ADVERTISEMENT

Live | ಗ್ರಾಮ ಪಂಚಾಯಿತಿ ಚುನಾವಣೆ: ಶಾಂತಿಯುತವಾಗಿ ನಡೆದ 2ನೇ ಹಂತದ ಮತದಾನ

ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ನಡೆದ ಎರಡನೇ ಹಂತದ ಮತದಾನ ಶಾಂತಯುತವಾಗಿ ಮುಕ್ತಾಯವಾಗಿದೆ. ಮೊದಲನೇ ಹಂತದ ಮತದಾನ 117 ತಾಲ್ಲೂಕುಗಳ 3,019 ಗ್ರಾಮ ಪಂಚಾಯಿತಿಗಳಿಗೆ ಇದೇ 22ರಂದು ನಡೆದಿತ್ತು. ಇದೀಗ ಎರಡನೇ ಹಂತದಲ್ಲಿ 109 ತಾಲ್ಲೂಕುಗಳ 2,709 ಗ್ರಾಮ ಪಂಚಾಯಿತಿಗಳ 39,378 ಸ್ಥಾನಗಳಿಗೆ ಇಂದು ಮತದಾನ ನಡೆಯಿತು. ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಿತು. ಉಪ್ಪಿನಂಗಡಿಯಲ್ಲಿ 106 ವರ್ಷದ ವೃದ್ಧೆ ಮತದಾನ, ವಿಜಯಪುರದಲ್ಲಿ ಪಿಪಿಇ ಕಿಟ್ ಧರಿಸಿ ಮತದಾನ ಮಾಡಿದ ಕೋವಿಡ್ ಸೋಂಕಿತರು, ಕಲಬುರ್ಗಿಯಲ್ಲಿ ಅಭ್ಯರ್ಥಿಗೆ ಹೆಣ್ಣು ಮಗು ಜನನ ಇವು ಚುನಾವಣೆಯ ಕೆಲ ಘಟನೆಗಳಾಗಿವೆ.

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 15:20 IST
Last Updated 27 ಡಿಸೆಂಬರ್ 2020, 15:20 IST

ವಿಜಯಪುರ: ಶೇ 69.75ರಷ್ಟು ಮತದಾನ

ರಾಮನಗರ: ಶೇ 88.26 ರಷ್ಟು ಮತದಾನ

ರಾಮನಗರ: ಜಿಲ್ಲೆಯ‌‌ ಮಾಗಡಿ ಹಾಗು ಚನ್ನಪಟ್ಟಣ ತಾಲ್ಲೂಕುಗಳ 62  ಗ್ರಾ.ಪಂ.ಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಶೇ 88.26ರಷ್ಟು ಮತದಾನ ನಡೆದಿದೆ.

ಚನ್ನಪಟ್ಟಣ ತಾಲ್ಲೂಕಿನಲ್ಲಿ 89.99 ಮಂದಿ ಮತ ಚಲಾಯಿಸಿದರೆ, ಮಾಗಡಿ ತಾಲ್ಲೂಕಿನಲ್ಲಿ ಶೇ 86.54 ಮತದಾರರು ಮತದಾನ ಮಾಡಿದ್ದಾರೆ.

ಕೊಪ್ಪಳ: ಶೇ 81.99ರಷ್ಟು ಮತದಾನ

ಕೊಪ್ಪಳ: ಜಿಲ್ಲೆಯ ಕುಷ್ಟಗಿ, ಗಂಗಾವತಿ, ಕಾರಟಗಿ, ಕನಕಗರಿ ತಾಲ್ಲೂಕುಗಳಲ್ಲಿ ಸಂಜೆ 5ಕ್ಕೆ ಕೊನೆಗೊಂಡ ಮತದಾನದಲ್ಲಿ ಶೇ 81.99ರಷ್ಟು ಮತದಾನವಾಗಿದೆ.

ADVERTISEMENT

ಯಾವುದೇ ಕೋವಿಡ್‌ ರೋಗಿಗಳು ಮತ ಚಲಾಯಿಸಿಲ್ಲ. ಬಹುತೇಕ ಸುಗಮ, ಶಾಂತಿಯುತ ಚುನಾವಣೆ ನಡೆಯಿತು.

ತಾಲ್ಲೂಕು   ಪಂಚಾಯಿತಿ  ಮತದಾನ ವಿವರ (ಶೇ)

ಕುಷ್ಟಗಿ      36           81.05

ಗಂಗಾವತಿ   18           81.82

ಕಾರಟಗಿ     11           81.65

ಕನಕಗಿರಿ     11           86.8

ಒಟ್ಟು         76           81.99

ರಾಯಚೂರು ಗ್ರಾಪಂ ಚುನಾವಣೆ: ಶೇ 77.11 ಮತದಾನ

ರಾಯಚೂರು: ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ನಡೆದ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಮತದಾನ ನಡೆಯುತ್ತಿದ್ದು, ಸಂಜೆ 5 ಗಂಟೆವರೆಗೂ ಶೇ 77.11 ರಷ್ಟು ಮತಗಳು ಚಲಾವಣೆ ಆಗಿವೆ.ಲಿಂಗಸುಗೂರು ತಾಲ್ಲೂಕಿನಲ್ಲಿ ಶೇ 76.82, ಸಿಂಧನೂರು ತಾಲ್ಲೂಕಿನಲ್ಲಿ ಶೇ 78.62 ಹಾಗೂ ಮಸ್ಕಿ ತಾಲ್ಲೂಕಿನಲ್ಲಿ ಶೇ 74.61 ರಷ್ಟು ಮತದಾನವಾಗಿದೆ

ಹಳೆ ವೈಷಮ್ಯ; ಜಿ.ಪಂ.ಸದಸ್ಯನ ಮೇಲೆ ಹಲ್ಲೆ

ಮತಚಲಾಯಿಸಿ ಮೃತಪಟ್ಟ ವೃದ್ಧೆ

ಚಿತ್ರದುರ್ಗ: ಮತಚಲಾಯಿಸಿದ ಬಳಿಕ ನಿತ್ರಾಣಗೊಂಡ ವೃದ್ಧೆಯೊಬ್ಬರು ಮತಗಟ್ಟೆ ಹೊರಗೆ ಮೃತಪಟ್ಟ ಘಟನೆ ಹಿರಿಯೂರು ತಾಲ್ಲೂಕಿನ ಬಿರೇನಹಳ್ಳಿಯಲ್ಲಿಯಲ್ಲಿ ಭಾನುವಾರ ನಡೆದಿದೆ.
ಶಿವಪುರದ ಸರೋಜಮ್ಮ (90) ಮೃತಪಟ್ಟವರು. ಬಿರೇನಹಳ್ಳಿ ಮತಗಟ್ಟೆಗೆ ಬಂದಿದ್ದ ಅವರು ಹಕ್ಕು ಚಲಾವಣೆ ಮಾಡಿದ ಬಳಿಕ ಅಸ್ವಸ್ಥರಾಗಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡುವ ಮೊದಲೇ ಮೃತಪಟ್ಟರು ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಯಡೂರ ಗ್ರಾಮದ 2ನೇ ವಾರ್ಡ್‌ನಲ್ಲಿ ಶ್ರೀಶೈಲ ಪೀಠ ಹಾಗೂ ಯಡೂರದ ಕಾಡಸಿದ್ದೇಶ್ಬರ ಮಠದ ಪೀಠಾಧಿಪತಿ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮತ ಚಲಾಯಿಸಿದರು.

ಗಾಡಿ ಏರಿ ಬಂದು ಮತದಾನ

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಕರಗಾಂವ ಗ್ರಾಮದ ಮತಗಟ್ಟೆಗೆ ಕೆಲವರು ಚಕ್ಕಡಿಯಲ್ಲಿ ಬಂದು ಮತ ಚಲಾಯಿಸಿದರು.

ಪಿಪಿಇ ಕಿಟ್‌ ಧರಿಸಿ ಮತದಾನ

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ದೇವೂರ ಬೂತ್‌ನಲ್ಲಿ ಕೋವಿಡ್  ಪಾಸಿಟಿವ್ ಮತದಾರರು ಪಿಪಿ ಕಿಟ್ ಧರಿಸಿ, ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಮತ ಚಲಾಯಿಸಿದರು.

ಬಳ್ಳಾರಿ: 3 ಗಂಟೆಯ ವೇಳೆಗೆ ಶೇ 64.32 ಮತದಾನ

ಬಳ್ಳಾರಿ: ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ 64.32 ರಷ್ಟು ಮತದಾನವಾಗಿದೆ

ಬೆಳಗಾವಿ: ಮಧ್ಯಾಹ್ನ 3ರವರೆಗೆ  ಶೇ 63.93ರಷ್ಟು ಮತದಾನ

ಬೆಳಗಾವಿ ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ಮಧ್ಯಾಹ್ನ 3ರವರೆಗೆ  ಶೇ 63.93ರಷ್ಟು ಮತದಾನವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಚಾಮರಾಜನಗರ: 3 ಗಂಟೆವರೆಗೆ ಶೇ 67.49 ಮತದಾನ

ಚಾಮರಾಜನಗರ: ಎರಡನೇ‌ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಜಿಲ್ಲೆಯಲ್ಲಿ ಬಿರುಸಿನಿಂದ ಸಾಗಿದ್ದು, ಮಧ್ಯಾಹ್ನ 3 ಗಂಟೆಯವರೆಗೆ ಶೇ 67.49ರಷ್ಟು ಮತದಾನವಾಗಿದೆ.

