ADVERTISEMENT

ವಿಧಾನಸೌಧ ವ್ಯಾಪಾರ ಸೌಧವಾಗಿ ಬದಲಾಗಿದೆ: ಪ್ರಿಯಾಂಕ್‌ ಖರ್ಗೆ ವಾಗ್ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಸೆಪ್ಟೆಂಬರ್ 2022, 14:17 IST
Last Updated 17 ಸೆಪ್ಟೆಂಬರ್ 2022, 14:17 IST
ಪ್ರಿಯಾಂಕ್‌ ಖರ್ಗೆ
ಪ್ರಿಯಾಂಕ್‌ ಖರ್ಗೆ   

ಬೆಂಗಳೂರು: ವಿಧಾನಸೌಧ ಈಗ ವ್ಯಾಪಾರ ಸೌಧವಾಗಿ ಬದಲಾಗಿದೆ ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದಾರೆ.

ಈ ವಿಚಾರವಾಗಿ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಕಾರ್ಟೂನ್‌ ಹಂಚಿಕೊಂಡಿರುವ ಅವರು, ‘ಸಿಎಂ ಹುದ್ದೆ ₹2500 ಕೋಟಿಗೆ ಬಿಕರಿಯಾಗುವ ಈ ವ್ಯಾಪಾರ ಸೌಧದಲ್ಲಿ ಶಾಸಕಾಂಗಡಿಯಲ್ಲಿ ಶಾಸಕರ ಖರೀದಿಸಲಾಗುತ್ತದೆ. ಕಾರ್ಯಾಂಗಡಿಯಲ್ಲಿ ಸರ್ಕಾರಿ ಹುದ್ದೆಗಳ ಮಾರಾಟವಾಗುತ್ತಿವೆ. 40 ಪರ್ಸೆಂಟ್ ಕಮಿಷನ್ ಕಡ್ಡಾಯವಾಗಿದೆ’ ಎಂದು ಟೀಕಿಸಿದ್ದಾರೆ.

ಆಪರೇಷನ್ ಕಮಲಕ್ಕೆ ಹಾಕಿದ ಬಂಡವಾಳಕ್ಕೆ ಭರ್ಜರಿ ಲಾಭದ ಫಸಲು ತೆಗೆಯಲಾಗುತ್ತದೆ ಎಂದೂ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.