೂರು: ಮಸ್ಕಿ ವಿಧಾನಸಭಾ ಉಪಚುನಾವಣೆ ಮತ ಎಣಕೆ ಎರಡನೇ ಸುತ್ತಿನಲ್ಲಿ ಕಾಂಗ್ರೆಸ್ 789 ಮತಗಳ ಮುನ್ನಡೆ ಸಾಧಿಸುತ್ತಿದೆ. 
ಕಾಂಗ್ರೆಸ್ ಗೆ 2989 ಮತಗಳು ಹಾಗೂ ಬಿಜೆಪಿಗೆ 2200 ಮತಗಳು ಬಂದಿವೆ. ಆರಂಭದಲ್ಲಿ 5ಎ ಕಾಲುವೆ ಹೋರಾಟ ನಡೆಸಿದ್ದ ಭಾಗದ ಮತಗಳ ಎಣಿಕೆ ನಡೆಯುತ್ತಿದ್ದು, ಕಾಂಗ್ರೆಸ್ ಇನ್ನೂ ಭಾರಿ ಅಂತರ ಸಾಧಿಸುವ ನಿರೀಕ್ಷೆ ಇತ್ತು.

ಅಂಚೆ ಮತಗಳ ಎಣಿಕೆಯಲ್ಲಿ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಮುನ್ನಡೆ

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಅಂಚೆ ಮತಗಳ ಎಣಿಕೆ ನಡೆಯುತ್ತಿದೆ. ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಈವರೆಗೆ ಮುನ್ನಡೆ ಸಾಧಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ 2,263 ಹಾಗೂ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ
2927 ಮತಗಳನ್ನು ಗಳಿಸಿದ್ದಾರೆ. 
664 ಮುನ್ನಡೆ ಸಾಧಿಸಿದ್ದಾರೆ.

ರಾಯಚೂರು: ಮತ ಎಣಿಕೆ ಕೇಂದ್ರದಲ್ಲಿ ಏಜೆಂಟರಿಗೆ ಪಿಪಿ ಕಿಟ್ ಕಡ್ಡಾಯ 

ರಾಯಚೂರು: ಮತ ಎಣಿಕೆ ಕೇಂದ್ರದಲ್ಲಿ ವಿವಿಧ ಪಕ್ಷಗಳಿಂದ ಬಂದಿರುವ ಏಜೆಂಟ್ ರಿಗೆ ಪಿಪಿಇ ಕಿಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಈ ಸಂಬಂಧ ಜಿಲ್ಲಾ ಚುನಾವಣಾಧಿಕಾರಿ ಮೊದಲೇ ಸಭೆ ನಡೆಸಿ ಸೂಚನೆ ನೀಡಿದ್ದರು. 
ಮತ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿರುವ 210 ಸಿಬ್ಬಂದಿಗೂ ಕೋವಿಡ್ ತಪಾಸಣೆ ಕಡ್ಡಾಯ ಗೊಳಿಸಲಾಗಿತ್ತು. ನೆಗೆಟಿವ್ ವರದಿ ಇದ್ದವರು ಮಾತ್ರ‌ಭಾಗಿಯಾಗಿದ್ದಾರೆ.

ನಗರದ ಎಸ್ ಆರ್ ಪಿಎಸ್ ಕಾಲೇಜಿನಲ್ಲಿ 12 ಟೇಬಲ್ ಗಳಲ್ಲಿ ಮತ ಎಣಿಕೆ ಆರಂಭಿಸಲಾಗಿದೆ. ಜಿಲ್ಲಾ‌ ಚುನಾವಣಾಧಿಕಾರಿ ಆರ್.‌ವೆಂಕಟೇಶಕುಮಾರ್ ‌ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆದು ಮತಪೆಟ್ಟಿಗೆಗಳನ್ನು ಪಡೆಯಲಾಯಿತು.

ಬಸವಕಲ್ಯಾಣ: ಅಂಚೆ ಮತ ಎಣಿಕೆ ಆರಂಭ

ಬೀದರ್: ಬಸವಕಲ್ಯಾಣ ಉಪ ಚುನಾವಣೆಯ ಅಂಚೆ ಮತಗಳ ಎಣಿಕೆ ಆರಂಭವಾಗಿದೆ.

1054 ಅಂಚೆ ಮತ ಹಾಗೂ 45 ಸೇವಾ ಮತಗಳ ಎಣಿಕೆ ನಡೆಯುತ್ತಿದೆ.

ಮಸ್ಕಿ: ಆರಂಭದಲ್ಲೆ ಮುನ್ನಡೆಯತ್ತ ಕಾಂಗ್ರೆಸ್

ರಾಯಚೂರು: ಮಸ್ಕಿ ವಿಧಾನಸಭಾ ಉಪಚುನಾವಣೆ ಮತಎಣಿಕೆಯಲ್ಲಿ ಆರಂಭದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದೆ.
ಮೊದಲ ಸುತ್ತಿನ ಮತಗಳ ಎಣಿಕೆಯಲ್ಲಿ ಬಿಜೆಪಿಗಿಂತಲೂ ಕಾಂಗ್ರೆಸ್ 579 ಮತಗಳ ಮುನ್ನಡೆ ಪಡೆದಿದೆ.
ಪಾಮನಕಲ್ಲೂರ ಹೋಬಳಿ ಭಾಗದ ಮತಪೆಟ್ಟಿಗೆಗಳ ಎಣಿಕೆ ಈಗ ನಡೆಯುತ್ತಿದೆ.

