ಬೆಂಗಳೂರು: ಬಿಜೆಪಿಯ ಪಿ.ಎಚ್. ಪೂಜಾರ್, ಎಚ್. ವಿಶ್ವನಾಥ್ ಅವರನ್ನು ಕಾಂಗ್ರೆಸ್‌ಗೆ ಬರುವಂತೆ ಸದನದಲ್ಲೇ ಆಹ್ವಾನ ನೀಡಿದ ಪ್ರಸಂಗ ವಿಧಾನಪರಿಷತ್‌ನಲ್ಲಿ ಗುರುವಾರ ನಡೆಯಿತು.
ವರಾಹಿ ಯೋಜನೆ ಕುರಿತು ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉತ್ತರಿಸುವಾಗ ಪೂಜಾರ್ ಅವರು ಆಡಳಿತ ಪಕ್ಷದ ಆಸನದತ್ತ ತೆರಳಿದರು. ಆಗ ಶಿವಕುಮಾರ್ ‘ಕಾಂಗ್ರೆಸ್‌ಗೆ ಬನ್ನಿ, ಮುಂದಿನ ಸಲ ಟಿಕೆಟ್ ಕೊಡುತ್ತೇವೆ’ ಎಂದು ಆಹ್ವಾನಿಸಿದರು.
ಮೈಸೂರು ಪೊಲೀಸ್ ಸಭಾಭವನ ಕುರಿತು ಎಚ್. ವಿಶ್ವನಾಥ್ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಜಿ. ಪರಮೇಶ್ವರ, ‘ಹಿಂದೆ ಇಬ್ಬರೂ ಸಂಪುಟ ದರ್ಜೆ ಸಚಿವರಾಗಿದ್ದೆವು. ಈಗ ಕಾರಣಾಂತರಗಳಿಂದ ಅಲ್ಲಿ ಕುಳಿತಿದ್ದಾರೆ’ ಎಂದರು. ಆಗ ಕಾಂಗ್ರೆಸ್‌ನ ಐವನ್ ಡಿಸೋಜ ಸೇರಿದಂತೆ ಹಲವರು ‘ದೇಹ ಮಾತ್ರ ಅಲ್ಲಿದೆ. ಮನಸ್ಸು ಇಲ್ಲೇ ಇದೆ. ಪ್ರೀತಿಯಿಂದ ಕರೆದರೆ ಮತ್ತೆ ಇಲ್ಲಿಗೆ ಬರುತ್ತಾರೆ’ ಎಂದು ಆಹ್ವಾನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.