ಬೆಂಗಳೂರು: ‘ಸಿ.ಟಿ.ರವಿ– ಲೂಟಿ ರವಿ’ ಎಂದು ಹೇಳುವುದಾದರೆ, ‘ಸಿದ್ದರಾಮಯ್ಯ ಪೆದ್ದ, ಇಲ್ಲವೇ ಕಚ್ಚೆಹರುಕ’ ಅನ್ನುವುದರಲ್ಲಿ ತಪ್ಪೇನಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.
ಈ ವಿಚಾರವಾಗಿ ತಿರುಗೇಟು ನೀಡಿರುವ ಕಾಂಗ್ರೆಸ್, ‘ಕಂಡ ಕಂಡಲ್ಲಿ ಕಚ್ಚೆ ಹರಿದುಕೊಂಡವರು ಬಿಜೆಪಿಗರೇ ಅಲ್ಲವೇ ಲೂಟಿ ರವಿ ಅವರೇ, ಬಿಜೆಪಿಯ ಕಚ್ಚೆ ಪುರಾಣಗಳು, ರಾಜ್ಯದ ಹಳ್ಳಿಹಳ್ಳಿಗಳ ಕಟ್ಟೆ ಪುರಾಣಗಳಿಗೆ ಆಹಾರವಾಗಿವೆ’ ಎಂದು ವಾಗ್ದಾಳಿ ನಡೆಸಿದೆ.
‘ಅತಿವೃಷ್ಟಿ ಸಂಕಷ್ಟದಲ್ಲಿರುವ ಜನತೆಗೆ ನೆರವಾಗುವ ಬಗ್ಗೆ ಒಂದಾದರೂ ಮಾತು ನಿಮ್ಮ ಬಾಯಲ್ಲಿ ಬರುವುದೇ?ನೀವೆಷ್ಟೇ ಬಾಯಿ ಹರಿದುಕೊಂಡರೂ ಮತ್ತೆ ಸಂಪುಟದಲ್ಲಿ ಸ್ಥಾನ ಸಿಗದು’ ಎಂದು ಲೇವಡಿ ಮಾಡಿದೆ.
ಇದನ್ನೂ ಓದಿ-ಸಿದ್ದರಾಮಯ್ಯ ಕಚ್ಚೆಹರುಕ ಎನ್ನುವುದರಲ್ಲಿ ತಪ್ಪೇನಿದೆ?: ಸಿ.ಟಿ.ರವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.