ADVERTISEMENT

ಮೂವರಿಗೆ ‘ಅರಿವೇ ಗುರು’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2022, 20:45 IST
Last Updated 29 ಅಕ್ಟೋಬರ್ 2022, 20:45 IST
ನಿರುಪಾಧೀಶ ಸ್ವಾಮೀಜಿ, ಡಾ. ಗೌತಮ ದೇಸಿರಾಜು ಮತ್ತು ಡಾ.ಸಿ.ಆರ್.ಚಂದ್ರಶೇಖರ್ (ಎಡದಿಂದ ಬಲಕ್ಕೆ)
ನಿರುಪಾಧೀಶ ಸ್ವಾಮೀಜಿ, ಡಾ. ಗೌತಮ ದೇಸಿರಾಜು ಮತ್ತು ಡಾ.ಸಿ.ಆರ್.ಚಂದ್ರಶೇಖರ್ (ಎಡದಿಂದ ಬಲಕ್ಕೆ)   

ಧಾರವಾಡ: ‘ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ವಿಶ್ವವಿದ್ಯಾಲಯವು ಇದೇ ಮೊದಲ ಬಾರಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮೂವರಿಗೆ ‘ಅರಿವೇ ಗುರು’ ಪ್ರಶಸ್ತಿ ನೀಡಿ ಗೌರವಿಸಲಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಮರೆಗುದ್ದಿ ಗ್ರಾಮದ ನಿರುಪಾಧೀಶ ಸ್ವಾಮೀಜಿ, ವಿಜ್ಞಾನಿ ಡಾ. ಗೌತಮ ದೇಸಿರಾಜು (ವಿಜ್ಞಾನ), ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ್‌ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕುಲಪತಿ ಪ್ರೊ. ಕೆ.ಬಿ. ಗುಡಸಿ ಶನಿವಾರ ತಿಳಿಸಿದರು.

‘ಪ್ರಶಸ್ತಿ ₹25 ಸಾವಿರ ನಗದು,, ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆ ಒಳಗೊಂಡಿದೆ. ವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ನ. 1ರಂದು ಬೆಳಿಗ್ಗೆ 10ಕ್ಕೆ ನಡೆಯುವ ಸಮಾರಂಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಪ್ರಶಸ್ತಿ ಪ್ರದಾನ ಮಾಡುವರು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.