
ಪ್ರಜಾವಾಣಿ ವಾರ್ತೆ
ನವದೆಹಲಿ: ಕರ್ನಾಟಕದ ರಾಷ್ಟ್ರೀಯ ಹೆದ್ದಾರಿಗಳಲ್ಲಿ 66 ಟೋಲ್ ಪ್ಲಾಜಾಗಳ ಮೂಲಕ 2025–26ನೇ ಸಾಲಿನಲ್ಲಿ ಇಲ್ಲಿಯವರೆಗೆ ₹2,781 ಕೋಟಿ ಶುಲ್ಕ ಸಂಗ್ರಹಿಸಲಾಗಿದೆ ಎಂದು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಸಂಸದರಾದ ಜಿ.ಕುಮಾರ ನಾಯಕ ಹಾಗೂ ದೀಪೆಂದರ್ ಸಿಂಗ್ ಹೂಡಾ ಪ್ರಶ್ನೆಗಳಿಗೆ ಉತ್ತರ ನೀಡಿರುವ ಸಚಿವರು, 10 ವರ್ಷಗಳಲ್ಲಿ ಸಂಗ್ರಹಿಸಿದ ರಸ್ತೆ ಶುಲ್ಕದ ವಿವರಗಳನ್ನು ನೀಡಿದ್ದಾರೆ.
2014-15ರಲ್ಲಿ ₹1,213 ಕೋಟಿ ಸಂಗ್ರಹವಾಗಿದ್ದರೆ, 2024–25ರಲ್ಲಿ ₹4,320 ಕೋಟಿ ಸಂಗ್ರಹಿಸಲಾಗಿದೆ. ಟೋಲ್ ಶುಲ್ಕ ಸಂಗ್ರಹ ಪ್ರಮಾಣ ದಶಕದಲ್ಲೇ ಮೂರು ಪಟ್ಟು ಹೆಚ್ಚಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.