ಬೀದರ್: ಬಸವ ಕಲ್ಯಾಣ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭ

ಬೀದರ್: ಬಸವ ಕಲ್ಯಾಣ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ ಚುನಾವಣಾ ಸಿಬ್ಬಂದಿ ಇಲ್ಲಿ‌ನ ಬಿ.ವಿ. ಭೂಮರೆಡ್ಡಿ ಕಾಲೇಜಿನ ಆವರಣದಲ್ಲಿರುವ ಮತ ಎಣಿಕೆ ಕೇಂದ್ರಕ್ಕೆ ಬಂದಿದ್ದಾರೆ.

ವಿವಿಧ ಪಕ್ಷಗಳ ಮತ ಎಣಿಕೆ ಏಜೆಂಟರಿಗೆ ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತದೆ.

ಮುಖಕ್ಕೆ ಡಬಲ್ ಮಾಸ್ಕ್ ಅಥವಾ ಎನ್ 95 ಮಾಸ್ಕ್ ಹಾಕಿಕೊಂಡು ಬರಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಆರ್. ರಾಮಚಂದ್ರನ್ ತಿಳಿಸಿದ್ದಾರೆ.

ಕಳೆದ ಏಪ್ರಿಲ್ 17ರಂದು ನಡೆದಿದ್ದ ಉಪಚುನಾವಣೆಯಲ್ಲಿ 1,47,647 ಜನರು ತಮ್ಮ ಹಕ್ಕು ಚಲಾಯಿಸಿದ್ದರು. ಒಟ್ಟು 326 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 1,24,984 ಪುರಷರ ಮತದಾರರ ಪೈಕಿ 76,451 ಜನರು ಮತ್ತು ಒಟ್ಟು 1,14,794 ಮಹಿಳಾ ಮತದಾರರ ಪೈಕಿ 71,196 ಜನರು ಮತ ಚಲಾಯಿಸಿದ್ದರು. ಇತರೆ ನಾಲ್ಕು ಮತ್ತು ಪುರುಷರು ಹಾಗೂ ಮಹಿಳೆಯರು ಸೇರಿ ಒಟ್ಟು 2,39,782 ಮತದಾರರ ಪೈಕಿ 1,47,647 ಜನರು ಮತ ಚಲಾಯಿಸಿ ಶೇ.61.58ರಷ್ಟು ಮತದಾನ ದಾಖಲಾಗಿತ್ತು.

28 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ.

ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ.

ಬೀದರ್‌: ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ. ಸಿಬ್ಬಂದಿ–ಏಜೆಂಟರಿಗೆ ಕೋವಿಡ್‌ ನೆಗೆಟಿವ್‌ ವರದಿ ಕಡ್ಡಾಯಗೊಳಿಸಲಾಗಿದೆ. ಆರ್‌ಟಿಪಿಸಿಆರ್‌ ವರದಿ ತರದವರಿಗೆ ಸ್ಥಳದಲ್ಲಿಯೇ ರ‍್ಯಾಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ ಮಾಡಲಾಗುತ್ತಿದ್ದು, 200 ಕಿಟ್‌ಗಳನ್ನು ಇಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಬೆಳಗಾವಿ: ಸ್ಟ್ರಾಂಗ್ ರೂಂ ತೆರೆಯಲು ಗೊಂದಲ

ಬೆಳಗಾವಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಆರಂಭದಲ್ಲೇ ಗೊಂದಲ ಉಂಟಾಯಿತು.

ಮೊದಲು ತೆರೆಯಬೇಕಾದ ಸ್ಟ್ರಾಂಗ್ ರೂಂ ಯಾವುದು ಎನ್ನುವುದು ಗೊಂದಲಕ್ಕೆ ಕಾರಣವಾಯಿತು. ನಿಗದಿತ ಕೊಠಡಿ ಬದಲಿಗೆ ಬೇರೆ ಕಡೆಗೆ ತಮ್ಮನ್ನು ಕರೆದುಕೊಂಡು ಹೋದ ಸಿಬ್ಬಂದಿ ವಿರುದ್ಧ ಜಿಲ್ಲಾ ಚುನಾವಣಾ ಅಧಿಕಾರಿ ಡಾ.ಕೆ. ಹರೀಶ್ ಕುಮಾರ್ ಗರಂ ಆದರು. ಆ ಕೊಠಡಿ ಬಳಿ ಚುನಾವಣಾ ವೀಕ್ಷಕರು ಇರಲಿಲ್ಲ. ಇದರಿಂದ ಸಿಬ್ಬಂದಿ ಮೇಲೆ ಅವರು ಸಿಟ್ಟಾದರು.

ಕೆಳಗಿನ ಮಹಡಿಯಲ್ಲಿರುವ ಮತ್ತೊಂದು ಸ್ಟ್ರಾಂಗ್ ರೂಂಗೆ ಬಂದರು. ಆದರೆ ಅಲ್ಲಿ ನಿಯಮಾವಳಿ ಪ್ರಕಾರ ಸ್ಟ್ರಾಂಗ್ ರೂಂ ತೆರೆಯುವ ನಿಗದಿತ ಸಿಬ್ಬಂದಿ ಇರಲಿಲ್ಲ. ಹೀಗಾಗಿ ಸಿಬ್ಬಂದಿಗಾಗಿ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಚುನಾವಣಾ ಏಜೆಂಟರು ಕಾಯುತ್ತಿದ್ದಾರೆ. ಕೆಲ ಸಮಯದ ನಂತರ ಪ್ರಕ್ರಿಯೆ ಈಗ ಆರಂಭವಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.