ಕೆ.ಎಸ್. ಈಶ್ವರಪ್ಪ
ಬೆಂಗಳೂರು: ಶಾಸಕ ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರೂ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎಂದು ಹೇಳಿದ್ದ ಮಾಜಿ ಶಾಸಕ ಕೆ.ಎಸ್ ಈಶ್ವರಪ್ಪ ಅವರನ್ನು ಕಾಂಗ್ರೆಸ್ ತಮಾಷೆ ಮಾಡಿದೆ.
ಈಗ ಬಿಜೆಪಿ ಕಾರ್ಯಕ್ರಮದಲ್ಲಿ ನಿಮಗೊಂದು ಕುರ್ಚಿಯೂ ಕೂಡ ಇಲ್ಲ ಎಂದು ಕುಹಕವಾಡಿದೆ.
ಈ ಬಗ್ಗೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ‘ರಿಟೈರ್ಡ್ ರಾಜಾಕಾರಣಿ ಈಶ್ವರಪ್ಪ ಅವರೇ, ಇದೆಂತಹ ದುಸ್ಥಿತಿ ನಿಮ್ಮದು? ಬಿಜೆಪಿ ನಿಮ್ಮ ಮಂತ್ರಿಗಿರಿ ಕಿತ್ತುಕೊಂಡಿತು. ನಿಮ್ಮನ್ನು ಸಿಎಂ ಮಾಡದೆ ವಂಚಿಸಿತು. ಕೊನೆಗೆ ಟಿಕೆಟ್ ನಿರಾಕರಿಸಿ ರಾಜಕೀಯ ಭವಿಷ್ಯವನ್ನೂ ಕಸಿಯಿತು’ ಎಂದು ಬರೆದುಕೊಂಡಿದೆ.
ಈಗ ಯಡಿಯೂರಪ್ಪನವರ ಮಗ ನಿಮ್ಮ ಮಗನ ರಾಜಕೀಯ ಭವಿಷ್ಯಕ್ಕೂ ಕಲ್ಲು ಹಾಕುವುದು ಖಚಿತ. ಬಿಜೆಪಿ ಕಾರ್ಯಕ್ರಮದಲ್ಲಿ ನಿಮಗೊಂದು ಕುರ್ಚಿಯೂ ಇಲ್ಲ. ನಿಮ್ಮ ವ್ಯರ್ಥಪ್ರಲಾಪದ ಬಗ್ಗೆ ನಮಗೆ ಮರುಕವಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.