ADVERTISEMENT

‘ಪ್ರಜಾವಾಣಿ’ಯ ರಾಜೇಶ್ ರೈ ಚಟ್ಲ, ವಿಕ್ರಂ ಕಾಂತಿಕೆರೆಗೆ ಪ್ರಶಸ್ತಿ

ಕಾಸರಗೋಡು ಕನ್ನಡ ಪತ್ರಕರ್ತರ ಸಂಘದ ದತ್ತಿ ‍ಪ್ರಶಸ್ತಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 22:49 IST
Last Updated 21 ಮಾರ್ಚ್ 2023, 22:49 IST
ರಾಜೇಶ್‌ ರೈ ಚಟ್ಲ ಮತ್ತು ವಿಕ್ರಮ್‌ ಕಾಂತಿಕೆರೆ
ರಾಜೇಶ್‌ ರೈ ಚಟ್ಲ ಮತ್ತು ವಿಕ್ರಮ್‌ ಕಾಂತಿಕೆರೆ    

ಬೆಂಗಳೂರು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ದತ್ತಿನಿಧಿ ಪ್ರಶಸ್ತಿಗೆ ‘ಪ್ರಜಾವಾಣಿ’ಯ ಮುಖ್ಯ ವರದಿಗಾರ ರಾಜೇಶ್ ರೈ ಚಟ್ಲ ಮತ್ತು ಹಿರಿಯ ಉಪಸಂಪಾದಕ ವಿಕ್ರಂ ಕ್ರಾಂತಿಕೆರೆ ಸೇರಿ 12 ಜನ ಪತ್ರಕರ್ತರು ಆಯ್ಕೆಯಾಗಿದ್ದಾರೆ.

ಮಂಗಳವಾರ ಇಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹಾಗು ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ ‘ಪ್ರಶಸ್ತಿಯು ತಲಾ ₹10 ಸಾವಿರ, ಪ್ರಶಸ್ತಿ ಫಲಕ ಒಳಗೊಂಡಿದೆ. ಎರ್ನಾಕುಲಂನಲ್ಲಿ ಏಪ್ರಿಲ್‌ 30ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದರು.

‘ಪ್ರಜಾವಾಣಿ’ ಮುಖ್ಯ ವರದಿಗಾರ ರಾಜೇಶ್ ರೈ ಚಟ್ಲ (ಸಿ. ಸೋಮಶೇಖರ್ ಸ್ಥಾಪಿಸಿರುವ ದತ್ತಿ ಪ್ರಶಸ್ತಿ), ಹಿರಿಯ ಉಪಸಂಪಾದಕ ವಿಕ್ರಂ ಕಾಂತಿಕೆರೆ (ಕುಳೂರು ಕನ್ಯಾನ ಸದಾಶಿವಶೆಟ್ಟಿ ಸ್ಥಾಪಿಸಿರುವ ದತ್ತಿ ಪ್ರಶಸ್ತಿ), ಮಂಗಳೂರಿನ ಮನೋಹರ್ ಪ್ರಸಾದ್ (ಎಡ ನೀರು ಕೇಶವಾನಂದ ಭಾರತಿ ಸ್ವಾಮೀಜಿ ಅವರ ನೆನಪಿಗಾಗಿ ಮಠ ಸ್ಥಾಪಿಸಿರುವ ದತ್ತಿ ಪ್ರಶಸ್ತಿ), ಮಂಗಳೂರಿನ ಯು.ಕೆ. ಕುಮಾರನಾಥ್ (ಸಭಾಪತಿ ಬಸವರಾಜ ಹೊರಟ್ಟಿ ಸ್ಥಾಪಿಸಿರುವ ದತ್ತಿ ಪ್ರಶಸ್ತಿ), ಬೆಳಗಾವಿ ಜಿಲ್ಲೆ ಸಂಯುಕ್ತ ಕರ್ನಾಟಕ ಪತ್ರಿಕೆಯ ಕೀರ್ತಿಶೇಖರ್ ಕಾಸರಗೋಡು (ಆರ್ಥಿಕ ತಜ್ಞ ಅಬ್ದುಲ್ಲ ಮಾದುಮೂಲೆ ಸ್ಥಾಪಿಸಿರುವ ದತ್ತಿ ಪ್ರಶಸ್ತಿ), ಪಬ್ಲಿಕ್ ಟಿವಿಯ ಬದ್ರುದ್ದೀನ್ ಕೆ. ಮಾಣಿ (ಕೆ.ವಿ. ಆರ್. ಟ್ಯಾಗೋರ್ ಸ್ಮರಣಾರ್ಥ ದತ್ತಿ ಪ್ರಶಸ್ತಿ), ಹಂಝ ಮಲಾರ್ (ಜೆ.ಆರ್. ಕೆಂಚೇಗೌಡ ಸ್ಥಾಪಿಸಿರುವ ದತ್ತಿ ಪ್ರಶಸ್ತಿ), ಮುಂಬಯಿ ರೋನ್ಸ್ ಬಂಟ್ವಾಳ್ (ನ್ಯಾಯವಾದಿ ಮೊಹಮ್ಮದ್ ಇಬ್ರಾಹಿಂ ಪಾರ ಸ್ಮರಣಾರ್ಥ ದತ್ತಿ ಪ್ರಶಸ್ತಿ), ಕೊಡಗು ಜಿಲ್ಲೆಯ ಅಜ್ಜಮಾಡ ರಮೇಶ್ ಕುಟ್ಟಪ್ಪ (ಪ್ರಭಾಕರ ಕಲ್ಲೂರಾಯ ಬನದಗದ್ದೆ ಸ್ಥಾಪಿಸಿರುವ ದತ್ತಿ ಪ್ರಶಸ್ತಿ), ದಯಾಸಾಗರ್ ಚೌಟ (ಮೊಗರೋಡಿ ಗೋಪಾಲಕೃಷ್ಣ ಮೇಲಾಂಟ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ), ಕಾರ್ಯನಿರತ ಪತ್ರಕರ್ತರ ಸಂಘದ ದತ್ತಿನಿಧಿ ಪ್ರಶಸ್ತಿಗೆ ಕಾಸರಗೋಡಿನ ಪ್ರದೀಪ್ ಕುಮಾರ್ ಬೇಕಲ್ ಮತ್ತು ದೇವದಾಸ ಪಾರೆಕಟ್ಟೆ ಆಯ್ಕೆಯಾಗಿದ್ದಾರೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.