ADVERTISEMENT

ಕೋವಿಡ್‌–19 ಸಹಾಯವೇದಿಕೆ ಆರಂಭ: ಅಧಿಕೃತ ಮಾಹಿತಿ ಪೂರೈಕೆ, ಸುಳ್ಳು ಸುದ್ದಿಗೆ ತಡೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2020, 10:17 IST
Last Updated 13 ಏಪ್ರಿಲ್ 2020, 10:17 IST
   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್–19 ಕುರಿತಂತೆ ನಿಖರ ಮಾಹಿತಿ ಹಾಗೂ ಸುದ್ದಿಗಾಗಿ ಸರ್ಕಾರ ಸಹಾಯವೇದಿಕೆ ಆರಂಭಿಸಿದೆ.

ಮಾಹಿತಿ ನೀಡುವ ಕೆಲಸದಲ್ಲಿ ಸರ್ಕಾರದೊಂದಿಗೆ ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ಗಳು ಕೈ ಜೋಡಿಸಿವೆ. ಕೊರೊನಾ ವೈರಸ್‌ ಕುರಿತ ಇತ್ತೀಚಿನ ಅಧಿಕೃತ ಮಾಹಿತಿಗಳನ್ನು ಫೇಸ್‌ಬುಕ್‌ ಮತ್ತು ವಾಟ್ಸಾಪ್‌ಗಳ ಮೂಲಕ ನೀಡಲಾಗುತ್ತದೆ. ಅಲ್ಲದೆ, ಸುಳ್ಳು ಸುದ್ದಿ ಗಳಿಗೆ ಕಡಿವಾಣ ಹಾಕಲು ಸರ್ಕಾರ ಈ ನಡೆ ಇಟ್ಟಿದೆ.

ನಮ್ಮೊಡನೆ ಸಂಪರ್ಕದಲ್ಲಿದ್ದು, ಸುಳ್ಳು ಸುದ್ದಿಯಿಂದ ದೂರವಿರಿ ಎಂದು ಸರ್ಕಾರ ತಿಳಿಸಿದೆ. ಈ‌ ಸೇವೆ ನೀಡಲು ಮುಂದಾಗಿರು ಫೇಸ್‌ಬುಕ್‌ ಹಾಗೂ ವಾಟ್ಸಪ್ ತಂಡಗಳಿಗೆ ಸರ್ಕಾರ ಧನ್ಯವಾದಗಳನ್ನು ಅರ್ಪಿಸಿದೆ.

ADVERTISEMENT

ವಾಟ್ಸ್‌ಆ್ಯಪ್‌ನಿಂದ 8750971717ಗೆ HI ಎಂದು ಮತ್ತು @KarnatakaVarthe.Officialgeಗೆ ಸಂದೇಶ ರವಾನಿಸಿದರೆ ರಾಜ್ಯದಲ್ಲಿ ಕೋವಿಡ್‌ 19ಗೆ ಸಂಬಂಧಿಸಿದ ಮಾಹಿತಿ ಲಭ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.