ADVERTISEMENT

ಕೆಇಎ ವೆಬ್‌ಸೈಟ್‌ನಲ್ಲಿ ಕನ್ನಡ ಬಳಕೆ ವೇಳೆ 'ವ್ಯಾಯಾಮ'ದ ಅಧ್ವಾನ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 13:35 IST
Last Updated 4 ನವೆಂಬರ್ 2022, 13:35 IST
‘before exercising any choice’ ಕನ್ನಡಾನುವಾದವನ್ನು ‘ವ್ಯಾಯಾಮ’ ವೆಂದು ಅನುವಾದಿಸಲಾಗಿದೆ
‘before exercising any choice’ ಕನ್ನಡಾನುವಾದವನ್ನು ‘ವ್ಯಾಯಾಮ’ ವೆಂದು ಅನುವಾದಿಸಲಾಗಿದೆ   

ಬೆಂಗಳೂರು:ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಕನ್ನಡ ಬಳಕೆಯ ಅಧ್ವಾನ ಮುಂದುವರಿದಿದೆ.

ಸಿಇಟಿ ಪ್ರಕ್ರಿಯೆ ಕುರಿತು ಪ್ರಾಧಿಕಾರ ತನ್ನ ವೆಬ್‌ಸೈಟ್‌https://cetonline.karnataka.gov.in/keaನ ‘ಇತ್ತೀಚಿನ ಸುದ್ದಿ’ಯಲ್ಲಿಶುಕ್ರವಾರ ಮಾಹಿತಿ ಅಪ್‌ಲೋಡ್‌ ಮಾಡಿದೆ. ಅದರಲ್ಲಿ ಹೀಗಿದೆ.

‘ಯುಜಿ ಸಿಇಟಿ–2022 ಚಾಯ್ಸ್ ಪ್ರವೇಶ ಪೋರ್ಟಲ್ ಅನ್ನು ಸಕ್ರಿಯಗೊಳಿಸಲಾಗಿದೆ. ವಿದ್ಯಾರ್ಥಿಗಳು ಯಾವುದೇ ಆಯ್ಕೆಯನ್ನು ’ವ್ಯಾಯಾಮ’ ಮಾಡುವ ಮೊದಲು ಆಯ್ಕೆಗಳ ಕುರಿತು ಪ್ರಕಟಿಸಲಾದ ಮಾಹಿತಿಯನ್ನು ಪರಿಶೀಲಿಸಲು ಸಲಹೆ ನೀಡಲಾಗುತ್ತದೆ. ಮೀಸಲಾತಿಗೆ ಬೆಂಬಲವಾಗಿ ಸಾಕಷ್ಟು ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗದ ವಿದ್ಯಾರ್ಥಿಗಳ ಸೀಟುಗಳನ್ನು ರದ್ದುಗೊಳಿಸಲಾಗುತ್ತದೆ ಮತ್ತು ಎರಡನೇ ಸುತ್ತಿನಲ್ಲಿ ಹಂಚಿಕೆಗೆ ಒಳಪಡಿಸಲಾಗುತ್ತದೆ ಎಂಬುದನ್ನು ಅಭ್ಯರ್ಥಿಗಳು ಗಮನಿಸಲು ಸೂಚಿಸಲಾಗಿದೆ.’

ADVERTISEMENT

‘before exercising any choice’ ಕನ್ನಡಾನುವಾದವನ್ನು ‘ವ್ಯಾಯಾಮ’ ವೆಂದು ಅನುವಾದಿಸುವ ಮೂಲಕ ಪ್ರಾಧಿಕಾರ ನಗೆಪಾಟಿಲಿಗೆ ಈಡಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.