ADVERTISEMENT

ಜೂನ್‌ 29ಕ್ಕೆ ವಿಧಾನ ಪರಿಷತ್ ಚುನಾವಣೆ: 7 ಸ್ಥಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜೂನ್ 2020, 9:03 IST
Last Updated 9 ಜೂನ್ 2020, 9:03 IST
   

ನವದೆಹಲಿ: ಇದೇ 30ರಂದು ಖಾಲಿ ಆಗಲಿರುವ ರಾಜ್ಯ ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ಜೂನ್‌ 29ರಂದು ಚುನಾವಣೆ ನಿಗದಿಯಾಗಿದೆ.

ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆಆಯ್ಕೆಯಾಗಿದ್ದ ನಜೀರ್‌ ಅಹಮ್ಮದ್‌, ಜಯಮ್ಮ, ಎಂ.ಸಿ. ವೇಣುಗೋಪಾಲ್‌, ಎನ್‌.ಎಸ್‌. ಬೋಸರಾಜು, ಎಚ್‌.ಎಂ. ರೇವಣ್ಣ, ಟಿ.ಎ. ಸರವಣ ಹಾಗೂ ಡಿ.ಯು. ಮಲ್ಲಿಕಾರ್ಜುನ ಅವರ ಸೇವಾ ಅವಧಿ ಅಂತ್ಯವಾಗುತ್ತಿದೆ.

ವಿಧಾನಸಭೆ ಸದಸ್ಯರಿಂದ ದ್ವೈವಾರ್ಷಿಕವಾಗಿ ನಡೆಯುವ ಚುನಾವಣೆಯಲ್ಲಿ ಆಯ್ಕೆ ಮಾಡಲಾಗುವ ಈ ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥರ ಪ್ರಸ್ತಾವನೆಯ ಮೇರೆಗೆ ಚುನಾವಣೆ ನಿಗದಿಪಡಿಸಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಂಗಳವಾರ ತಿಳಿಸಿದೆ.

ADVERTISEMENT

ಚುನಾವಣೆ ಪ್ರಕ್ರಿಯೆಯ ವಿವರ

ಜೂನ್‌ 11: ಅಧಿಸೂಚನೆ
ಜೂನ್‌ 18: ನಾಮಪತ್ರ ಸಲ್ಲಿಸಲು ಕಡೆ ದಿನ
ಜೂನ್‌ 19: ನಾಮಪತ್ರ ಪರಿಶೀಲನೆ
ಜೂನ್‌ 22: ನಾಮಪತ್ರ ಹಿಂದೆ ಪಡೆಯಲು ಕಡೆ ದಿನ
ಜೂನ್‌ 29: ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ, ಸಂಜೆ 5ರಿಂದ ಮತಗಳ ಎಣಿಕೆ
ಜೂನ್‌ 30: ಚುನಾವಣೆ ಪ್ರಕ್ರಿಯೆ ಮುಕ್ತಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.