
ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಸಿಇಟಿ–2026ಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಫೆ.16 ಕೊನೆಯ ದಿನ.
ಅರ್ಜಿ ಸಲ್ಲಿಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೆಬ್‌ಸೈಟ್‌ನಲ್ಲಿ ಲಿಂಕ್ ಬಿಡುಗಡೆ ಮಾಡಿದ್ದು, ಅರ್ಜಿ ಶುಲ್ಕ ಪಾವತಿಗೆ ಫೆ.18 ಕೊನೆ ದಿನ. ಅಭ್ಯರ್ಥಿಗಳು ಪೂರಕ ದಾಖಲೆಗಳನ್ನು ಸಿದ್ಧ ಮಾಡಿಟ್ಟುಕೊಂಡು ಭರ್ತಿ ಮಾಡಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಹೇಳಿದ್ದಾರೆ.
ಈ ಸಾಲಿನ ಅರ್ಜಿಯು ಆಧಾರ್ ಆಧಾರಿತ ಅರ್ಜಿಯಾಗಿದೆ. ಅದರಲ್ಲಿನ ಹೆಸರು ಇತ್ಯಾದಿ ಅಂಶಗಳು ಸ್ವಯಂಚಾಲಿತವಾಗಿ ಅರ್ಜಿಯಲ್ಲಿ ಬಂದು ಕೂರಲಿವೆ. ಇ-ಮೇಲ್ ಮೂಲಕವೂ ಒಟಿಪಿ ಜತೆಗೆ ಪ್ರತಿ ಹಂತದ ಮಾಹಿತಿಯನ್ನು ತಿಳಿಸುವ ವಿಶೇಷ ವ್ಯವಸ್ಥೆ ಮಾಡಲಾಗಿದೆ. ವಾಟ್ಸ್‌ಆ್ಯಪ್ ಮೂಲಕವೂ ಸಂದೇಶಗಳು ರವಾನೆಯಾಗಲಿವೆ. ಎಸ್‌ಎಟಿಎಸ್ ಮತ್ತು ಆರ್‌ಡಿ ಸಂಖ್ಯೆ ದಾಖಲಿಸಿದ ನಂತರ ಆನ್‌ಲೈನ್‌ನಲ್ಲಿ ಪರಿಶೀಲನೆಗೆ ಒಳಪಡುವ ಅಭ್ಯರ್ಥಿಗಳು ನೇರವಾಗಿ ಅರ್ಜಿಯನ್ನು ಮುದ್ರಿಸಿಕೊಳ್ಳಬಹುದು. ಆದರೆ, ಆನ್‌ಲೈನ್‌ನಲ್ಲಿ ಪರಿಶೀಲನೆ ಆಗದವರು ಕಾಲೇಜು ಹಂತದಲ್ಲೇ ಪರಿಶೀಲನೆ ಮಾಡಿಸಿ ಅರ್ಜಿ ಮುದ್ರಿಸಿಕೊಳ್ಳಬಹುದು ಎಂದು ಅವರು ವಿವರಿಸಿದ್ದಾರೆ. ರಾಜ್ಯದ ಎಲ್ಲೆಡೆ ಏ.23 ಮತ್ತು 24ರಂದು ಸಿಇಟಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.