ಯಳಂದೂರು ತಾಲ್ಲೂಕು -68.58%
ಕೊಳ್ಳೇಗಾಲ ತಾಲ್ಲೂಕು- 68.92%
ಹನೂರು- 67.49%
ಶೇ 67.49ರಷ್ಟು ಮತದಾನ

ಮತಚಲಾಯಿಸಲು ತೆರಳುವಾಗ ನಿವೃತ್ತ ಶಿಕ್ಷಕ ಕುಸಿದು ಬಿದ್ದು ಸಾವು

ತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತೀರ್ಥಪುರದಲ್ಲಿ  ಮತಚಲಾಯಿಸಲು ಮತಗಟ್ಟೆಗೆ ತೆರಳುವಾಗ ನಿವೃತ್ತ ಶಿಕ್ಷಕ ಪುಟ್ಟಮರುಳಾರಾಧ್ಯ (62) ಕುಸಿದು ಬಿದ್ದು ಮೃತಪಟ್ಟಿದ್ದಾರೆ. 

ಹಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತಿದ್ದರು. ಕುಟುಂಬ ಸದಸ್ಯರ ಸಹಕಾರದಲ್ಲಿ ಮತಗಟ್ಟೆಗೆ ತೆರಳುತ್ತಿದ್ದರು. ಮತಗಟ್ಟೆಯ ಗೇಟಿಗೆ ಬರುವಷ್ಟರಲ್ಲಿ ಕುಸಿದು ಬಿದ್ದರು.

ದಕ್ಷಿಣ ಕನ್ನಡ: 3 ಗಂಟೆ ತನಕ ಶೇ 65.62

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ 2 ನೇ ಹಂತದಲ್ಲಿ ಗ್ರಾಮ ಪಂಚಾಯತಿಗಳಿಗೆ ಭಾನುವಾರ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 3 ಗಂಟೆ ತನಕ ಶೇ 65.62 ಮತದಾನ ದಾಖಲಾಗಿದೆ.
ಬೆಳ್ತಂಗಡಿ ತಾಲ್ಲೂಕಿನಲ್ಲಿ ಶೇ 65.91 , ಪುತ್ತೂರು- ಶೇ 65.06, ಸುಳ್ಯ ಶೇ 65.09 ಮತ್ತು ಕಡಬ ಶೇ 66.15  ಮತದಾನ ನಡೆದಿದೆ.

ಉತ್ತರ ಕನ್ನಡ ಜಿಲ್ಲೆ: ಮಧ್ಯಾಹ್ನ 3 ಗಂಟೆವರೆಗೆ ಶೇ.60.65 ರಷ್ಟು ಮತದಾನ

ಉತ್ತರ ಕನ್ನಡ ಜಿಲ್ಲೆಯ 7 ತಾಲ್ಲೂಕುಗಳಲ್ಲಿ  ಮಧ್ಯಾಹ್ನ 3 ಗಂಟೆವರೆಗೆ ಶೇ.60.65 ರಷ್ಟು  ಮತದಾನವಾಗಿದೆ.
ಶಿರಸಿಯಲ್ಲಿ ಶೇ.58.47, ಸಿದ್ದಾಪುರದಲ್ಲಿ ಶೇ.60.76, ಯಲ್ಲಾಪುರದಲ್ಲಿ ಶೇ.60.23, ಮುಂಡಗೋಡದಲ್ಲಿ ಶೇ.63.42, ಹಳಿಯಾಳದಲ್ಲಿ ಶೇ.64.65 ಮತದಾನ.

ದಾವಣಗೆರೆ: ಮಧ್ಯಾಹ್ನ 3 ರ ಹೊತ್ತಿಗೆ ಶೇ 63.72 ಮತದಾನ

ದಾವಣಗೆರೆ: ಎರಡನೇ ಹಂತದ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೂರು ತಾಲ್ಲೂಕುಗಳಲ್ಲಿ ಮಧ್ಯಾಹ್ನ 3 ರ ಹೊತ್ತಿಗೆ ಶೇ 63.72 ಮತದಾನವಾಗಿದೆ.
ಚನ್ನಗಿರಿ ತಾಲ್ಲೂಕಿನಲ್ಲಿ ಶೇ 63.09 , ಹರಿಹರ ತಾಲ್ಲೂಕಿನಲ್ಲಿ ಶೇ 61.5, ನ್ಯಾಮತಿ ತಾಲ್ಲೂಕಿನಲ್ಲಿ ಶೇ 66.72 ಮತದಾನವಾಗಿದೆ.
ಮೂರು ತಾಲ್ಲೂಕುಗಳ 101 ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿದೆ.
ದಾಂಡೇಲಿಯಲ್ಲಿ ಶೇ.57.75 ಹಾಗೂ ಜೋಯಿಡಾದಲ್ಲಿ ಶೇ.58.17 ಮತದಾನ ನಡೆದಿದೆ.

ಮತದಾನದ ಹಿಂದಿನ ದಿನ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಭ್ಯರ್ಥಿ!

ಹಾವೇರಿ ಜಿಲ್ಲೆ ಶೇ 45.09 ಮತದಾನ 

ಹಾವೇರಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಎರಡನೇ ಹಂತದ 105 ಗ್ರಾ.ಪಂ ಚುನಾವಣೆ ಬೆಳಿಗ್ಗೆ 7 ಗಂಟೆಯಿಂದ 1 ಗಂಟೆಯವರೆಗೆ ಮತದಾನವಾದ ಅಂಕಿ ಅಂಶಗಳ ಮಾಹಿತಿ.ಶಿಗ್ಗಾಂವಿ  : 47.81%
ಸವಣೂರು: 43.34%
ಹಾನಗಲ್ : 43.51%
ಬ್ಯಾಡಗಿ     : 47.29%

ಒಟ್ಟು ಮತದಾನ - 45.09%

ಮತದಾನದಲ್ಲೂ ಮಹಿಳೆಯರೇ ಮುಂದು

ಕಲಬುರ್ಗಿ: ಜಿಲ್ಲೆಯ ಯಡ್ರಾಮಿ, ಜೇವರ್ಗಿ, ಚಿತ್ತಾಪುರ, ಚಿಂಚೋಳಿ ಹಾಗೂ ಸೇಡಂ ತಾಲ್ಲೂಕುಗಳಲ್ಲಿ ಭಾನುವಾರ ನಡೆದ ಎರಡನೇ ಹಂತದ ಮತದಾನದಲ್ಲಿ ಮಧ್ಯಾಹ್ನದವರೆಗೆ ಶೇ. 43.43ರಷ್ಟು ಮತದಾನವಾಗಿದ್ದು, ಮಹಿಳೆಯರೇ ಹೆಚ್ಚಿನ ಉತ್ಸಾಹ ತೋರಿದ್ದಾರೆ.

ಪುರುಷರು 39.42 ಮತದಾನ ಮಾಡಿದ್ದರೆ ಮಹಿಳೆಯರ ಪ್ರಮಾಣ ಶೇ 47.53.

ಚಿಂಚೋಳಿ ತಾಲ್ಲೂಕಿನ 27 ಗ್ರಾಮ ಪಂಚಾಯಿತಿಗಳ 427 ಸದಸ್ಯರ ಆಯ್ಕೆಗೆ ನಡೆಯುತ್ತಿರುವ ಮತದಾನದಲ್ಲಿ ಪುರುಷರನ್ನು ಹಿಂದಿಕ್ಕಿ  ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ. ತಾಲ್ಲೂಕಿನಲ್ಲಿ ಬೆಳಿಗ್ಗೆ 7ರಿಂದ ಮಧ್ಯಾಹ್ನ 1ಗಂಟೆಗೆ ಶೇ 42.12 ಮತದಾನ ನಡೆದಿದೆ. 132007ರಲ್ಲಿ ಪುರುಷರು 67613, ಸ್ತ್ರೀಯರು 64376 ಮತ್ತು ಇತರೆ 18 ಮತದಾರರಿದ್ದಾರೆ. ಇವರಲ್ಲಿ ಪುರುಷರು 25053 (ಶೇ 37.05), ಸ್ತ್ರೀಯರು 30553 (ಶೇ 47.46), ಮತ ಚಲಾಯಿಸುವ ಮೂಲಕ  ಪುರುಷರಿಗಿಂತಲೂ ಸ್ತ್ರೀಯರು ಶೇ 5ರಷ್ಟು  ಹೆಚ್ಚು ಮತದಾನ ಮಾಡಿದ್ದಾರೆ ಎಂದು ತಹಶೀಲ್ದಾರ್ ಅರುನಕುಮಾರ ಕುಲಕರ್ಣಿ 'ಪ್ರಜಾವಾಣಿ'ಗೆ ತಿಳಿಸಿದರು.

ಇನ್ನೊಂದೆಡೆ,  ಯಡ್ರಾಮಿ ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ಮತ ಚಲಾಯಿಸಲು ಮಹಿಳೆಯರು  ಮುಗಿಬಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇದರಿಂದ ಕನಿಷ್ಠ ಅಂತರ ಕಾಯ್ದುಕೊಳ್ಳಲು ಪೊಲೀಸರು ಪದೇ ಪದೇ ಸೂಚನೆ ನೀಡಿದರೂ ಪ್ರಯೋಜನವಾಗಲಿಲ್ಲ. 

