ADVERTISEMENT

ಒಳ ಮೀಸಲು ಜಾರಿಗೆ ಸಹಮತ: ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2023, 22:00 IST
Last Updated 19 ಫೆಬ್ರುವರಿ 2023, 22:00 IST
   

ಮಡಿಕೇರಿ: ‘ಕೊಡವ ಭಾಷೆ ಮಾತನಾಡುವ ಎಲ್ಲ ಸಮುದಾಯಗಳ ಕುರಿತು ಕುಲಶಾಸ್ತ್ರೀಯ ಅಧ್ಯಯನ ನಡೆಸಲು ₹ 25 ಲಕ್ಷ ಬಿಡುಗಡೆ ಮಾಡ ಲಾಗುವುದು ಹಾಗೂ ಒಳ ಮೀಸಲು ಜಾರಿಗೆ ಸರ್ಕಾರದ ಸಹಮತವಿದೆ’ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಕೊಡವ 18 ಭಾಷಿಗ ಜನಾಂಗದ ಕೊಡವ ಭಾಷಿಗ ಸಮುದಾಯಗಳ ಕೂಟವು ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲ ಗ್ರಾಮದ ಕೊಡಗು ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ‘ಒತ್ತೋರ್ಮೆ ಕೂಟ’ದಲ್ಲಿ ಮಾತನಾಡಿದರು.

‘ಕುಲಶಾಸ್ತ್ರೀಯ ಅಧ್ಯಯನದ ಹೊಣೆಯನ್ನು ಮೈಸೂರು ಬುಡಕಟ್ಟು ಸಂಶೋಧನಾ ಸಂಸ್ಥೆ ಅಥವಾ ಹಂಪಿ‌ ವಿಶ್ವವಿದ್ಯಾಲಯಕ್ಕೆ ವಹಿಸಲಾಗುವುದು. ತೀರಾ ಕಷ್ಟದಲ್ಲಿ ಇರುವ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.