ADVERTISEMENT

ನ್ಯೂಜಿಲೆಂಡ್ ಜೊತೆ ಶಿಕ್ಷಣ, ತಂತ್ರಜ್ಞಾನ ಸಹಯೋಗ: ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 18:08 IST
Last Updated 14 ಜನವರಿ 2026, 18:08 IST
ನ್ಯೂಜಿಲೆಂಡ್‌ನ ನಾವೀನ್ಯತೆ ಪರಿಸರ ವ್ಯವಸ್ಥೆಯ ನಿಯೋಗದ ಜತೆ ಸಚಿವ ಪ್ರಿಯಾಂಕ್ ಖರ್ಗೆ
ನ್ಯೂಜಿಲೆಂಡ್‌ನ ನಾವೀನ್ಯತೆ ಪರಿಸರ ವ್ಯವಸ್ಥೆಯ ನಿಯೋಗದ ಜತೆ ಸಚಿವ ಪ್ರಿಯಾಂಕ್ ಖರ್ಗೆ   

ಬೆಂಗಳೂರು: ನ್ಯೂಜಿಲೆಂಡ್‌ ಜತೆ ತಂತ್ರಜ್ಞಾನ, ಶಿಕ್ಷಣ, ಸಂಶೋಧನೆ ಮತ್ತು ಉದಯೋನ್ಮುಖ ಕ್ಷೇತ್ರಗಳಲ್ಲಿ ಸಹಯೋಗಕ್ಕೆ ಕರ್ನಾಟಕ ಉತ್ಸುಕತೆ ಹೊಂದಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ತಮ್ಮನ್ನು ಭೇಟಿ ಮಾಡಿದ ನ್ಯೂಜಿಲೆಂಡ್‌ನ ನಾವೀನ್ಯತೆ ಪರಿಸರ ವ್ಯವಸ್ಥೆಯ ನಿಯೋಗದ ಜತೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು.

ಕರ್ನಾಟಕವು ಭಾರತದ ನಾಲ್ಕನೇ ಅತಿದೊಡ್ಡ ತಂತ್ರಜ್ಞಾನ ಕೇಂದ್ರವಾಗಿದೆ. ಸಂಶೋಧನೆ, ಅಭಿವೃದ್ಧಿ, ನಾವೀನ್ಯತೆ ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ ಎಂದು ಅವರು ನಿಯೋಗಕ್ಕೆ ಮಾಹಿತಿ ನೀಡಿದರು.

ADVERTISEMENT

ಕೃತಕ ಬುದ್ಧಿಮತ್ತೆ, ಬಾಹ್ಯಾಕಾಶ, ಹವಾಮಾನ, ಕೃಷಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಇತರ ಉದಯೋನ್ಮುಖ ಡಿಜಿಟಲ್‌ ಕ್ಷೇತ್ರಗಳಲ್ಲೂ ಸಹಭಾಗಿತ್ವ ಹೊಂದಬಹುದಾಗಿದೆ ಎಂದು ಪ್ರಿಯಾಂಕ್ ಸಲಹೆ ನೀಡಿದರು.

ನ್ಯೂಜಿಲೆಂಡ್‌ ಪ್ರಧಾನಮಂತ್ರಿಯವರ ಏಷ್ಯಾ ವಿದ್ಯಾರ್ಥಿ ವೇತನ ಕಾರ್ಯಕ್ರಮದಡಿ ಈ ನಿಯೋಗವು ಕರ್ನಾಟಕಕ್ಕೆ ಭೇಟಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.