ADVERTISEMENT

‘ಜಾಡಿಸಿ ಒದಿತಿನಿ, ನಡಿ ಈಗ’..! ಸಚಿವ ಡಿ. ಸುಧಾಕರ್ ಮತ್ತೊಂದು ವಿಡಿಯೊ ಬಹಿರಂಗ

ನ್ಯಾಯ ಕೇಳಿದವನ ಮುಂದೆ ದರ್ಪ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2023, 12:52 IST
Last Updated 13 ಸೆಪ್ಟೆಂಬರ್ 2023, 12:52 IST
<div class="paragraphs"><p>ಡಿ ಸುಧಾಕರ್</p></div>

ಡಿ ಸುಧಾಕರ್

   

ಚಿತ್ರದುರ್ಗ: ನ್ಯಾಯ ದೊರಕಿಸಿಕೊಡಿ ಎಂದು ಅಂಗಲಾಚಿದ ವ್ಯಕ್ತಿಯೊಬ್ಬರಿಗೆ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್‌ ಜಾಡಿಸಿ ಒದೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾದ ಮತ್ತೊಂದು ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಸಚಿವರು ಕಾರಲ್ಲಿ ಕುಳಿತು ಪ್ರಯಾಣಕ್ಕೆ ಅಣಿಯಾಗುತ್ತಿರುವಾಗ ವ್ಯಕ್ತಿಯೊಬ್ಬರು ಸಮಸ್ಯೆ ತೋಡಿಕೊಂಡು ನ್ಯಾಯಕ್ಕಾಗಿ ಅಂಗಲಾಚಿದ್ದು ವಿಡಿಯೊದಲ್ಲಿದೆ. ಇದು ಕೆಲ ವರ್ಷದ ಹಳೆಯ ವಿಡಿಯೊ ಎನ್ನಲಾಗಿದ್ದು, ಭೂಕಬಳಿಕೆ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾದ ಬಳಿಕ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ.

ADVERTISEMENT

‘ತುಂಬಾ ತೊಂದರೆಯಲ್ಲಿದ್ದೇನೆ, ದಯಮಾಡಿ ಅವರನ್ನು ಕರೆಸಿ ನ್ಯಾಯ ದೊರಕಿಸಿಕೊಡಿ..’ ಎಂದು ವ್ಯಕ್ತಿಯೊಬ್ಬರು ಸುಧಾಕರ್‌ ಅವರನ್ನು ಪರಿಪರಿಯಾಗಿ ಕೇಳಿಕೊಳ್ಳುತ್ತಾರೆ. ತಾಳ್ಮೆ ಕಳೆದುಕೊಂಡ ಸುಧಾಕರ್‌, ‘ಇಲ್ಲಿದ್ದರೆ ಜಾಡಿಸಿ ಒದೆಯುತ್ತೇನೆ. ಇಲ್ಲಿಂದ ಮೊದಲು ಹೊರಡು..’ ಎನ್ನುತ್ತಲೇ ಸಿಟ್ಟಿನಿಂದ ಕಾರು ಇಳಿದಿದ್ದು ವಿಡಿಯೊದಲ್ಲಿದೆ.

ಇದನ್ನೂ ಓದಿ

ಭೂಕಬಳಿಕೆ, ಹಲ್ಲೆ ಆರೋಪ: ದೂರುದಾರರಿಗೆ ಸಚಿವ ಡಿ.ಸುಧಾಕರ್‌ ಬೆದರಿಕೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.