ADVERTISEMENT

ರಾಜ್ಯದ ಎಂಟು ಪೊಲೀಸರಿಗೆ ದಕ್ಷತಾ ಪದಕ: ವಿವರ ಇಲ್ಲಿದೆ...

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 11:40 IST
Last Updated 31 ಅಕ್ಟೋಬರ್ 2025, 11:40 IST
   

ಬೆಂಗಳೂರು: ಪ್ರಕರಣಗಳ ತನಿಖೆ ಹಾಗೂ ಗುಪ್ತದಳ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ ರಾಜ್ಯದ ಎಂಟು ಮಂದಿ ಪೊಲೀಸರು, 2025ನೇ ಸಾಲಿನ ಕೇಂದ್ರೀಯ ಗೃಹಮಂತ್ರಿಯವರ ದಕ್ಷತಾ ಪದಕಕ್ಕೆ ಭಾಜನರಾಗಿದ್ಧಾರೆ.

ಪದಕಕ್ಕೆ ಭಾಜನರಾದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಹೆಸರನ್ನು ಶುಕ್ರವಾರ ಪ್ರಕಟಿಸಲಾಗಿದ್ದು ಪದಕ ಲಭಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿವರ ಇಲ್ಲಿದೆ.

ತನಿಖಾ ವಿಭಾಗ

  • ಎಂ.ಕೆ.ತಮ್ಮಯ್ಯ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹಾಸನ

    ADVERTISEMENT
  • ಪ್ರಕಾಶ್‌ ರಾಥೋಡ್, ಎಸಿಪಿ, ಕೆ.ಜಿ ಹಳ್ಳಿ ಉಪ ವಿಭಾಗ, ಬೆಂಗಳೂರು ನಗರ

  • ಗುರುರಾಜ್‌ ಈಶ್ವರ್ ಕಲ್ಯಾಣಶೆಟ್ಟಿ, ಪೊಲೀಸ್ ಇನ್‌ಸ್ಪೆಕ್ಟರ್, ಸಿಸಿಆರ್‌ಬಿ, ಬೆಳಗಾವಿ ನಗರ

  • ಶ್ರೀಶೈಲ ಕೆ. ಬ್ಯಾಕೋಡ್‌, ಸಿಪಿಐ, ಮುಡಲಗಿ ಪೊಲೀಸ್ ಠಾಣೆ, ಬೆಳಗಾವಿ ಜಿಲ್ಲೆ

  • ರಮೇಶ್‌ ಚಾಯಗೋಳ್‌, ಇನ್‌ಸ್ಪೆಕ್ಟರ್‌, ಸುದ್ದಗುಂಟೆಪಾಳ್ಯ ಠಾಣೆ, ಬೆಂಗಳೂರು

ಗುಪ್ತದಳ ವಿಭಾಗ

  • ಸಿ.ವಿ.ದೀಪಕ್‌, ಡಿವೈಎಸ್‌ಪಿ, ರಾಜ್ಯ ಗುಪ್ತದಳ, ಬೆಂಗಳೂರು

  • ಕಲ್ಲಪ್ಪ ಎಚ್‌. ಅತನೂರು, ಪಿಎಸ್‌ಐ, ರಾಜ್ಯ ಗುಪ್ತದಳ, ಬೆಂಗಳೂರು

  • ಟಿ.ಎಂ.ಮಧುಕುಮಾರ್‌, ಸಿಎಚ್‌ಸಿ, ಎಎನ್‌ಎಫ್‌, ಕಾರ್ಕಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.