ಆರ್. ಅಶೋಕ
ಬೆಳಗಾವಿ: 'ಸಿದ್ದರಾಮಯ್ಯ ಈಗ ಔಟ್ ಗೋಯಿಂಗ್ ಸಿ.ಎಂ ಆಗಿದ್ದಾರೆ. ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ಕ್ರಾಂತಿಯಾಗುವುದು ನಿಶ್ಚಿತ' ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.
ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಜ್ಯದಲ್ಲಿ ನವೆಂಬರ್ ನಲ್ಲಿ ಕ್ರಾಂತಿಯಾಗುತ್ತದೆ ಎಂದು ಹೇಳಿದ್ದ ಸಚಿವರಾಗಿದ್ದ ರಾಜಣ್ಣ ಈಗ ಮನೆಗೆ ಹೋಗಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲೂ ಒಪ್ಪಂದ ಆಗಿರುವುದು ನಿಜ. ಅಧಿಕಾರಕ್ಕಾಗಿ ಈಗ ಜಗಳವೂ ಆರಂಭವಾಗಿದೆ. ಸಿದ್ದರಾಮಯ್ಯ ಅಧಿಕಾರ ಬಿಡುವ ಜಾಯಮಾನದವರಲ್ಲ. ಇನ್ನೂ ಡಿ.ಕೆ.ಶಿವಕುಮಾರ್ ಹಠ ಬಿಡುವುದಿಲ್ಲ' ಎಂದರು.
'ನಾವಂತೂ ಮೈತ್ರಿ ಸರ್ಕಾರ ರಚಿಸುವುದಿಲ್ಲ. ಆಪರೇಷನ್ ಕಮಲ ಮಾಡುವ ವಿಚಾರದಲ್ಲೂ ಇಲ್ಲ. ಆದರೆ, ಚುನಾವಾಣೆಗೆ ಹೋಗಲು ಸಿದ್ಧರಿದ್ದೇವೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.