ಸೇಡಂ ತಾತಾಲೂಕಿನಲ್ಲಿ ಕೂಡ ಶೇ 38ರಷ್ಟು ಪುರುಷರು, ಶೇ 49ರಷ್ಟು ಮಹಿಳೆಯರು ಹಕ್ಕು ಚಲಾಯಿಸಿದರು.

ಬೆಳಗಾವಿ :ಮಧ್ಯಾಹ್ನ 1ರವರೆಗೆ ಶೇ 45.13ರಷ್ಟು ಮತದಾನ

ಬೆಳಗಾವಿ ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ಮಧ್ಯಾಹ್ನ 1ರವರೆಗೆ  ಶೇ 45.13ರಷ್ಟು ಮತದಾನವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಉಪ್ಪಿನಂಗಡಿಯಲ್ಲಿ 106 ವರ್ಷದ ವೃದ್ಧೆ ಮತದಾನ

ಉಪ್ಪಿನಂಗಡಿ: ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿಯ ಹಿರ್ತಡ್ಕ ಶಾಲೆಯಲ್ಲಿ 6ನೆ ವಾರ್ಡ್ ನಲ್ಲಿ 106 ವರ್ಷದ ಬೊಮ್ಮಿ ಅವರು ತಮ್ಮ ಮೊಮ್ಮಗ ಕೇಶವ ಗೌಡರ ಸಹಾಯದಿಂದ ಮತ ಚಲಾಯಿಸಿ ಹೊರ ಬರುತ್ತಿರುವುದು.

ಸಿದ್ದರಾಮನಹುಂಡಿಯಲ್ಲಿ ಸಿದ್ದರಾಮಯ್ಯ ಮತದಾನ

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮೈಸೂರು ತಾಲ್ಲೂಕಿನ ಸಿದ್ದರಾಮನಹುಂಡಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮತದಾನ ಮಾಡಿದರು.

ದಾವಣಗೆರೆ: ಶೇ 44.06 ಮತದಾನ

ದಾವಣಗೆರೆ: ಎರಡನೇ ಹಂತದ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೂರು ತಾಲ್ಲೂಕುಗಳಲ್ಲಿ ಮಧ್ಯಾಹ್ನ 1ರ ಹೊತ್ತಿಗೆ ಶೇ 44.06 ಮತದಾನವಾಗಿದೆ.
ಚನ್ನಗಿರಿ ತಾಲ್ಲೂಕಿನಲ್ಲಿ ಶೇ 44.06 , ಹರಿಹರ ತಾಲ್ಲೂಕಿನಲ್ಲಿ ಶೇ 42.60, ನ್ಯಾಮತಿ ತಾಲ್ಲೂಕಿನಲ್ಲಿ ಶೇ 41.20 ಮತದಾನವಾಗಿದೆ.
ಮೂರು ತಾಲ್ಲೂಕುಗಳ 101 ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿದೆ.
 

ದಕ್ಷಿಣ ಕನ್ನಡ: ಶೇ 52.64 ಮತದಾನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ 2 ನೇ ಹಂತದಲ್ಲಿ ಗ್ರಾಮ ಪಂಚಾಯತಿಗಳಿಗೆ ಭಾನುವಾರ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆ ತನಕ ಶೇ 52.64 ಮತದಾನ ದಾಖಲಾಗಿದೆ.

ಬೆಳ್ತಂಗಡಿ ತಾಲ್ಲೂಕಿನಲ್ಲಿ ಶೇ 53.35 , ಪುತ್ತೂರು- ಶೇ 52.85, ಸುಳ್ಯ ಶೇ 51.37 ಮತ್ತು ಕಡಬ ಶೇ 52.07  ಮತದಾನ ನಡೆದಿದೆ

ಮತದಾನಕ್ಕೆ ಡಿಲಕ್ಸ್ ಬಸ್ಸಿನಲ್ಲಿ ಬಂದ ಮತದಾರರು

ಕೊಪ್ಪಳ: ಎರಡನೇಯ ಹಂತದ ಗ್ರಾಮ‌ ಪಂಚಾಯಿತಿ ಚುನಾವಣೆ ಕನಕಗಿರಿ ತಾಲ್ಲೂಕಿನ ಭಾನುವಾರ ಬಿರುಸಿನಿಂದ‌ ನಡೆದಿದೆ.

ಕಲಕೇರಿ, ಆದಾಪುರ, ಯತ್ನಟ್ಟಿ ವಡಕಿ,‌ನವಲಿ‌ ಸೇರಿದಂತೆ ಅನೇಕ‌ ಮತದಾನ ಕೇಂದ್ರಗಳಲ್ಲಿ  ಕೋವಿಡ್-19  ನಿಯಮಗಳನ್ನು ಪಾಲಿಸಿಕೊಂಡು‌ ಬಂದಿರುವುದು ಕಂಡು ಬಂತು.

ಮತ ಚಲಾಯಿಸಲು ಮತದಾರರು ಬಹಳ ಉತ್ಸುಕರಾಗಿದ್ದು ಮಾಸ್ಕ್ ಧರಿಸಿಕೊಂಡು ಮತದಾನದ ಕೇಂದ್ರದ ಕಡೆಗೆ ಧಾವಿಸಿದರು.

ಆರೋಗ್ಯ ಇಲಾಖೆಯವರು ಮತದಾನ ಕೇಂದ್ರದ ಮುಂದೆ ಮತದಾರರ ಥರ್ಮಲ್ ಸ್ಕ್ಯಾನಿಂಗ್ ತಪಾಸಣೆ ಮಾಡಿ ಮತ ಚಲಾಯಿಸಲು ಅನುಕೂಲ ಮಾಡಿಕೊಟ್ಟರು. 

ಬಹುತೇಕ‌ ಮತದಾನ ಕೇಂದ್ರದಲ್ಲಿ  ಮಹಿಳೆಯರೆ ಹೆಚ್ಚಿನ ಸಂಖ್ಯೆಯಲ್ಲಿ ಸಾಲಾಗಿ‌ ನಿಂತು ಮತ ಚಲಾಯಿಸಿದರು.  

ರಾಷ್ಟ್ರೀಯ ಪಕ್ಷದ ಕಾರ್ಯಕರ್ತರು ತಮ್ಮ ಕೊರಳಲ್ಲಿ ಕೇಸರಿ ಶಾಲ್ ಹಾಕಿಕೊಂಡು ಗಮನ ಸೆಳೆದರು.

ಉಡುಪಿ,‌ ಬೆಂಗಳೂರು, ಯಾದಗಿರಿ‌ ಸೇರಿ ನಗರ ಪ್ರದೇಶಕ್ಲೆ ಉದ್ಯೋಗ ಅರಸಿ ಗುಳೆ ಹೋಗಿದ್ದ ನೂರಾರು ಕೂಲಿಕಾರರು ತಮ್ಮ‌ಹಕ್ಕು‌ಚಲಾಯಿಸಲು ಡಿಲಕ್ಸ್ ಬಸ್ ಬಾಡಿಗೆ ಪಡೆದುಕೊಂಡು ತಮ್ಮ ಊರು ಕಡೆಗೆ ದೌಡಯಿಸಿ ಬಂದರು. ಮತ ಚಲಾಯಿಸುವ ಮುಂಚೆ ದಾರಿಯಲ್ಲಿ ಬಸ್ ನಿಲ್ಲಿಸಿ
ಕೂಲಿಕಾರರಿಗೆ ನಗದು‌ ಹಣ ಹಾಗೂ ತಮ್ಮ ಅಭ್ಯರ್ಥಿ ಮಾದರಿ ಮತ‌ ಪತ್ರದ ಗುರುತಿನ‌‌ ಚಿಹ್ನೆ ನೀಡಿದರು.
ಮತ‌‌ದಾನ‌ ಮುಗಿದ ನಂತರ ಊಟ ಮಾಡಿಸಿ ಧನ್ಯವಾದ ಅರ್ಪಿಸಿ ಬೀಳ್ಕೊಡುಗೆ‌ ನೀಡಿದರು.

ಜಿಲ್ಲಾಧಿಕಾರಿ ಮನವೊಲಿಕೆ ಯಶಸ್ವಿ: ಸಿದ್ದಯ್ಯನಪುರದಲ್ಲಿ ಮತದಾನ ಆರಂಭ

ಚಾಮರಾಜನಗರ: ನಾಲ್ಕು ಮತ ಚಲಾಯಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಮತದಾನದಿಂದ  ದೂರ ಉಳಿದಿದ್ದ ಕೊಳ್ಳೇಗಾಲ ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದ ವಾರ್ಡ್ -1 ಗ್ರಾಮಸ್ಥರನ್ನು ಮನವೊಲಿಸಲು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಯಶಸ್ವಿಯಾಗಿದ್ದು. ಈಗ ಮತದಾನ ಆರಂಭವಾಗಿದೆ. ಮೂರು ಗಂಟೆ ಹೆಚ್ಚು ಕಾಲ ಮತದಾನಕ್ಕೆ ಅವಕಾಶ ನೀಡಲಾಗಿದೆ.

