ADVERTISEMENT

ಕೋವಿಡ್–19 | ಕಂಟೈನ್ಮೆಂಟ್ ಝೋನ್‌ಗಳಿಗೆ ‘ನಂದಿನಿ ತೃಪ್ತಿ’ ಹಾಲು: ಕೆಎಂಎಫ್‌

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 13:37 IST
Last Updated 22 ಏಪ್ರಿಲ್ 2020, 13:37 IST
   

ಬೆಳಗಾವಿ: ‘ಜಿಲ್ಲೆಯಲ್ಲಿ ಕೋವಿಡ್-19 ಕಾಣಿಸಿಕೊಂಡಿದ್ದರಿಂದ ಕಂಟೈನ್ಮೆಂಟ್‌ ಝೋನ್‌ಗಳೆಂದು ಘೋಷಿಸಲಾದ ಪ್ರದೇಶಗಳಿಗೆ ಫ್ಲೆಕ್ಸಿ ಪ್ಯಾಕ್‌ಗಳಲ್ಲಿ ‘ನಂದಿನಿ ತೃಪ್ತಿ’ ಹಾಲನ್ನು ಪೂರೈಸಲಾಗುವುದು’ ಎಂದು ಕೆಎಂಎಫ್‌ ತಿಳಿಸಿದೆ.

‘ಈ ಪ್ರದೇಶಗಳಿಗೆ ಬೆಳಗಾವಿ ಹಾಲು ಒಕ್ಕೂಟದ ವತಿಯಿಂದ ನಂದಿನಿ ಹಾಲು ಸರಬರಾಜಿಗೆ ಅಡಚಣೆ ಉಂಟಾಗುತ್ತಿದೆ. ಹೀಗಾಗಿ, ದೀರ್ಘ ಬಾಳಿಕೆ ಹಾಗೂ ಸಾಧಾರಣ ವಾತಾವರಣದಲ್ಲಿ ಇಡಬಹುದಾದ ‘ತೃಪ್ತಿ’ ಹಾಲನ್ನು ಪೂರೈಸಲಾಗುವುದು. 180 ಮಿ.ಲೀ. ₹ 10 ಮತ್ತು 450 ಮಿ.ಲೀ.ಗೆ ₹ 23 ದರದಲ್ಲಿ ಆಕಳು ಹಾಲು ಮತ್ತು ಇದೇ ಪ್ಯಾಕ್‌ನಲ್ಲಿ 500 ಮಿ.ಲೀ. ಎಮ್ಮೆ ಹಾಲಿಗೆ₹ 30 ದರ ನಿಗದಿಪಡಿಸಲಾಗಿದೆ.ಈ ಹಾಲು ನಿತ್ಯ ಸರಬರಾಜಾಗುವ ಹಾಲಿಗಿಂತಲೂ ಉತ್ಕೃಷ್ಟವಾಗಿದೆ. 137 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ಕಾಯಿಸಿ ತಕ್ಷಣವೆ ತಂಪುಗೊಳಿಸಿ ಫ್ಲೆಕ್ಸಿ ಪ್ಯಾಕ್ ಮಾಡಲಾಗುತ್ತದೆ. ಈ ಪ್ಯಾಕ್‌ 5 ಹಂತಗಳ ಸುರಕ್ಷಾಪದರ ಹೊಂದಿದೆ’ ಎಂದು ಮಾಹಿತಿ ನೀಡಿದೆ.

‘ಈ ಹಾಲು 3 ತಿಂಗಳ ವರೆಗೆ ಹಾಳಾಗುವುದಿಲ್ಲ. ರೆಫ್ರಿಜಿರೇಟರ್ ಅವಶ್ಯವಿಲ್ಲ. ಜನರು ವಾರ ಅಥವಾ ತಿಂಗಳಿಗೆ ಬೇಕಾಗುವಷ್ಟನ್ನು ಒಂದೇ ಬಾರಿಗೆ ಖರೀದಿಸಿ ಇಟ್ಟುಕೊಳ್ಳಬಹುದಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.