ಸಂಗೀತ ಕಾರ್ಯಕ್ರಮ (ಸಾಂಕೇತಿಕ ಚಿತ್ರ)
ನವದೆಹಲಿ: ಕಿರಣ್ ನಾಡರ್ ಮ್ಯೂಸಿಯಂ ಆಫ್ ಆರ್ಟ್ (ಕೆಎನ್‌ಎಂಎ) ಆಶ್ರಯದಲ್ಲಿ ಎರಡನೇ ಆವೃತ್ತಿಯ ಸಂಗೀತ ಉತ್ಸವ ಇದೇ 9ರಿಂದ 12ರ ವರೆಗೆ ಇಲ್ಲಿನ ಸುಂದರ್ ನರ್ಸರಿಯಲ್ಲಿ ನಡೆಯಲಿದೆ.
ಸಂಗೀತ ಉತ್ಸವದ ವಿಷಯ ‘ವೈವಿಧ್ಯತೆಯ ಧ್ವನಿಗಳು’ ಆಗಿದ್ದು, ದೇಶದ ಹಿರಿಯ ಹಾಗೂ ಉದಯೋನ್ಮುಖ ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ. ಪ್ರಖ್ಯಾತ ಕರ್ನಾಟಕ ಶಾಸ್ತ್ರೀಯ ಗಾಯಕ ಟಿ.ಎಂ. ಕೃಷ್ಣ ಅವರು ಉತ್ಸವದ ಕ್ಯುರೇಟರ್ ಆಗಿರುವರು.
9ರಂದು ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿರುವ ‘ಲಾವಣಿ ಕೆ ರಂಗ್’ ಮಹಾರಾಷ್ಟ್ರದ ಸಾಂಪ್ರದಾಯಿಕ ಲಾವಣಿ ಕಲಾವಿದರ ಜೀವನದ ಬಗ್ಗೆ ಬೆಳಕು ಚೆಲ್ಲಲಿದೆ. 11ರಂದು ಸಂಜೆ 6.30ಕ್ಕೆ ಗಾಯಕಿ ಎಂ.ಡಿ.ಪಲ್ಲವಿ ಹಾಗೂ ಬಿಂದುಮಾಲಿನಿ ಕಾರ್ಯಕ್ರಮ ನೀಡಲಿದ್ದಾರೆ. 12ರಂದು ಬೆಳಿಗ್ಗೆ 7.30ಕ್ಕೆ ವೀಣಾವಾದಕಿ ಜಯಂತಿ ಕುಮರೇಶನ್ ಅವರ ಬೈಠಕ್ ಇರಲಿದೆ. ಸಂಜೆ 5.30ಕ್ಕೆ ಬೆಂಗಳೂರಿನ ಜಂಗಮ ಕಲೆಕ್ಟಿವ್ ಕಲಾವಿದರು ತಾಳವಾದ್ಯ ಪ್ರದರ್ಶನ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.