ಉತ್ತರ ಕನ್ನಡ ಜಿಲ್ಲೆ: ಶೇ.45.05ರಷ್ಟು  ಮತದಾನ

ಉತ್ತರ ಕನ್ನಡ ಜಿಲ್ಲೆಯ 7 ತಾಲ್ಲೂಕುಗಳಲ್ಲಿ  ಮಧ್ಯಾಹ್ನ 1  ಗಂಟೆವರೆಗೆ ಶೇ.45.05ರಷ್ಟು  ಮತದಾನವಾಗಿದೆ. ಶಿರಸಿಯಲ್ಲಿ ಶೇ.43.3, ಸಿದ್ದಾಪುರದಲ್ಲಿ ಶೇ.47.95, ಯಲ್ಲಾಪುರದಲ್ಲಿ ಶೇ.48.48, ಮುಂಡಗೋಡದಲ್ಲಿ ಶೇ.43.75, ಹಳಿಯಾಳದಲ್ಲಿ ಶೇ.45.01, ದಾಂಡೇಲಿಯಲ್ಲಿ ಶೇ.41.83 ಹಾಗೂ ಜೋಯಿಡಾದಲ್ಲಿ ಶೇ.43.82 ಮತದಾನ ನಡೆದಿದೆ.

ರಾಯಚೂರು ಗ್ರಾಪಂ ಚುನಾವಣೆ: ಶೇ 36.41 ಮತದಾನ

ರಾಯಚೂರು: ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ನಡೆದ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆವರೆಗೂ ಶೇ 36.41 ರಷ್ಟು ಮತಗಳು ಚಲಾವಣೆ ಆಗಿವೆ.ಲಿಂಗಸುಗೂರು ತಾಲ್ಲೂಕಿನಲ್ಲಿ ಶೇ 35.71, ಸಿಂಧನೂರು ತಾಲ್ಲೂಕಿನಲ್ಲಿ ಶೇ 34.76 ಹಾಗೂ ಮಸ್ಕಿ ತಾಲ್ಲೂಕಿನಲ್ಲಿ ಶೇ 40.82 ರಷ್ಟು ಮತದಾನವಾಗಿದೆ.

ತುಮಕೂರು: ಶೇ 47.82 ಮತದಾನ

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ, ತಿಪಟೂರು, ಮಧುಗಿರಿ, ಶಿರಾ ಮತ್ತು ತುರುವೇಕೆರೆ ತಾಲ್ಲೂಕಿನಲ್ಲಿ ಮಧ್ಯಾಹ್ನ 1ರವರೆಗೆ ಶೇ 47.82 ಮತದಾನವಾಗಿದೆ.

ಶಿರಾ ತಾಲ್ಲೂಕಿನಲ್ಲಿ ಶೇ 48.99, ತುರುವೇಕೆರೆ ಶೇ 48.44, ಮಧುಗಿರಿ ಶೇ 47. 16, ಚಿಕ್ಕನಾಯಕನಹಳ್ಳಿ ಶೇ 48.57 ತಿಪಟೂರಿನಲ್ಲಿ ಶೇ 45.96ರಷ್ಟು ಮತದಾನವಾಗಿದೆ.

ತುಮಕೂರು: ಶೇ 47.82 ಮತದಾನ

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ, ತಿಪಟೂರು, ಮಧುಗಿರಿ, ಶಿರಾ ಮತ್ತು ತುರುವೇಕೆರೆ ತಾಲ್ಲೂಕಿನಲ್ಲಿ ಮಧ್ಯಾಹ್ನ 1ರವರೆಗೆ ಶೇ 47.82 ಮತದಾನವಾಗಿದೆ.

ಶಿರಾ ತಾಲ್ಲೂಕಿನಲ್ಲಿ ಶೇ 48.99, ತುರುವೇಕೆರೆ ಶೇ 48.44, ಮಧುಗಿರಿ ಶೇ 47. 16, ಚಿಕ್ಕನಾಯಕನಹಳ್ಳಿ ಶೇ 48.57 ತಿಪಟೂರಿನಲ್ಲಿ ಶೇ 45.96ರಷ್ಟು ಮತದಾನವಾಗಿದೆ.

ಪುತ್ತೂರು: ಅಭ್ಯರ್ಥಿಗಳ ಚಿಹ್ನೆಯ‌ ಪತ್ರ ಹಂಚಿಕೆ

ಪುತ್ತೂರು: ತಾಲ್ಲೂಕಿನ ಸಂಟ್ಯಾರು ಶಾಲಾ ಮತಗಟ್ಟೆಯ ವಠಾರದಲ್ಲಿ ಅಭ್ಯರ್ಥಿಗಳ ಚಿಹ್ನೆಯ‌ ಪತ್ರ ಹಂಚುತ್ತಿರುವುದು ಪತ್ತೆಯಾಗಿದೆ.

ಗ್ರಾಮ ಪಂಚಾಯತಿಗಳ ಚುನಾವಣೆ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ (ಚುನಾವಣಾಧಿಕಾರಿ) ಡಾ.ಯತೀಶ್ ಉಳ್ಳಾಲ್ ಅವರು ಮತಗಟ್ಟೆಗಳಿಗೆ ಭೇಟಿ ಮಾಡಿ ಪರಿಶೀಲನೆ ಮಾಡುತ್ತಿದ್ದಾಗ  ಮತದಾರರೊಬ್ಬರ ಕೈಯಲ್ಲಿರುವ ಚೀಟಿಯನ್ನು ನೋಡಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಡಾ.ಯತೀಶ್ ಉಳ್ಳಾಲ್ ಅವರು ಬೂತ್ ನಲ್ಲಿ ಟೇಬಲ್ ಹಾಕಿ ಕೂತಿದ್ದವರನ್ನು ವಿಚಾರಿಸಿದಲ್ಲದೇ ಟೇಬಲ್ ಕೆಳಗೆ ಇದ್ದ ಅಭ್ಯರ್ಥಿಗಳ ಚಿಹ್ನೆ ಇದ್ದ ಚೀಟಿನ ಒಂದು ಕಟ್ಟನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸುವಂತೆ ಮತಗಟ್ಟೆಯ ಪರಿಶೀಲನಾಧಿಕಾರಿಗೆ ಸೂಚನೆ ನೀಡಿದ್ದಾರೆ.

ವಿಜಯಪುರ ಶೇ 34.53 ಮತದಾನ

ವಿಜಯಪುರ: ಜಿಲ್ಲೆಯಲ್ಲಿ ಮಧ್ಯಾಹ್ನ  1ರ ವರೆಗೆ ಗ್ರಾಮ ಪಂಚಾಯಿತಿ ಚಯನಾವಣೆಗೆ ಸಂಬಂಧಿಸಿದಂತೆ ಶೇ 34.53ರಷ್ಟು ಮತದಾನವಾಗಿದೆ.

ಇಂಡಿ ಶೇ 38.65
ಸಿಂದಗಿ  ಶೇ  33.85
ದೇವರ ಹಿಪ್ಪರಗಿ ಶೇ 36.12
ಚಡಚಣ ಶೇ 29.50ರಷ್ಟು ಮತದಾನವಾಗಿದೆ.

ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮತದಾನ

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದಲ್ಲಿ ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮತದಾನ ಮಾಡಿದರು.

ಸುಳ್ಯ: ಮಾತಿನ ಚಕಮಕಿ

ಸುಳ್ಯ: ತಾಲ್ಲೂಕಿನ ಮಂಡೆಕೋಲು ಗ್ರಾಮದ ಪೇರಾಲಿನಲ್ಲಿ ಮತಗಟ್ಟೆ ಹೊರಗಡೆ ಟೇಬಲ್ ಹಾಕುವ ವಿಚಾರದಲ್ಲಿ ಬಿಜೆಪಿ ಬೆಂಬಲಿತ ಮತ್ತು ಬಂಡಾಯ ಅಭ್ಯರ್ಥಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಚಿತ್ರದುರ್ಗ: ಶೇ 20 ರಷ್ಟು ಮತದಾನ

ಚಿತ್ರದುರ್ಗ: ಜಿಲ್ಲೆಯಲ್ಲಿ ಎರಡನೇ ಹಂತದ ಚುನಾವಣೆಯಲ್ಲಿ ಬೆಳಿಗ್ಗೆ 11 ಗಂಟೆ ಹೊತ್ತಿಗೆ ಶೇ 20 ರಷ್ಟು ಮತದಾನವಾಗಿದೆ.

ಚಳ್ಳಕೆರೆ ತಾಲ್ಲೂಕಿನ ದಗ್ಗಾವರ ಗ್ರಾಮದ ಮತಗಟ್ಟೆ ಬಳಿ ಹಣ ಹಂಚಿಕೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸೋಮಗುದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮಧುರೆ ಮತಗಟ್ಟೆಯಲ್ಲಿ ಶತಾಯುಷಿ ಮಹಿಳೆ ವಾಹನದಲ್ಲಿ ಮತ ಚಲಾಯಿಸಿದರು. ಮತಗಟ್ಟೆಗೆ ಬಂದಿದ್ದ ವೃದ್ದೆ ತೀರ ಅಸ್ವಸ್ಥರಾಗಿದ್ದರು. ಏಜೆಂಟರ ಒಪ್ಪಿಗೆ ಮೇರೆಗೆ ವಾಹನದಲ್ಲೇ ಕುಳಿತು ಮತ ಹಾಕಲು ಮತಗಟ್ಟೆ ಅಧಿಕಾರಿ ಅವಕಾಶ ಕಲ್ಪಿಸಿದರು.

