ADVERTISEMENT

ಸೀಬರ್ಡ್ ನೌಕಾನೆಲೆಗೆ ನುಸುಳಲು ಯತ್ನಿಸಿದ ವಿದೇಶಿಗನ ಬಂಧನ

ಕಾರವಾರ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 16:47 IST
Last Updated 4 ಅಕ್ಟೋಬರ್ 2019, 16:47 IST
ಸೀಬರ್ಡ್ ನೌಕಾನೆಲೆಯಲ್ಲಿ ಐಎನ್ಎಸ್ ತಿಲಾನ್‌ಚಾಂಗ್- ಸಾಂದರ್ಭಿಕ ಚಿತ್ರ
ಸೀಬರ್ಡ್ ನೌಕಾನೆಲೆಯಲ್ಲಿ ಐಎನ್ಎಸ್ ತಿಲಾನ್‌ಚಾಂಗ್- ಸಾಂದರ್ಭಿಕ ಚಿತ್ರ   

ಕಾರವಾರ: ಇಲ್ಲಿನ ಸೀಬರ್ಡ್ ನೌಕಾನೆಲೆಯನ್ನು ಪ್ರವೇಶಿಸಲು ಪ್ರಯತ್ನಿಸಿದ ಸ್ವೀಡನ್ ಪ್ರಜೆಯನ್ನು ನೌಕಾಪಡೆಯ ಅಧಿಕಾರಿಗಳು ಶುಕ್ರವಾರ ಸಂಜೆ ಬಂಧಿಸಿದ್ದಾರೆ.

ಸ್ವೆನ್ ಅಲೆಕ್ಸಾಂಡರ್ ಸೆಗೆರ್ (27) ಬಂಧಿತ ವ್ಯಕ್ತಿ. ಸೆ.18ಕ್ಕೆ ಭಾರತಕ್ಕೆ ಬಂದಿದ್ದ ಅವರು, ಕಡಲತೀರದಲ್ಲಿ ಯೋಗಾಭ್ಯಾಸ ಮಾಡಲೆಂದು ಗೋವಾಕ್ಕೆ ಭೇಟಿ ನೀಡಿದ್ದರು. ಬಳಿಕ ಕಡಲ ಕಿನಾರೆಯಲ್ಲೇ ನಡೆದುಕೊಂಡು ಬಂದು, ದಕ್ಷಿಣದಲ್ಲಿರುವ ಕಾರವಾರಕ್ಕೆ ಶುಕ್ರವಾರ ತಲುಪಿದರು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.

ಸೀಬರ್ಡ್ ನೌಕಾನೆಲೆಯ ವ್ಯಾಪ್ತಿಯಲ್ಲಿರುವ ಕಾಮತ್ ಬೀಚ್ ಬಳಿ ಹೋಗಲು ಯತ್ನಿಸುತ್ತಿದ್ದಾಗ ನೌಕಾಪಡೆಯ ಸಿಬ್ಬಂದಿ ಪತ್ತೆ ಹಚ್ಚಿದರು. ಕೂಡಲೇ ತ್ವರಿತ ಪ್ರತಿಕ್ರಿಯೆ ತಂಡದವರು ಅವರನ್ನು ಬಂಧಿಸಿದರು. ಈ ಬಗ್ಗೆ ಗುಪ್ತಚರ ದಳ ಮತ್ತು ಕಾರವಾರದ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.