ಬೆಂಗಳೂರು: ಕಳೆದ ಆರು ವರ್ಷಗಳಿಂದ ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡದ ರಾಜ್ಯದಲ್ಲಿನ 10 ರಾಜಕಿಯ ಪಕ್ಷಗಳನ್ನು ಚುನಾವಣಾ ಆಯೋಗ ಪಟ್ಟಿ ಮಾಡಿದೆ.
ಅಖಲಿ ಭಾರತೀಯ ರೈತ ಪಾರ್ಟಿ, ಬಡವರ ಶ್ರಮಿಕರ ರೈತರ ಕಾಂಗ್ರೆಸ್ ಪಾರ್ಟಿ, ಭಾರತೀಯ ಜನಶಕ್ತಿ ಕಾಂಗ್ರೆಸ್, ಭಾರತೀಯ ರಾಷ್ಟ್ರೀಯ ಮಹಿಳಾ ಸರ್ವೋದಯ ಕಾಂಗ್ರೆಸ್, ಡಾ. ಅಂಬೇಡ್ಕರ್ ಸಮಾಜವಾದಿ ಡೆಮಾಕ್ರಟಿಕ್ ಪಾರ್ಟಿ, ಜನ ಸಾಮಾನ್ಯರ ಪಾರ್ಟಿ, ಮಾನವ ಪಾರ್ಟಿ, ಪ್ರಜಾ ಪರಿವರ್ತನ ಪಾರ್ಟಿ, ಶುಭ ಕರ್ನಾಟಕ, ಯಂಗ್ ಇಂಡಿಯ ಕಾಂಗ್ರೆಸ್ ಪಾರ್ಟಿ ಇವು ಪಟ್ಟಿ ಮಾಡಲಾದ ಪಕ್ಷಗಳಾಗಿವೆ.
ಈ ಪಕ್ಷಗಳಿಂದ ವಿವರ ಪಡೆದು ರಾಜಕೀಯ ಪಕ್ಷಗಳ ಪಟ್ಟಿಯಿಂದ ಕೈಬಿಡಲು ಇಲ್ಲವೇ ಮುಂದುವರಿಸಲು ಕ್ರಮ ಕೈಗೊಳ್ಳುವಂತೆ ಭಾರತೀಯ ಚುನಾವಣಾ ಆಯೋಗವು ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.