ಡಿ. ವೀರೇಂದ್ರ ಹೆಗ್ಗಡೆ ಮತದಾನ

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ  ವೀರೇಂದ್ರ ಹೆಗ್ಗಡೆ ಅವರು ಪತ್ನಿ ಹೇಮಾವತಿ ಹೆಗ್ಗಡೆ ಮತ್ತು ಸಹೋದರ ಡಿ. ಹರ್ಷೇಂದ್ರಕುಮಾರ್ ಜೊತೆ ಬಂದು ಧರ್ಮಸ್ಥಳ ಪ್ರಾಥಮಿಕ ಶಾಲೆಯ ಮತದಾನ ಕೇಂದ್ರದಲ್ಲಿ ಭಾನುವಾರ ಮತ ಚಲಾಯಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನ ನಕ್ಸಲ್ ಪೀಡಿತ ಕುತ್ಲೂರು ಮತ್ತಿತರ ವ್ಯಾಪ್ತಿಯಲ್ಲಿ ಭಾನುವಾರ ಗ್ರಾಮ ಪಂಚಾಯಿತಿಗೆ   ಬಿರುಸಿನಿಂದ ಮತದಾನ ನಡೆಯಿತು. ಕುತ್ಲೂರು ಶಾಲೆಯಲ್ಲಿ ಮತದಾನದ ದೃಶ್ಯ.

ಅತ್ಯಾಚಾರ ಆರೋಪ: ಗ್ರಾ.ಪಂ. ಅಭ್ಯರ್ಥಿ ವಶಕ್ಕೆ

ಸುಳ್ಯ: ಕಲ್ಮಡ್ಕ ಗ್ರಾಮ ಪಂಚಾಯಿತಿಗೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರನ್ನು ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ  ಚುನಾವಣೆಯ ಮತದಾನದ ಹಿಂದಿನ ದಿನ (ಶನಿವಾರ) ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಾಲಕಿ ಮನೆಯವರು ನೀಡಿದ ದೂರಿನ ಮೇರೆಗೆ ಶನಿವಾರ  ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧನ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಾಗಿದೆ ಎಂದು ಎಸ್ ಐ ಆಂಜನೇಯ ರೆಡ್ಡಿ ತಿಳಿಸಿದ್ದಾರೆ.

ಹಾಸನ: ಶೇ 26 ಮತದಾನ

ಹಾಸನ: ಜಿಲ್ಲೆಯ ನಾಲ್ಕು ತಾಲ್ಲೂಕಿನ 120 ಪಂಚಾಯಿತಿ ಗಳಿಗೆ ಬೆಳಿಗ್ಗೆ 11ಗಂಟೆ ಹೊತ್ತಿಗೆ ಶೇ 26.05 ಮತದಾನವಾಗಿದೆ.

ಅರಸೀಕೆರೆ ಶೇ 25.09, ಬೇಲೂರು 22.80, ಆಲೂರು 33.87, ಹೊಳೆನರಸೀಪುರ 27.59 ರಷ್ಟು ಮತದಾನವಾಗಿದೆ. 

ಬೆಳಿಗ್ಗೆ ಮಂದಗತಿಯಲ್ಲಿ ಸಾಗಿದ ಮತದಾನ, ಮಧ್ಯಾಹ್ನ ಹೊತ್ತಿಗೆ ಬಿರುಸು ಪಡೆದುಕೊಂಡಿದೆ.

ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿ ತಾಲ್ಲೂಕಿನ ಬರೂರು ಜನತಾ ವಿದ್ಯಾಲಯದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ದುಡಿಯಲು ಗುಳೆ ಹೋದವರನ್ನು ಕರೆ ತಂದು ಮತ ಹಾಕಿಸಿದರು

ಬಾಗಲಕೋಟೆ: ಗ್ರಾಮ ಪಂಚಾಯ್ತಿ ಚುನಾವಣೆ ಎರಡನೇ ಹಂತದ ಮತದಾನ ಜಿಲ್ಲೆಯಲ್ಲಿ ಚುರುಕುಗೊಂಡಿದೆ. ಗುಳೇ ಹೋದವರು ಮತ ಹಾಕಲು ಊರುಗಳಿಗೆ ಬರುತ್ತಿದ್ದು, ಗ್ರಾಮೀಣ ಪರಿಸರ ಮತ್ತೆ ಜೀವ ಪಡೆದಿದೆ.

ಮಲ್ಲಿಗವಾಡದಲ್ಲಿ ಮತದಾನ ಬಹಿಷ್ಕಾರ

ಹುಬ್ಬಳ್ಳಿ: ಗ್ರಾಮ ಪಂಚಾಯ್ತಿ ಸ್ಥಾನಮಾನಕ್ಕೆ ಆಗ್ರಹಿಸಿ, ಹುಬ್ಬಳ್ಳಿ ತಾಲ್ಲೂಕಿನ ಮಲ್ಲಿಗವಾಡ ಗ್ರಾಮಸ್ಥರು ಮತದಾನವನ್ನು ಬಹಿಷ್ಕರಿಸಿದರು. ಹಿಂದಿನ ಗ್ರಾ.ಪಂ. ಚುನಾವಣೆಯನ್ನೂ ಇದೇ ಕಾರಣಕ್ಕಾಗಿ ಬಹಿಷ್ಕರಿಸಲಾಗಿತ್ತು.

ಕೊಳ್ಳೇಗಾಲ: ಚುನಾವಣೆ ಬಹಿಷ್ಕರಿಸಿದ ಗ್ರಾಮಸ್ಥರು

ಕೊಳ್ಳೇಗಾಲ: ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರ ಗ್ರಾಮದ 1 ನೇ ವಾರ್ಡ್ ನಲ್ಲಿ ಗ್ರಾಮಸ್ಥರು ಮತದಾನದಿಂದ ದೂರ ಉಳಿದಿದ್ದಾರೆ.

ವಾರ್ಡ್ ನಲ್ಲಿ ನಾಲ್ಕು ಸ್ಥಾನಗಳಿವೆ. ಆದರೆ ಎರಡು ಸಾಮಾನ್ಯ ಸ್ಥಾನಗಳಿಗೆ ಯಾರೂ ಸ್ಪರ್ಧಿಸಿಲ್ಲ. ಹೀಗಾಗಿ ಇನ್ನುಳಿದ ಎರಡು ಸ್ಥಾನಗಳಿಗೆ ಮಾತ್ರ ಮತ ಚಲಾಯಿಸುವಂತೆ ಚುನಾವಣಾ ಅಧಿಕಾರಿಗಳು ಸೂಚಿಸಿದರು. ಆದರೆ, ಇದಕ್ಕೆ ಒಪ್ಪದ ಗ್ರಾಮಸ್ಥರು ನಾಲ್ಕು ಮತಹಾಕಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. 

ಎರಡು ಸ್ಥಾನಗಳಿಗೆ 11 ಮಂದಿ ಸ್ಪರ್ಧಿಸಿದ್ದಾರೆ. 
ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು ಸ್ಥಳಕ್ಕೆ ಭೇಟಿ ಮಾಡಿ ಅಭ್ಯರ್ಥಿಗಳು ಹಾಗೂ ಮತದಾರರನ್ನು ಮನವೊಲಿಸುವ ಪ್ರಯತ್ನ ಮಾಡಿದರೂ ಜನರು ಒಪ್ಪಲಿಲ್ಲ.

ಪರಿಹಾರಕ್ಕೆ ಆಗ್ರಹಿಸಿ ಬಹಿಷ್ಕಾರ: ಮಹದೇಶ್ವರ ಬೆಟ್ಟದ ಪಡಸಲನತ್ತ ಗ್ರಾಮದಲ್ಲೂ ಮತದಾರರು ಮತದಾನದಿಂದ ದೂರ ಉಳಿದಿದ್ದಾರೆ. 

ಗ್ರಾಮಸ್ಥರೊಬ್ಬರು ಕಾವೇರಿ ವನ್ಯಧಾಮದಲ್ಲಿ ಆನೆ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಅವರ ಕುಟುಂಬಕ್ಕೆ ಅರಣ್ಯ‌ಇಲಾಖೆ ತಕ್ಷಣವೇ ಪರಿಹಾರ ಘೋಷಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ತುಮಕೂರು: ಶೇ 23.55 ಮತದಾನ

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ, ತಿಪಟೂರು, ಮಧುಗಿರಿ, ಶಿರಾ ಮತ್ತು ತುರುವೇಕೆರೆ ತಾಲ್ಲೂಕಿನಲ್ಲಿ ಬೆಳಿಗ್ಗೆ 11 ಗಂಟೆ ಹೊತ್ತಿಗೆ ಶೇ 23.55 ರಷ್ಟು ಮತದಾನವಾಗಿದೆ.

ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಮತಗಟ್ಟೆಯಲ್ಲಿ ಶಾಸಕ ಎಂ.ವಿ.ವೀರಭದ್ರಯ್ಯ ಮತದಾನ ಮಾಡಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ತಿಪಟೂರು ತಾಲ್ಲೂಕಿನ ಸಾರ್ಥವಳ್ಳಿ, ಹಾಲ್ಕುರಿಕೆ ಸೇರಿದಂತೆ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದರು.

ಮೈಸೂರು: ಶೇ 18.47 ಮತದಾನ

ಮೈಸೂರು ಜಿಲ್ಲೆಯ ಮೈಸೂರು, ನಂಜನಗೂಡು ಮತ್ತು ತಿ.ನರಸೀಪುರ ತಾಲ್ಲೂಕುಗಳಲ್ಲಿ ಬೆಳಿಗ್ಗೆ 11 ರ ವೇಳೆಗೆ ಶೇ 18.47 ಮತದಾನ ನಡೆದಿದೆ.

