
ಸಾಂದರ್ಭಿಕ ಚಿತ್ರ
ಪ್ರಜಾವಾಣಿ ಚಿತ್ರ
ರಾಜ್ಯದಾದ್ಯಂತ ದ್ವಿತೀಯ ಪಿಯು ಪರೀಕ್ಷೆ ಫೆ.28ರಿಂದ ಆರಂಭವಾಗಲಿದೆ. ಮೊದಲ ದಿನ ಕನ್ನಡ, ಅರೆಬಿಕ್ ಭಾಷಾ ಪರೀಕ್ಷೆಗಳು ನಡೆಯಲಿವೆ. ಈ ಭಾರಿ 5,174 ಕಾಲೇಜುಗಳ 7.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ವಿಜ್ಞಾನ ವಿಷಯದಲ್ಲಿ 2.92 ಲಕ್ಷ, ವಾಣಿಜ್ಯದಲ್ಲಿ 2.11 ಲಕ್ಷ ಹಾಗೂ ಕಲಾ ವಿಭಾಗದಲ್ಲಿ 1.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. 1,217 ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದ್ದು, ಪ್ರತಿ ಪರೀಕ್ಷಾ ಕೇಂದ್ರವೂ ಸಿಸಿಟಿವಿ ಕ್ಯಾಮೆರಾ ಒಳಗೊಂಡಿದೆ.
ಈ ಎಲ್ಲ ಸಿದ್ಧತೆಯ ನಡುವೆ ಯಾವ ಯಾವ ದಿನ ಯಾವ ವಿಷಯಗಳ ಪರೀಕ್ಷೆ ನಡೆಯಲಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ನಾಳೆ ಫೆ; 28 – ಕನ್ನಡ, ಅರೇಬಿಕ್,
ಮಾ: 2ಕ್ಕೆ – ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ಮನಃಶಾಸ್ತ್ರ
ಮಾ: 3ಕ್ಕೆ – ಇಂಗ್ಲಿಷ್,
ಮಾ: 4ಕ್ಕೆ – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕತ ಮತ್ತು ಫ್ರೆಂಚ್,
ಮಾ: 5ಕ್ಕೆ – ಇತಿಹಾಸ
ಮಾ: 6ಕ್ಕೆ – ಭೌತವಿಜ್ಞಾನ
ಮಾ: 7ಕ್ಕೆ – ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ ಮತ್ತು ಭೂಗರ್ಭಶಾಸ್ತ್ರ
ಮಾ: 9ಕ್ಕೆ – ರಸಾಯನ ವಿಜ್ಞಾನ, ಶಿಕ್ಷಣಶಾಸ್ತ್ರ ಮತ್ತು ಮೂಲ ಗಣಿತ
ಮಾ : 10ಕ್ಕೆ – ಅರ್ಥಶಾಸ್ತ್ರ
ಮಾ : 11ಕ್ಕೆ – ತರ್ಕಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ ಮತ್ತು ಗೃಹ ವಿಜ್ಞಾನ
ಮಾ: 12ಕ್ಕೆ – ಹಿಂದಿ
ಮಾ: 13ಕ್ಕೆ – ರಾಜ್ಯಶಾಸ್ತ್ರ
ಮಾ:14ಕ್ಕೆ – ಲೆಕ್ಕಶಾಸ್ತ್ರ ಮತ್ತು ಗಣಿತ
ಮಾ: 16ಕ್ಕೆ – ಸಮಾಜಶಾಸ್ತ್ರ, ಜೀವಶಾಸ್ತ್ರ ಹಾಗೂ ಗಣಕ ವಿಜ್ಞಾನ
ಮಾ: 17ಕ್ಕೆ – ಹಿಂದುಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಆ್ಯಂಡ್ ವೆಲ್‌ನೆಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.