ADVERTISEMENT

ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟಿದರೆ ನಾನೇನು ಮಾಡಲಿ? ಶಾಸಕ ಕರುಣಾಕರ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2022, 11:06 IST
Last Updated 25 ಡಿಸೆಂಬರ್ 2022, 11:06 IST
ಕರುಣಾಕರ ರೆಡ್ಡಿ
ಕರುಣಾಕರ ರೆಡ್ಡಿ   

ಹರಪನಹಳ್ಳಿ (ವಿಜಯನಗರ ಜಿಲ್ಲೆ) : 'ಅವರು ಹೊಸ ಪಕ್ಷ ಕಟ್ಟಿದರೆ ನಾನೇನು ಮಾಡಲಿ'ಗಾಲಿ ಜನಾರ್ದನ ರೆಡ್ಡಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ ಬಳಿಕ ಅವರ ಹಿರಿಯ ಸಹೋದರ, ಶಾಸಕ ಜಿ.ಕರುಣಾಕರ ರೆಡ್ಡಿ ಭಾನುವಾರಪ್ರತಿಕ್ರಿಯಿಸಿದ್ದು ಹೀಗೆ.‌

'ನಾನು 26 ವರ್ಷಗಳಿಂದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತನಾಗಿರುವೆ. ಇದೇ ಉತ್ತರ ನಿಮಗೆ' ಎಂದು ಸುದ್ದಿಗಾರರ ಪ್ರಶ್ನೆಗೆ ಗರಂ ಆಗಿ ಉತ್ತರಿಸಿದರು.

ಜನಾರ್ದನ ರೆಡ್ಡಿ ಅವರನ್ನು ಮನವೊಲಿಸಿ ಪುನಃ ಬಿಜೆಪಿಗೆ ಕರೆತರುವಿರಾ ಎಂದು ಕೇಳಿದ ಪ್ರಶ್ನೆಗೆ, ಅದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದಷ್ಟೇ ಹೇಳಿ, ತರಾತುರಿಯಲ್ಲಿ ಹೂವಿನ ಹಡಗಲಿ ತಾಲ್ಲೂಕು ಸೋಗಿ ಬೆಟ್ಟದ‌ ಮಲ್ಲೇಶ್ವರದಲ್ಲಿ ನಡೆಯುತ್ತಿರುವ ರೈತ ಮೊರ್ಚಾ ಪ್ರಶಿಕ್ಷಣ ವರ್ಗದಲ್ಲಿ ಪಾಲ್ಗೊಳ್ಳಲು ತೆರಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.