ಬಳ್ಳಾರಿ: ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ನಡೆದಿರುವ ಎರಡನೇ ಹಂತದ ಚುನಾವಣೆಯಲ್ಲಿ ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಶೇ 22.12 ಮತದಾನವಾಗಿದೆ

ರಾಮದುರ್ಗ: ಅಭ್ಯರ್ಥಿಯೊಬ್ಬರಿಗೆ ನೀಡಿದ ಚಿಹ್ನೆಯು ತಪ್ಪಾಗಿ ಮುದ್ರಿತಗೊಂಡಿದ್ದರಿಂದ ಮತದಾನ ಮುಂದೂಡಲಾಗಿದೆ.

ದಕ್ಷಿಣ ಕನ್ನಡ: ಶೇ 33.41 ಮತದಾನ

ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ 2 ನೇ ಹಂತದಲ್ಲಿ ಗ್ರಾಮ ಪಂಚಾಯತಿಗಳಿಗೆ ಮತದಾನ ನಡೆಯುತ್ತಿದ್ದು, ಬೆಳಿಗ್ಗೆ 11 ಗಂಟೆ ತನಕ ಶೇ 33.41 ಮತದಾನ ದಾಖಲಾಗಿದೆ. ಬೆಳ್ತಂಗಡಿ ತಾಲ್ಲೂಕಿನಲ್ಲಿ ಶೇ 33.59 , ಪುತ್ತೂರು- ಶೇ 34.23, ಸುಳ್ಯ - ಶೇ 31.62 ಮತ್ತು ಕಡಬ ಶೇ 33.81  ಮತದಾನ ನಡೆದಿದೆ.

ಗಂಗಾವತಿ ತಾಲ್ಲೂಕಿನಾದ್ಯಂತ 2ನೇ ಹಂತದ ಮತದಾನ ಪ್ರಕ್ರಿಯೆ ಬಿರುಸುಗೊಂಡಿದ್ದು, ಮತದಾರರು ಬೆಳಗ್ಗೆಯಿಂದಲೇ ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಸ್ವಗ್ರಾಮ ನಾಗನೂರು ಪಿ.ಕೆ. ಗ್ರಾಮದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತದಾನ ಮಾಡಿದರು.

ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ನಲವಡಿ ಗ್ರಾಮದಲ್ಲಿ ಬೆಳಿಗ್ಗೆ 11ರ ಹೊತ್ತಿಗೆ ಶೇ 50ರಷ್ಟು ಮತದಾನ ನಡೆದಿದೆ.

‘ಬಕೆಟ್’ ಬದಲಿಗೆ ‘ಬೀರು’; ಮತದಾನ ಮುಂದೂಡಿಕೆ

ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸಾಲಹಳ್ಳಿ ಗ್ರಾಮ ಪಂಚಾಯಿತಿಯ ವಾರ್ಡ್‌  ನಂ. 6ರಲ್ಲಿ ಅಭ್ಯರ್ಥಿಯೊಬ್ಬರಿಗೆ ನೀಡಿದ ಚಿಹ್ನೆಯು ತಪ್ಪಾಗಿ ಮುದ್ರಿತಗೊಂಡಿದ್ದರಿಂದ ಆ ಕ್ಷೇತ್ರದಲ್ಲಿ ಮತದಾನ ಮುಂದೂಡಲಾಗಿದೆ.

ವಡಗೇರಾ ತಾಲ್ಲೂಕಿನ ಕೊನಹಳ್ಳಿ ಗ್ರಾಮದಲ್ಲಿ ವ್ಹೀಲ್ ಚೇರ್ ಇಲ್ಲದಿದ್ದರಿಂದ ವಯೋವೃದ್ದರನ್ನು ಎತ್ತಿಕೊಂಡು ಬಂದರು

ಧಾರವಾಡ ಜಿಲ್ಲೆಯಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ ಶೇ. 8.27 ಮತದಾನವಾಗಿದೆ

ಮತದಾನ ವಿವರ: ಹುಬ್ಬಳ್ಳಿ ತಾಲ್ಲೂಕು- ಶೇ 7.97, ಕುಂದಗೋಳ ತಾಲೂಕು- ಶೇ.7.33, ಅಣ್ಣಿಗೇರಿ ತಾಲೂಕು- ಶೇ‌.8.85, ನವಲಗುಂದ ತಾಲೂಕು- ಶೇ.8.95

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ 14.83ರಷ್ಟು ಮತದಾನ

ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ 2ನೇ ಹಂತದಲ್ಲಿ ಗ್ರಾಮ ಪಂಚಾಯತಿಗಳಿಗೆ ಭಾನುವಾರ ಮತದಾನ ನಡೆಯುತ್ತಿದ್ದು, ಬೆಳಿಗ್ಗೆ 9 ಗಂಟೆ ತನಕ ಶೇ 14.83 ಮತದಾನ ದಾಖಲಾಗಿದೆ. ಬೆಳ್ತಂಗಡಿ ತಾಲ್ಲೂಕಿನಲ್ಲಿ ಶೇ 15.29 , ಪುತ್ತೂರು- ಶೇ 15.51, ಸುಳ್ಯ ಶೇ 13.81 ಮತ್ತು ಕಡಬ ಶೇ 14.03ರಷ್ಟು ಮತದಾನ ನಡೆದಿದೆ.

ಗದಗದಲ್ಲಿ ಶೇ 7.69 ರಷ್ಟು ಮತದಾನ

ಗದಗ: ಜಿಲ್ಲೆಯಲ್ಲಿ ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣೆಗಾಗಿ ಮುಂಡರಗಿ, ನರಗುಂದ, ರೋಣ ಹಾಗೂ ಗಜೇಂದ್ರಗಡ ತಾಲ್ಲೂಕುಗಳಲ್ಲಿ ಸ್ಥಾಪಿಸಿರುವ 424 ಮತಗಟ್ಟೆಗಳಲ್ಕಿ ಬೆಳಿಗ್ಗೆ 7 ಗಂಟೆಯಿಂದ  ಮತದಾನ ಆರಂಭವಾಗಿದೆ. ಬೆಳಿಗ್ಗೆ 9 ಗಂಟೆಯವರೆಗೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಶೇ. 8.22, ನರಗುಂದ ಶೇ 8.29, ರೋಣ ಶೇ. 6.62 ಹಾಗೂ ಗಜೇಂದ್ರಗಡ ತಾಲ್ಲೂಕಿನಲ್ಲಿ ಶೇ. 7.74  ಸೇರಿದಂತೆ ಒಟ್ಟು ಶೇ. 7.69 ರಷ್ಟು ಮತದಾನವಾಗಿದೆ.

ಹುಬ್ಬಳ್ಳಿ: ಮತದಾನ ಸ್ಥಗಿತಗೊಳಿಸಿದ ಗ್ರಾಮಸ್ಥರು

ಹುಬ್ಬಳ್ಳಿ: ತಾಲ್ಲೂಕಿನ ಕಟ್ನೂರು ಗ್ರಾಮ ಪಂಚಾಯ್ತಿಯಲ್ಲಿ ವಾರ್ಡ್‌ಗಳ ಮೀಸಲಾತಿ, ವ್ಯಾಪ್ತಿ ಹಾಗೂ ಮತದಾರರ ಪಟ್ಟಿಯಲ್ಲಿನ ಗೊಂದಲದಿಂದಾಗಿ ಗ್ರಾಮಸ್ಥರು ಹಾಗೂ ಅಭ್ಯರ್ಥಿಗಳು ಮತದಾನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದರು. ಮತದಾನ ಮುಂದೂಡುವಂತೆ ಪಟ್ಟು ಹಿಡಿದರು.

ಚಿತ್ತಾಪುರ: ನಿಷೇಧ ಉಲ್ಲಂಘಿಸಿ ಸಂತೆಗೆ ಅವಕಾಶ, ಮತದಾನಕ್ಕೆ ಅಡಚಣೆ

ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದಲ್ಲಿ ಮತದಾನ ದಿನವಾದ ಭಾನುವಾರ ಕೂಡ ಸಂತೆ ನಡೆಯಿತು. ಗ್ರಾಮದಲ್ಲಿ ಪ್ರತಿ ಭಾನುವಾರ ವಾರದ ಸಂತೆ ನಡೆಯುತ್ತದೆ. ಚುನಾವಣೆ ನಿಮಿತ್ತ ಸಂತೆ ನಿಷೇಧದ ನಡುವೆಯೂ ಗ್ರಾಮ ಪಂಚಾಯಿತಿ ಅಧಿಕಾರಿ ಸಂತೆ ನಡೆಯಲು ಪರೋಕ್ಷವಾಗಿ ಅವಕಾಶ ನೀಡಿರುವುದು ಬೆಳಕಿಗೆ ಬಂದಿದೆ.

ವಯೋವೃದ್ಧರೊಬ್ಬರು ರೋಣ ತಾಲ್ಲೂಕಿನ ಗುಜಮಾಗಡಿ ಗ್ರಾಮದ ಮತಗಟ್ಟೆ 33ರಲ್ಲಿ ಮತಚಲಾಯಿಸಿ, ಹೊರಬಂದರು

ಚಳ್ಳಕೆರೆ: ಮತಪತ್ರದಲ್ಲಿ ದೋಷ

ಚಳ್ಳಕೆರೆ ತಾಲ್ಲೂಕಿನ ಸೋಮಗುದ್ಧು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಮದುರೆ ಮತ್ತು ಸಾಣಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗೆರೆ ಗ್ರಾಮ ಹಾಗೂ ಮಹಾದೇವ ಪುರ ಗ್ರಾಮದಲ್ಲಿ ಮತಪತ್ರದಲ್ಲಿ ದೋಷ ಕಂಡುಬಂದ ಕಾರಣ ಮರು ಮುದ್ರಿಸಿ ಮತದಾನಕ್ಕೆ ಅವಕಾಶ ನೀಡಲಾಯಿತು.

