ADVERTISEMENT

Covid-19 Karnataka Updates: ರಾಜ್ಯದಲ್ಲಿ 1,990 ಹೊಸ ಪ್ರಕರಣಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜುಲೈ 2021, 15:27 IST
Last Updated 14 ಜುಲೈ 2021, 15:27 IST
ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆ ಮುಂದೆ ಜನ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬುಧವಾರ ಕಾಯ್ದು ನಿಂತಿದ್ದರು
ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆ ಮುಂದೆ ಜನ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬುಧವಾರ ಕಾಯ್ದು ನಿಂತಿದ್ದರು   

ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕೋವಿಡ್‌–19 ಕಾರಣಗಳಿಂದಾಗಿ 45 ಜನ ಮೃತಪಟ್ಟಿದ್ದಾರೆ. ಇದೇ ಅವಧಿಯಲ್ಲಿ 1,990 ಹೊಸ ಪ್ರಕರಣಗಳು ವರದಿಯಾಗಿವೆ.

ರಾಜ್ಯದಲ್ಲಿ ದೃಢಪಟ್ಟ ಪ್ರಕರಣಗಳ ದರ ಶೇ.1.59ಕ್ಕೆ ಇಳಿಕೆಯಾಗಿದೆ‌. ಬುಧವಾರ 2,537 ಮಂದಿ ಗುಣಮುಖರಾಗಿರುವುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆಯಿಂದ ತಿಳಿದು ಬಂದಿದೆ.

ರಾಜ್ಯದಲ್ಲಿ ಇಲ್ಲಿಯವರೆಗೆ ಮಾರಕ ಸೋಂಕಿಗೆ 35,989 ಜನ ಸಾವಿಗೀಡಾಗಿದ್ದು, ಮರಣದ ಶೇಕಡಾವಾರು ಪ್ರಮಾಣ 2.26ರಷ್ಟಿದೆ. ಒಟ್ಟು ಕೋವಿಡ್ ದೃಢ ಪ್ರಕರಣಗಳ ಸಂಖ್ಯೆ 28,76,587ಕ್ಕೆ ಏರಿಕೆಯಾಗಿದ್ದು, ಈ ಪೈಕಿ 28,06,933 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.

ADVERTISEMENT

ಕೊರೊನಾದ ಹೊಸ ರೂಪಾಂತರ ವೈರಸ್‌ಗಳಾದ ‌ಆಲ್ಪಾ ಬಿ.1.1.7 ಪ್ರಕರಣಗಳ ಸಂಖ್ಯೆ 140 ರಷ್ಟು ಕಂಡು ಬಂದಿದೆ. ಬೀಟಾ 6 ಜನರಲ್ಲಿ, ಡೆಲ್ಟಾ 725 ಜನರಲ್ಲಿ ಡೆಲ್ಟಾ ಪ್ಲಸ್ 3 ಜನರಲ್ಲಿ ಮತ್ತು 145 ಜನರಲ್ಲಿ ಕಪ್ಪಾ ಕಂಡು ಬಂದಿದೆ.

ಬೆಂಗಳೂರಿನಲ್ಲಿ 400 ಜನರಲ್ಲಿ ಕೊರೊನಾ ವೈರಸ್‌ ಸೋಂಕು ಪತ್ತೆಯಾಗಿದೆ, 8 ಜನ ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ 211, ದಕ್ಷಿಣ ಕನ್ನಡದಲ್ಲಿ 219, ಬೆಳಗಾವಿಯಲ್ಲಿ 140 ಹಾಗೂ ಉಡುಪಿಯಲ್ಲಿ 120 ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.