ADVERTISEMENT

ಯೋಧ ಅನುಮಾನಾಸ್ಪದ ಸಾವು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2018, 17:36 IST
Last Updated 4 ಡಿಸೆಂಬರ್ 2018, 17:36 IST
ದುಮಿಂಗ್ ಮೋತೇಶ ಸಿದ್ದಿ
ದುಮಿಂಗ್ ಮೋತೇಶ ಸಿದ್ದಿ   

ಕಾರವಾರ: ಸಮೀಪದ ಮೇಲಿನ ಮಖೇರಿಯ ನಿವಾಸಿ, ಬಿಎಸ್‌ಎಫ್ ಯೋಧದುಮಿಂಗ್ ಮೋತೇಶ ಸಿದ್ದಿ (39) ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ಸೋಮವಾರ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ಕಿರಿಯ ಪುತ್ರನ ಜನ್ಮದಿನ ಹಾಗೂ ಮನೆಯ ಗೃಹ ಪ್ರವೇಶದ ಸಲುವಾಗಿ ಅವರು ರಜೆಯ ಮೇಲೆ ಹೊರಟಿದ್ದರು. ತಾವು ಬರುತ್ತಿರುವುದಾಗಿ ಶನಿವಾರವೇ ಪತ್ನಿ ಲೀನಾ ಅವರಿಗೆ ಕರೆ ಮಾಡಿ ತಿಳಿಸಿದ್ದಅವರು,ರೈಲಿನಲ್ಲಿಸೋಮವಾರ ಹೊರಟು ಬುಧವಾರಮನೆಗೆ ಬರುವುದಾಗಿ ಹೇಳಿದ್ದರು. ಆದರೆ, ಸೋಮವಾರ ಅವರ ಸಂಬಂಧಿಕರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬರು ದುಮಿಂಗ್ ಮೃತಪಟ್ಟಿದ್ದು, ರೈಲಿನ ಕೆಳಗೆ ಶವ ಸಿಕ್ಕಿರುವುದಾಗಿಮಾಹಿತಿ ನೀಡಿದರು.

ಅವರ ಶವವನ್ನು ಮಥುರಾದ ಸೇನಾ ಆಸ್ಪತ್ರೆಯಲ್ಲಿ ಇಡಲಾಗಿದ್ದು, ನಗರಕ್ಕೆ ತರುವಪ್ರಕ್ರಿಯೆ ಜಾರಿಯಲ್ಲಿದೆ. ಅವರ ಕುಟುಂಬದೊಂದಿಗೆ ಸೈನಿಕ ಕಲ್ಯಾಣ ಮಂಡಳಿ ಸಂಪರ್ಕದಲ್ಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.