ಬೆಳಗಾವಿ ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ಮತದಾನ ಮಂದಗತಿಯಲ್ಲಿ ಸಾಗಿದೆ. ಬೆಳಿಗ್ಗೆ 7ರಿಂದ 9ರವರೆಗೆ ಶೇ 8.27ರಷ್ಟು ಮತದಾನವಾಗಿದೆ.

ಶಿರಾದಲ್ಲಿ ಶೇ 8.69 ಮತದಾನ

ತುಮಕೂರು: ಬೆಳಿಗ್ಗೆ 9ರವರೆಗೆ ಮಧುಗಿರಿ ತಾಲ್ಲೂಕಿನಲ್ಲಿ ಶೇ 8.6, ಚಿಕ್ಕನಾಯಕನಹಳ್ಳಿ ಶೇ 7.34, ತಿಪಟೂರು 6.47, ತುರುವೇಕೆರೆ ಶೇ 7.82 ಮತ್ತು ಶಿರಾದಲ್ಲಿ 8.69 ರಷ್ಟು ಮತದಾನವಾಗಿದೆ.

ಕಲಾದಗಿ ಗ್ರಾಮ ಪಂಚಾಯ್ತಿ: ಅಭ್ಯರ್ಥಿಗಳ ಚಿಹ್ನೆ ಅದಲು ಬದಲು

ಬಾಗಲಕೋಟೆ: ತಾಲ್ಲೂಕಿನ ಕಲಾದಗಿಯ 11ನೇ ವಾರ್ಡ್ ನ  ಮತಗಟ್ಟೆ ಸಂಖ್ಯೆ 51ರಲ್ಲಿ ಅಭ್ಯರ್ಥಿಗಳ ಚಿಹ್ನೆ ಅದಲು ಬದಲು ಆಗಿ ಗೊಂದಲ ಸೃಷ್ಟಿಯಾಗಿದೆ. ಮತದಾನ ಸ್ಥಗಿತಗೊಂಡಿದೆ.

ಯಲ್ಲಾಪುರ ತಾಲ್ಲೂಕಿನ ಅರೆಬೈಲ್ ಮತಗಟ್ಟೆಯಲ್ಲಿ ಕಾರ್ಮಿಕ ಹಾಗೂ ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ಮತ ಚಲಾಯಿಸಿದರು

ಮೈಕೊರೆಯುವ ಚಳಿಯ ನಡುವೆಯೂ ಉತ್ತರ ಕನ್ನಡ ಜಿಲ್ಲೆಯ 7 ತಾಲ್ಲೂಕುಗಳಲ್ಲಿ ಬೆಳಿಗ್ಗೆ 9 ಗಂಟೆವರೆಗೆ ಶೇ.10.26ರಷ್ಟು ಮತದಾನ

ಮತದಾನಕ್ಕೆ ಬರುತ್ತಿದ್ದಾರೆ ಗುಳೆ ಹೋದವರು

ರಾಯಚೂರು: ಜಿಲ್ಲೆಯಿಂದ ವಿವಿಧೆಡೆ ಗುಳೆ ಹೋಗಿದ್ದ ಜನರು ಮತದಾನ ಮಾಡಲು ವಾಹನಗಳಲ್ಲಿ ಗುಂಪುಗುಂಪಾಗಿ  ಗ್ರಾಮಗಳಿಗೆ ಬರುತ್ತಿದ್ದಾರೆ. ಲಿಂಗಸುಗೂರು, ಮಸ್ಕಿ ತಾಲ್ಲೂಕಿನ ಗ್ರಾಮಗಳಲ್ಲಿ ಮತದಾರರನ್ನು ಹೊತ್ತು ಸಾಗುತ್ತಿರುವ ವಾಹನಗಳ ನೋಟ ಸಾಮಾನ್ಯವಾಗಿದೆ. ಕ್ರೂಸರ್, ಜೀಪ್ , ಕಾರುಗಳು ಹಾಗೂ ಖಾಸಗಿ ಬಸ್ಸುಗಳಲ್ಲಿ ಮತದಾರರನ್ನು ಕರೆತರಲಾಗಿದೆ.

ಹೂವಿನಹಡಗಲಿ ತಾಲ್ಲೂಕಿನಲ್ಲಿ 5.98 ರಷ್ಟು ಮತದಾನ. ಚಳಿಯ ಕಾರಣದಿಂದ ಆರಂಭಿಕ ಮತದಾನ ನೀರಸ

ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ಲ ಗ್ರಾಮ ಪಂಚಾಯ್ತಿಯ 26ನೇ ಮತಗಟ್ಟೆಯಲ್ಲಿ ಆರೋಗ್ಯ ಸಿಬ್ಬಂದಿ ಮತದಾರರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸರ್ ಸಿಂಪಡಿಸಿದರು

ಹುಬ್ಬಳ್ಳಿ ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯ್ತಿಗಳಿಗೆ ಎರಡನೇ ಹಂತದ ಮತದಾನ ಬಿರುಸಿನಿಂದ ನಡೆಯುತ್ತಿದೆ.

ಹಾವೇರಿ ಜಿಲ್ಲೆ: ಎರಡನೇ ಹಂತದಲ್ಲಿ ಈವರೆಗೆ ಶೇ 7.40 ಮತದಾನ

ಹಾವೇರಿ: ಜಿಲ್ಲೆಯ ಬ್ಯಾಡಗಿ, ಶಿಗ್ಗಾವಿ, ಸವಣೂರ, ಹಾನಗಲ್ ನಾಲ್ಕು ತಾಲ್ಲೂಕುಗಳ 105 ಗ್ರಾಮ ಪಂಚಾಯ್ತಿಗಳ ಎರಡನೇ ಹಂತದ ಚುನಾವಣೆಯಲ್ಲಿ ಭಾನುವಾರ ಬೆಳಿಗ್ಗೆ 9ರವರೆಗೆ  ಶೇ 7.40 ಮತದಾನವಾಗಿದೆ. ಬ್ಯಾಡಗಿ ತಾಲ್ಲೂಕು- ಶೇ 7.52, ಹಾನಗಲ್ ತಾಲ್ಲೂಕು- ಶೇ 7.13, ಸವಣೂರ ತಾಲ್ಲೂಕು- ಶೇ 7.06, ಶಿಗ್ಗಾವಿ ತಾಲ್ಲೂಕು- ಶೇ 8.11 ಮತದಾನವಾಗಿದೆ.

ಮತ್ತಿಹಳ್ಳಿಯಲ್ಲಿ ಬ್ಯಾಲೆಟ್ ಅದಲು–ಬದಲು: ಮತದಾನ ಸ್ಥಗಿತ

ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದ ಬ್ಯಾಲೆಟ್ ಅದಲು ಬದಲಾಗಿದೆ. ಮತ್ತಿಹಳ್ಳಿ ಗ್ರಾಮ ಪಂಚಾಯಿತಿ 3 ಮತ್ತು 4 ನೇ ವಾರ್ಡ್ ನಲ್ಲಿ ಅದಲು ಬದಲಾಗಿದ್ದು ಮತದಾನ ಸ್ಥಗಿತಗೊಂಡಿದೆ. ಗ್ರಾಮಸ್ಥರು ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.  

ಬಾಗಲಕೋಟೆ: ಐದು ತಾಲ್ಲೂಕುಗಳಲ್ಲಿ ಎರಡನೇ ಹಂತದಲ್ಲಿ ಮತದಾನ ಆರಂಭ

ಬಾಗಲಕೋಟೆ: ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ (ಬಾಗಲಕೋಟೆ, ಬಾದಾಮಿ, ಗುಳೇದಗುಡ್ಡ, ಇಳಕಲ್, ಹುನಗುಂದ) ಗ್ರಾಮ ಪಂಚಾಯ್ತಿ ಚುನಾವಣೆ ಎರಡನೇ ಹಂತದ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ.

ವಿಜಯಪುರ ಶೇ.14.48 ಮತದಾನ

ವಿಜಯಪುರ ಜಿಲ್ಲೆಯ ಇಂಡಿ, ಸಿಂದಗಿ, ಚಡಚಣ ಮತ್ತು ದೇವರ ಹಿಪ್ಪರಗಿ ತಾಲ್ಲೂಕಿನ 88 ಗ್ರಾಮ ಪಂಚಾಯಿತಿಗಳಿಗೆ ಬೆಳಿಗ್ಗೆ 7ರಿಂದ 9ರ ವರೆಗೆ ಶೇ 14.45ರಷ್ಟು ಮತದಾನವಾಗಿದೆ.

ರಾಯಚೂರಿನಲ್ಲಿ ಶೇ 2.75 ಮತದಾನ

ರಾಯಚೂರು ಜಿಲ್ಲೆಯಲ್ಲಿ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಸಿಧನೂರು, ಲಿಂಗಸುಗೂರು ಹಾಗೂ ಮಸ್ಕಿ ತಾಲ್ಲೂಕುಗಳಲ್ಲಿ ಮತದಾನ ಸುಗಮವಾಗಿ ಆರಂಭವಾಗಿದೆ.

