ADVERTISEMENT

‘ಕಾಯಕ ಮಿತ್ರ’ ಆ್ಯಪ್‌ ಬಿಡುಗಡೆ | ನರೆಗಾ ಕೂಲಿ ಬೇಡಿಕೆ ಸರಳೀಕರಣ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2020, 19:47 IST
Last Updated 30 ಏಪ್ರಿಲ್ 2020, 19:47 IST
ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಆ್ಯಪ್‌ ಬಿಡುಗಡೆಗೊಳಿಸಿದರು. ಇಲಾಖೆಯ ಆಯುಕ್ತ ಡಾ.ಅನಿರುದ್ಧ ಶ್ರವಣ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಜಯರಾಂ ಇದ್ದರು
ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಆ್ಯಪ್‌ ಬಿಡುಗಡೆಗೊಳಿಸಿದರು. ಇಲಾಖೆಯ ಆಯುಕ್ತ ಡಾ.ಅನಿರುದ್ಧ ಶ್ರವಣ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಜಯರಾಂ ಇದ್ದರು   

ಬೆಂಗಳೂರು: ನರೇಗಾ ಯೋಜನೆಯಡಿಯಲ್ಲಿ ಕೂಲಿ ಕೆಲಸದ ಬೇಡಿಕೆಯನ್ನು ಸರಳಗೊಳಿಸುವ ‘ಕಾಯಕ ಮಿತ್ರ’ ಆ್ಯಪ್‌ ಅನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಗುರುವಾರ ಇಲ್ಲಿ ಬಿಡುಗಡೆ ಮಾಡಿದರು.

‘ಈ ಆ್ಯಪ್‌ ಮೂಲಕ ಕೂಲಿ ಬೇಡಿಕೆ ಸಲ್ಲಿಸಲು ಲಾಗಿನ್‌ ನೋಂದಣಿಯ ಅಗತ್ಯ ಇಲ್ಲ. 15 ದಿನಗಳ ವರೆಗೆ ಕೂಲಿ ಬೇಡಿಕೆ ಸಲ್ಲಿಸಬಹುದು. ಕೆಲಸ ಕೋರುವ ಪಂಚಾಯಿತಿಯಲ್ಲಿ ಉದ್ಯೋಗ ಚೀಟಿ ಹೊಂದಿರಬೇಕು. ನರೇಗಾ ಯೋಜನೆಯಡಿಯಲ್ಲಿ ಕೃಷಿ ಹೊಂಡ, ಬದು ನಿರ್ಮಾಣ, ತೋಟಗಾರಿಕೆ, ರೇಷ್ಮೆ, ಕೃಷಿ, ಅರಣ್ಯ, ಎರೆಹುಳು ಗೊಬ್ಬರ ತೊಟ್ಟಿ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಬಹುದು’ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

ರೈತರು, ದುರ್ಬಲ ವರ್ಗದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳು ತಮ್ಮ ಜಮೀನಿನಲ್ಲಿ ವೈಯಕ್ತಿಕ ಕಾಮಗಾರಿ ಬೇಡಿಕೆಯನ್ನು ಸಹ ಸಲ್ಲಿಸಲು ಅವಕಾಶ ಇದೆ ಎಂದರು.ಈ ಆ್ಯಪ್‌ ಅನ್ನು rdpr.kar.nic.in ಅಥವಾ end2endmgnrega.co.in ಇಲ್ಲಿಂದ ಡೌನ್‌ಲೋಡ್ ಮಾಡಬಹುದು. ಕೂಲಿಕಾರರ ಬಳಿ ಸ್ಮಾರ್ಟ್‌ ಮೊಬೈಲ್‌ ಇಲ್ಲದಿದ್ದರೆ ಇಂತಹ ಫೋನ್‌ ಇರುವ ವ್ಯಕ್ತಿಗಳ ಮೂಲಕ ಈ ಅ್ಯಪ್‌ನಲ್ಲಿ ಕೂಲಿ ಬೇಡಿಕೆ ಸಲ್ಲಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.