ADVERTISEMENT

Covid-19 Karnataka Update: 14,304 ಹೊಸ ಪ್ರಕರಣ; 29,271 ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 13:58 IST
Last Updated 1 ಜೂನ್ 2021, 13:58 IST
   

ಬೆಂಗಳೂರು:24 ಗಂಟೆಗಳಲ್ಲಿ ರಾಜ್ಯದಲ್ಲಿಹೊಸದಾಗಿ 14,304 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಕರ್ನಾಟಕದಲ್ಲಿ ಇದುವರೆಗೆ ವರದಿಯಾದ ಸೋಂಕು ಪ್ರಕರಣಗಳ ಸಂಖ್ಯೆ26,18,735ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇಂದು ಮೃತಪಟ್ಟ 464 ಮಂದಿಯೂ ಸೇರಿದಂತೆ ಈವರೆಗೆ ಒಟ್ಟು 29,554 ಮಂದಿ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಸೊಂಕಿನಿಂದ ಮೃತಪಟ್ಟವರ ಪ್ರಮಾಣ ಶೇ. 3.24ಕ್ಕೆ ಹೆಚ್ಚಾಗಿದೆ.ಹೊಸದಾಗಿ 29,271 ಮಂದಿ ಚೇತರಿಸಿಕೊಂಡಿದ್ದು, ಸದ್ಯ 2,98,299 ಪ್ರಕರಣಗಳು ಸಕ್ರಿಯವಾಗಿವೆ.

ಎಂದಿನಂತೆ ಬೆಂಗಳೂರಿನಲ್ಲಿ ಅತಿ ಹೆಚ್ಚು(3,418) ಪ್ರಕರಣಗಳು ವರದಿಯಾಗಿದ್ದು, 276 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ಮೈಸೂರು (1,153), ಹಾಸನ (1,127), ಬೆಳಗಾವಿ (891),ತುಮಕೂರು (769),ಉಡುಪಿ (735), ಚಿತ್ರದುರ್ಗ (637), ದಕ್ಷಿಣ ಕನ್ನಡ (536) ಶಿವಮೊಗ್ಗ (520) ಮತ್ತು ಚಿಕ್ಕಮಗಳೂರಿನಲ್ಲಿ (504) ಐದುನೂರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.