ಬೆಳ್ತಂಗಡಿ ತಾಲ್ಲೂಕಿನ ಗರ್ಡಾಡಿ ಶಾಲೆಯಲ್ಲಿ ಶಾಸಕ ಹರೀಶ್ ಪೂಂಜ ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು

ಶೇ 5.41 ಮತದಾನ

ದಾವಣಗೆರೆ: ಎರಡನೇ ಹಂತದ ಗ್ರಾಮ ಚಾಯಿತಿ ಚುನಾವಣೆಯಲ್ಲಿ ಮೂರು ತಾಲ್ಲೂಕುಗಳಲ್ಲಿ ಬೆಳಿಗ್ಗೆ  9ರ ಹೊತ್ತಿಗೆ ಶೇ 5.41 ಮತದಾನವಾಗಿದೆ. ಚನ್ನಗಿರಿ ತಾಲ್ಲೂಕಿನಲ್ಲಿ ಶೇ 4.05 , ಹರಿಹರ ತಾಲ್ಲೂಕಿನಲ್ಲಿ ಶೇ 4.17, ನ್ಯಾಮತಿ ತಾಲ್ಲೂಕಿನಲ್ಲಿ ಶೇ 8.03 ಮತದಾನವಾಗಿದೆ. ಮೂರು ತಾಲ್ಲೂಕುಗಳ 101 ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿದೆ.

ಮದುವೆ ಸಂಭ್ರಮದ ಮಧ್ಯೆ ಬಂದು ಮತಹಾಕಿದ ಸಹೋದರಿಯರು

ಬೆಳ್ತಂಗಡಿ (ದಕ್ಷಿಣ ಕನ್ನಡ) : ತಾಲ್ಲೂಕಿನ ಮುಂಡಾಜೆ ಗ್ರಾಮದ ಕೂಳೂರು  ಇಬ್ರಾಹಿಂ ಕೂಳೂರು ಅವರ ಇಬ್ಬರು ಪುತ್ರಿಯರಾದ ಝುಹುರಾ ಮತ್ತು ಖೈರುನ್ನಿಸಾ ಸಹೋದರಿಯರು ತಮ್ಮದೇ ಮದುವೆ ಸಂಭ್ರಮದ ಮಧ್ಯೆ ಮುಂಡಾಜೆ ಗ್ರಾಮದ  103  ಸಂಖ್ಯೆಯ ಮತಕೇಂದ್ರಕ್ಕೆ ಬಂದು ತಮ್ಮ ಹಕ್ಕು ಚಲಾಯಿಸಿದರು.

ಬ್ಯಾಲೆಟ್ ಅದಲು ಬದಲು

ದಾವಣಗೆರೆ: ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದ ಬ್ಯಾಲೆಟ್ ಅದಲು ಬದಲಾಗಿದೆ. ಮತ್ತಿಹಳ್ಳಿ ಗ್ರಾಮ ಪಂಚಾಯಿತಿ 3 ಮತ್ತು 4 ನೇ ವಾರ್ಡ್ ನಲ್ಲಿ ಅದಲು ಬದಲಾಗಿದ್ದು ಮತದಾನ ಸ್ಥಗಿತಗೊಂಡಿದೆ. ಗ್ರಾಮಸ್ಥರು ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.  

ಯಾದಗಿರಿ ಜಿಲ್ಲೆಯ ಯಾದಗಿರಿ, ಗುರುಮಠಕಲ್, ವಡಗೇರಾ ತಾಲ್ಲೂಕಿನಲ್ಲಿ ಎರಡನೇ ಹಂತದ ಗ್ರಾಮ ಪಂಚಾಯಿತಿ ಮತದಾನ ಆರಂಭವಾಗಿದೆ.

ಕೂಡ್ಲಿಗಿ ತಾಲ್ಲೂಕಿನ ಹಿರೆಕುಂಬಳಗುಂಟೆ ಗ್ರಾ.ಪಂ.ವ್ಯಾಪ್ತಿಯ ಬಯಲುತುಂಬರಗುದ್ದಿ ಗ್ರಾಮದಲ್ಲಿ ಬೆಳಗ್ಗೆಯಿಂದಲೇ ಬಿರುಸಿನ ಮತದಾನ ನಡೆದಿದೆ

ಹಡಗಲಿ ತಾಲ್ಲೂಕಿನ ಮತಗಟ್ಟೆಗೆ ಗಾಲಿಕುರ್ಚಿಯಲ್ಲಿ ಬಂದ ಮಹಿಳೆ

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರು ಗ್ರಾಮ‌ಪಂಚಾಯಿತಿಯ ಅಬೂಜಿಹಳ್ಳಿ ಮತಗಟ್ಟೆಯಲ್ಲಿ ತಮ್ಮಡಿಹಳ್ಳಿ ಮಠದ ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ ಮತಚಲಾಯಿಸಿದರು.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ನಾಗರಾಳ ಗ್ರಾಮದಲ್ಲಿ ಚುಮುಚುಮು ಚಳಿಯಲ್ಲೂ ಹಕ್ಕು ಚಲಾಯಿಸಲು ಮತದಾರರ ಉತ್ಸಾವ. ಬೆಳಿಗ್ಗೆಯೇ ಮತಗಟ್ಟೆಯತ್ತ ಧಾವಿಸುತ್ತಿರುವ ಮತದಾರರು

ಗೌರಿಬಿದನೂರು: ಗ್ರಾ.ಪಂ. ಚುನಾವಣೆ, ಮತದಾರರ ಓಲೈಸಲು ನಾಯಕರ ಕಸರತ್ತು

ವಿಜಯಪುರ: ಆರತಿ‌ ತಟ್ಟೆಯೊಂದಿಗೆ ಮತ ಹಾಕಲು ಬಂದ ಮಹಿಳಾ ಮತದಾರರು !

ವಿಜಯಪುರ: ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇಮಸಳಿ ಗ್ರಾಮದ ಮತಗಟ್ಟೆಯಲ್ಲಿ ಮಹಿಳಾ ಮತದಾರರು ಮತಪೆಟ್ಟಿಗೆಗೆ  ಆರತಿ ಬೆಳಗಿ ಮತ ಹಾಕಲು ಮುಂದಾದ ಕುತೂಹಲಕರ ಘಟನೆ ನಡೆದಿದೆ.

ಆದರೆ, ಚುನಾವಣಾ ಸಿಬ್ಬಂದಿ ಆರತಿ ತಟ್ಟೆಯನ್ನು ಮತದಾನ ಕೊಠಡಿಯೊಳಗೆ ಬಿಡದೆ ತಡೆದರು. ಬಳಿಕ ಮತಗಟ್ಟೆ ಹೊರಗಡೆಯೇ ಅರತಿ ಬೆಳಗಿದ ಮಹಿಳೆಯರು, ನಂತರ ಮತ ಚಲಾಯಿಸಿದರು.

ಮಧ್ಯರಾತ್ರಿ ಮತದಾರರಿಗೆ ಹಣ, ಹೆಂಡ, ಮಾಂಸದ ಆಮಿಷ: ಕೋಳಿಯೊಂದಿಗೆ ಮಸಾಲೆ ಹಂಚಿಕೆ

ತುಮಕೂರು: 1,321 ಮತಗಟ್ಟೆಯಲ್ಲಿ ಮತದಾನ

ತುಮಕೂರು: ಜಿಲ್ಲೆಯ ತಿಪಟೂರು,  ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಮಧುಗಿರಿ ಮತ್ತು ಶಿರಾ ತಾಲ್ಲೂಕಿನಲ್ಲಿ ಎರಡನೇ ಹಂತದ ಮತದಾನ ಆರಂಭವಾಗಿದೆ. 

ಒಟ್ಟು 161 ಪಂಚಾಯಿತಿಗಳ 2,400 ಸದಸ್ಯ ಸ್ಥಾನಗಳಿಗೆ, 1,321 ಮತಗಟ್ಟೆಗಳಲ್ಲಿ ಚುನಾವಣೆ ನಡೆಯುತ್ತಿದೆ. 

131ಅತಿ ಸೂಕ್ಷ್ಮ, 198 ಸೂಕ್ಷ್ಮ ಮತ್ತು 992 ಸಾಮಾನ್ಯ ಮತಗಟ್ಟೆಗಳು ಇವೆ.

ಶಿರಾ ತಾಲ್ಲೂಕಿನ ಚಿರತಹಳ್ಳಿಯಲ್ಲಿ ಶಾಸಕ ಡಾ.ಎಂ.ಸಿ.ರಾಜೇಶ್ ಗೌಡ ಮತಚಲಾಯಿಸಿದರು. 

ಬೆಳಗಾವಿ: ಜಿಲ್ಲೆಯ 218 ಗ್ರಾಮ ಪಂಚಾಯಿತಿಗಳ 1789 ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದೆ.

ಬೀದರ್: 3,389 ಅಭ್ಯರ್ಥಿಗಳು ಅಂತಿಮ ಕಣದಲ್ಲಿ

ನವಲಗುಂದ ತಾಲ್ಲೂಕಿನಲ್ಲಿ 14 ಗ್ರಾಮ ಪಂಚಾಯ್ತಿಗಳು, 90 ಮತಗಟ್ಟೆ

3,697 ಸ್ಥಾನಗಳಿಗೆ ಈಗಾಗಲೇ ಅವಿರೋಧ ಆಯ್ಕೆ ನಡೆದಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.