ADVERTISEMENT

ಐವರಿಗೆ ಶಿಲ್ಪಕಲಾ ಅಕಾಡೆಮಿ ಗೌರವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 20:44 IST
Last Updated 18 ಫೆಬ್ರುವರಿ 2020, 20:44 IST
   

ಬೆಂಗಳೂರು: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ 2019ನೇ ಸಾಲಿನ ಗೌರವ ಪ್ರಶಸ್ತಿಗೆ ಐವರು ಕಲಾವಿದರು ಹಾಗೂ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಬಹುಮಾನಕ್ಕೆ 6 ಮಂದಿಯ ಶಿಲ್ಪ ಕಲಾಕೃತಿಗಳು ಆಯ್ಕೆಯಾಗಿವೆ.

ಗಣೇಶ ಸೀತಾರಾಮ ಆಚಾರಿ (ಸಂಪ್ರದಾಯ ಶಿಲ್ಪ, ಉತ್ತರ ಕನ್ನಡ), ಎಸ್.ಎನ್.ಸೋಮಾಚಾರ್ (ಸಂಪ್ರದಾಯ ಶಿಲ್ಪ, ಮೈಸೂರು), ಚನ್ನವೀರಸ್ವಾಮಿ ಗ.ಹಿಡ್ಕಿಮಠ (ಸಂಪ್ರದಾಯ ಶಿಲ್ಪ, ಧಾರವಾಡ), ಎಸ್.ಜಿ.ನಾಗರಾಜ್ (ಕಾಷ್ಠಶಿಲ್ಪ, ಬೆಂಗಳೂರು) ಹಾಗೂ ವಿಜಯರಾವ್ (ಸಮಕಾಲೀನ ಶಿಲ್ಪ, ಮೈಸೂರು) ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯು ತಲಾ ₹ 50 ಸಾವಿರ ನಗದು ಒಳಗೊಂಡಿದೆ.

ಮೈಸೂರಿನ ರಾಮ್‌ಸನ್ಸ್‌ ಕಲಾ ಪ್ರತಿಷ್ಠಾನದ ಬಹುಮಾನಕ್ಕೆ ಮೈಸೂರು ಜಿಲ್ಲೆಯ ಮಹದೇವಾಚಾರಿ ಅವರ ಕಲ್ಲಿನ ಹೊಯ್ಸಳ ಗಣೇಶ ಕಲಾಕೃತಿ, ದಿ.ಗಂಗಾಧರ್ ಎಂ.ಬಡಿಗೇರ ಬಹುಮಾನಕ್ಕೆ ಶಿವಮೊಗ್ಗ ಜಿಲ್ಲೆಯ ಎಸ್.ಭರತ್ ಅವರ ಮರದ ಮಹಿಷಾಸುರ ಮರ್ದಿನಿ ಕಲಾ
ಕೃತಿ ಹಾಗೂ ಅಜ್ಜಿಹಳ್ಳಿ ಶಿಲ್ಪ ಶಾಸ್ತ್ರಿ ನಾಗೇಂದ್ರಾಚಾರ್ಯ ಸ್ಮಾರಕ ಬಹುಮಾನಕ್ಕೆ ಕಲಬುರ್ಗಿ ಜಿಲ್ಲೆಯ ಈರಣ್ಣ ಕೆ.ವಿಶ್ವಕರ್ಮ ಅವರ ಕಲ್ಲಿನ ಶ್ರೀ ಮೌನೇಶ್ವರರ ಕಲಾಕೃತಿಯು ಆಯ್ಕೆಯಾಗಿದೆ. ಮಾ.9ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.