ADVERTISEMENT

ಕೋವಿಡ್ ಲಸಿಕೆ: ರಾಜ್ಯದಲ್ಲಿ 10 ಕೋಟಿ ಡೋಸ್ ವಿತರಣೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2022, 16:29 IST
Last Updated 23 ಫೆಬ್ರುವರಿ 2022, 16:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ರಾಜ್ಯದಲ್ಲಿ ಕೋವಿಡ್ ಲಸಿಕೆಯ ಒಟ್ಟು ಡೋಸ್ ವಿತರಣೆ 10 ಕೋಟಿ ದಾಟಿದೆ. ಒಂದು ವರ್ಷದ 39 ದಿನಗಳಲ್ಲಿ ಈ ಸಾಧನೆ ಮಾಡಲಾಗಿದೆ.

5.21 ಕೋಟಿ ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಅವರಲ್ಲಿ 4.69 ಕೋಟಿ ಮಂದಿ ಎರಡನೇ ಡೋಸ್ ಹಾಗೂ 11.64 ಲಕ್ಷ ಮಂದಿ ಮುನ್ನೆಚ್ಚರಿಕೆ ಡೋಸ್ (ಮೂರನೇ ಡೋಸ್) ಲಸಿಕೆ ಹಾಕಿಸಿಕೊಂಡಿದ್ದಾರೆ. ಸದ್ಯ 600ಕ್ಕೂ ಅಧಿಕ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ ಮೊದಲ ಡೋಸ್ ವಿತರಣೆಯಲ್ಲಿ ಶೇ 100 ರಷ್ಟು ಗುರಿ ಸಾಧನೆ ಸಾಕಾರವಾಗಿದೆ. ಎರಡನೇ ಡೋಸ್ ವಿತರಣೆಯಲ್ಲಿ ಶೇ 93 ರಷ್ಟು ಗುರಿ ತಲುಪಲಾಗಿದೆ.

‘ಕೋವಿಡ್ ಲಸಿಕೆ ವಿತರಣೆಯಲ್ಲಿ ರಾಜ್ಯವು ಮಹತ್ತರ ಸಾಧನೆ ಮಾಡಿದೆ. ಇದಕ್ಕೆ ಕಾರಣೀಭೂತರಾದ ಆರೋಗ್ಯ ಕಾರ್ಯಕರ್ತರು ಹಾಗೂ ಜಿಲ್ಲಾಡಳಿತಗಳಿಗೆ ಅಭಿನಂದನೆಗಳು’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ADVERTISEMENT

ರಾಜ್ಯದಲ್ಲಿ ಕೋವಿಡ್ ಲಸಿಕೆಯ ಡೋಸ್‌ಗಳ ಸಂಖ್ಯೆ ಒಂದು ಕೋಟಿ ತಲುಪಲು 109 ದಿನಗಳು ಬೇಕಾಗಿದ್ದವು. ಕಡೆಯ ಒಂದು ಕೋಟಿ ಡೋಸ್‌ಗಳನ್ನು 44 ದಿನಗಳಲ್ಲಿ ವಿತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.